ಸರಗಳ್ಳತನ ಹಾಗೂ ದ್ವಿಚಕ್ರ ವಾಹನ ಎಗರಿಸುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರ ಬಂಧನ: 14 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ದ್ವಿಚಕ್ರ ವಾಹನ ವಶ
ಮಂಗಳೂರು: ದ.ಕ ಹಾಗೂ ಉಡುಪಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಸರಗಳ್ಳತನ ಹಾಗೂ ದ್ವಿಚಕ್ರ ವಾಹನ ಎಗರಿಸುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಮಂಗಳೂರು ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು,ಬಂಧಿತರಿಂದ 14 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಕೃಷ್ಣಾಪುರ ಮೂಲದ ಹಬೀಬ್ ಹಸನ್ ಮತ್ತು ಉಳ್ಳಾಲದ ಮೊಹಮ್ಮದ್ ಫೈಸಲ್ ಎಂಬವರು ಬಂಧಿತ ಆರೋಪಿಗಳು. ಇವರಿಬ್ಬರು ಈ ಹಿಂದೆ ಮಂಗಳೂರು ಕಾರಾಗೃಹ ಹಾಗೂ ಕಾರವಾರ ಜೈಲಿನಲ್ಲಿದ್ದು ಸಜೆ ಅನುಭವಿಸಿದ್ದರು. ಇಬ್ಬರ ಬಂಧನದ ನಂತರ 12 ಪ್ರಕರಣಗಳ ಪೈಕಿ […]


