ಜೀವನಶೈಲಿ
ಹೆಜಮಾಡಿಯಲ್ಲಿ ಪತ್ರಕರ್ತ ಹರೀಶ್ ಹೆಜಮಾಡಿ ಅವರಿಗೆ ಹುಟ್ಟೂರ ಸಮ್ಮಾನ
ಉಡುಪಿ: ಕಾಪು ತಾ| ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ ಅವರಿಗೆ ಹುಟ್ಟೂರ ಸಮ್ಮಾನ ಕಾರ್ಯಕ್ರಮವು ಹೆಜಮಾಡಿಯ ಹಿ. ಪ್ರಾ. ಶಾಲಾ ಸಭಾಭವನದಲ್ಲಿ ನಡೆಯಿತು. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕರಾದ ವೇ| ಮೂ| ಕಮಲಾದೇವಿ ಪ್ರಸಾದ ಆಸ್ರಣ್ಣರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಆಶೀರ್ವಚನ ನೀಡಿದರು. ಈ ಸಮಾರಂಭದಲ್ಲಿಯೂ ಧರ್ಮ ಸಮನ್ವಯತೆ ಮೆರೆದಿದೆ. ಹರೀಶ ನಾಮದಲ್ಲಿಯೇ ಸಮನ್ವತೆಯ ಸಂಕೇತವಾದ ಹರಿ ಹಾಗೂ ಈಶರಿದ್ದಾರೆ. ಪತ್ರಿಕೆಗಳು ಏನನ್ನಾದರೂ ಸಾಧಿಸಬಹುದಾಗಿದೆ. ಪತ್ರಿಕೆಗಳು ದೂರಿದಾಗ ನಮ್ಮಲ್ಲಿನ ಸಾಕ್ಷೀಪ್ರಜ್ಞೆ ಜಾಗೃತವಾಗುತ್ತದೆ. […]

