Tag: Karavali

ಕರಾವಳಿ ಜೀವನಶೈಲಿ ವಿಡಿಯೋ

ಉಚ್ಚಿಲ ಶ್ರೀ ಸಾರ್ವಜನಿಕ ಗಣೇಶೋತ್ಸವದ ವಿಸರ್ಜನೆ ಸಂಪನ್ನ

ಉಚ್ಚಿಲ ಶ್ರೀ ಸಾರ್ವಜನಿಕ ಗಣೇಶೋತ್ಸವದ ವಿಸರ್ಜನೆ ಸಂಪನ್ನ. ಉಡುಪಿ\ಉಚ್ಚಿಲ: 36ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಸಮಿತಿ ಉಚ್ಚಿಲ ಇದರ ಆರಾಧನೆಯ ಗಣೇಶನ ವಿಗ್ರಹದ ವಿಸರ್ಜನೆಯು ಶುಕ್ರವಾರ ರಾತ್ರಿ    ಉಚ್ಚಿಲ ಬದ್ದಿಂಜೆ ಮಠದ  ಕೆರೆಯಲ್ಲಿ ಜಲಸ್ಥಂಭನ ನಡೆಯಿತು.  ಸಂಜೆ ಮಹಾಪೂಜೆ ನೆರವೇರಿದ ಬಳಿಕ ಶೋಭಾ ಯಾತ್ರೆಯ ಪ್ರಾರಂಭಗೊಂಡಿತು. ಶೋಭಾ ಯಾತ್ರೆಯಲ್ಲಿ ಮೆರವಣಿಗೆಯು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಿಂದ ಮೊದಲ್ಗೊಂಡು ಎರ್ಮಾಳು ಜನಾರ್ಧನ ದೇವಸ್ಥಾನದವರೆಗೆ ಸಾಗಿ ಅಲ್ಲಿಂದ ಉಚ್ಚಿಲ ಬದ್ದಿಂಜೆ ಮಠದ ಕೆರೆಯಲ್ಲಿ ಜಲಸ್ಥಂಭನ ಗೊಳಿಸಲಾಯಿತು. ಶೋಭಾ ಯಾತ್ರೆಯು ಚೆಂಡೆ, ವಾದ್ಯ, […]

ಕರಾವಳಿ

ಕಾಪು ಪುರಸಭೆಯಲ್ಲಿ ಪೌರ ಕಾರ್ಮಿಕ ದಿನಾಚರಣೆ,  ವಿವಿಧ ಸ್ಪರ್ಧೆ, ಬಹುಮಾನ ವಿತರಣೆ, ಸಮ್ಮಾನ

  ಕಾಪು ಪುರಸಭೆಯಲ್ಲಿ ಪೌರ ಕಾರ್ಮಿಕ ದಿನಾಚರಣೆ,   ವಿವಿಧ ಸ್ಪರ್ಧೆ, ಬಹುಮಾನ ವಿತರಣೆ, ಸಮ್ಮಾನ ಉಡುಪಿ\ಕಾಪು:  ಪೌರ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಕಾಪು ಪುರಸಭೆಯಲ್ಲಿ ಶನಿವಾರ ಬೆಳಿಗ್ಗೆ ಪೌರಕಾರ್ಮಿಕರಿಗಾಗಿ ವಿವಿಧ ಮನೋರಂಜನೆ ಮತ್ತು ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿ, ಬಹುಮಾನ ವಿತರಿಸಲಾಯಿತು. ಬಳಿಕ ಎಲ್ಲ ಪೌರ ಕಾರ್ಮಿಕರನ್ನು ಸಮ್ಮಾನಿಸಿ, ಗೌರವಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ಪುರಸಭೆ ಮುಖ್ಯಾಧಿಕಾರಿ ಸಂತೋಷ್ ಕುಮಾರ್‌ಎಸ್.ಡಿ. ವಹಿಸಿದ್ದರು. ಅವರು ಈ ಸಂದರ್ಭ ಮಾತನಾಡಿ,  ಪೌರ ಕಾರ್ಮಿಕರ ನಿಸ್ವಾರ್ಥ ಮತ್ತು ಪ್ರಾಮಾಣಿಕ ಸೇವೆಯಿಂದಾಗಿ ಕಾಪು ಪುರಸಭೆಗೆ […]

ಕರಾವಳಿ ವಿಡಿಯೋ

ಶಿರ್ವ ಸಾರ್ವಜನಿಕ ಗಣೇಶೋತ್ಸವ ಸಮಿತಿ ಆರಾಧನೆಯ ಸಾರ್ವಜನಿಕ ಗಣೇಶನ ವಿಸರ್ಜನೆ.

ಶಿರ್ವ ಸಾರ್ವಜನಿಕ ಗಣೇಶೋತ್ಸವ ಸಮಿತಿ ಆರಾಧನೆಯ ಸಾರ್ವಜನಿಕ ಗಣೇಶನ ವಿಸರ್ಜನೆ.  ಶಿರ್ವ: ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಶಿರ್ವ ಇದರ ಆಯೋಜನೆಯ 43ನೇ ವರ್ಷದ ಗಣೇಶನ ವಿಗ್ರಹವನ್ನು ಗುರುವಾರ ಸಂಜೆ ಶಿರ್ವ ಮಹಾಲಸ ನಾರಾಯಣಿ ದೇಗುಲದ ಪುಷ್ಕರಣಿಯಲ್ಲಿ ಗೋವಿಂದನ ನಾಮಸ್ಮರಣೆಯೊಂದಿಗೆ ವಿಸರ್ಜಿಸಲಾಯಿತು.  ಮೂರು ದಿನಗಳ ಕಾಲ ಶಿರ್ವ ಬಸ್ ನಿಲ್ದಾಣದ ಬಳಿಯ ವೇದಿಕೆಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪೂಜಿಸಲಾಯಿತು.  ಭಜನಾ ತಂಡ, ಕುಣಿತ ಭಜನೆ, ವಾದ್ಯ, ಬ್ಯಾಂಡು, ಡೋಲು ಸಹಿತ ಟ್ಯಾಬ್ಲೋಗಳು ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದೆ. ಈ […]

ಕರಾವಳಿ

ಹೆಜಮಾಡಿ ಮೀನುಗಾರರ ಪ್ರಾಥಮಿಕ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಗಣ್ಯರಿಗೆ ಸನ್ಮಾನ

ಹೆಜಮಾಡಿ ಮೀನುಗಾರರ ಪ್ರಾಥಮಿಕ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಗಣ್ಯರಿಗೆ ಸನ್ಮಾನ ಉಡುಪಿ\ಹೆಜಮಾಡಿ:  ಹೆಜಮಾಡಿ ಮೀನುಗಾರರ ಪ್ರಾಥಮಿಕ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಸದಸ್ಯರಾಗಿದ್ದು, ವಿವಿಧ ಸಂಸ್ಥೆಗಳಲ್ಲಿ ಉನ್ನತ ಸ್ಥಾನ ಅಲಂಕರಿಸಿದ ಹೆಜಮಾಡಿ ಗ್ರಾಪಂ ಅಧ್ಯಕ್ಷರಾದ ರೇಶ್ಮಾ ಏ. ಮೆಂಡನ್, ಉಚ್ಚಿಲ ಹದಿನಾರುಪಟ್ನ ಮೊಗವೀರ ಸಭಾದ ಅಧ್ಯಕ್ಷರಾದ ಎಚ್. ರವಿ ಕುಂದರ್ ಮತ್ತು ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಹರೀಶ್ ಕುಮಾರ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಮುಖ್ಯ ಅತಿಥಿ […]

ಅಪರಾಧ ವಿಡಿಯೋ

  ಮತ್ತೊಂದು ಪ್ರಕರಣ ಬೆಳಕಿಗೆ: ಬಟ್ಟೆ ಅಂಗಡಿ ಹಾಕಿಕೊಡುವುದಾಗಿ ಐದು ಲಕ್ಷ ವಂಚಿಸಿದ ಚೈತ್ರಾ ಕುಂದಾಪುರ

ಮತ್ತೊಂದು ಪ್ರಕರಣ ಬೆಳಕಿಗೆ: ಬಟ್ಟೆ ಅಂಗಡಿ ಹಾಕಿಕೊಡುವುದಾಗಿ ಐದು ಲಕ್ಷ ವಂಚಿಸಿದ ಚೈತ್ರಾ ಕುಂದಾಪುರ   ಉಡುಪಿ: ಉದ್ಯಮಿ ಗೋವಿಂದ ಬಾಬು ಪೂಜಾರಿಯವರಿಗೆ ಬಿಜೆಪಿ ಎಮ್ ಎಲ್ ಎ ಟಿಕೇಟ್ ನೀಡುವುದಾಗಿ ಕೋಟ್ಯಾಂತರ ರೂಪಾಯಿ ವಂಚಿಸಿದ ಪ್ರಕರಣದ ಬೆನ್ನಲ್ಲೇ ಚೈತ್ರಾ ಕುಂದಾಪುರ ಇನ್ನೋರ್ವ ವ್ಯಕ್ತಿಗೆ ವಂಚಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.  ಕೋಟದ ವ್ಯಕ್ತಿಯೋರ್ವರಿಗೆ ಬಟ್ಟೆ ಅಂಗಡಿಯನ್ನು ಹಾಕಿಕೊಡುವುದಾಗಿ ನಂಬಿಸಿ ಅವರಿಂದ ಸುಮಾರು ಐದು ಲಕ್ಷ ರೂಪಾಯಿಯನ್ನು ಪಡೆದು ಬಟ್ಟೆ ಅಂಗಡಿಯನ್ನು ಹಾಕಿ ಕೊಡದೆ, ಬಳಿಕ ಹಣವನ್ನೂ ಮರಳಿಸದೆ […]

ಅಪರಾಧ

ಕಟಪಾಡಿಯ ಮಣಿಪುರದಲ್ಲಿ ಪತಿ ಮೈಮೇಲೆ ಮೆಣಸಿನ ಹುಡಿ ಮಿಶ್ರಿತ ಬಿಸಿ ನೀರು ಎರಚಿದ ಪತ್ನಿ

ಕಟಪಾಡಿಯ ಮಣಿಪುರದಲ್ಲಿ ಪತಿ ಮೈಮೇಲೆ ಮೆಣಸಿನ ಹುಡಿ ಮಿಶ್ರಿತ ಬಿಸಿ ನೀರು ಎರಚಿದ ಪತ್ನಿ ಕಾಪು\ಉಡುಪಿ:  ಕ್ಷುಲ್ಲಕ ಕಾರಣಕ್ಕಾಗಿ ಪತ್ನಿ ತನ್ನ ಪತಿಯ ಮೈಮೇಲೆ ಮೆಣಸಿನ ಹುಡಿ ಮಿಶ್ರಿತ ಬಿಸಿ ನೀರನ್ನು ಎರಚಿ ಗಂಭೀರವಾಗಿ ಗಾಯಗೊಳಿಸಿರುವ ಅಮಾನವೀಯ ಘಟನೆ  ಕಟಪಾಡಿ ಸಮೀಪದ ಮಣಿಪುರ ಗ್ರಾಮದ ಗುಜ್ಜಿ ಎಂಬಲ್ಲಿ ನಡೆದಿದೆ.  ಮುಖ, ದೇಹ, ಎಡಗೈ, ಎದೆ, ಬೆನ್ನು ಬಲಕೈ ಸುಟ್ಟು ಹೋಗಿ ಗಂಭೀರವಾಗಿ ಗಾಯಗೊಂಡಿರುವ ಇನ್ನಾ ಮಡ್ಮಣ್ ನಿವಾಸಿ ಮುಹಮ್ಮದ್ ಆಸೀಫ್(22) ಎಂಬವರು ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ […]

ಅಪರಾಧ

ಗೋವಿಂದ ಬಾಬು ಪೂಜಾರಿ ವಿರುದ್ಧ ಇಡಿಗೆ ಪತ್ರ ಬರೆದಿದ್ಲು ಚೈತ್ರಾ ಕುಂದಾಪುರ

ಗೋವಿಂದ ಬಾಬು ಪೂಜಾರಿ ವಿರುದ್ಧ ಇಡಿಗೆ ಪತ್ರ ಬರೆದಿದ್ಲು ಚೈತ್ರಾ ಕುಂದಾಪುರ ಬೆಂಗಳೂರು: ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಂದ ಐದು ಕೋಟಿ ರೂಪಾಯಿ ಹಣ ಪಡೆದ ಬಳಿಕ ಟಿಕೆಟ್ ಹಂಚಿಕೆಯಾಗದ ಹಿನ್ನೆಲೆಯಲ್ಲಿ ವಂಚಿಸಿದ್ದ ಹಣ ವಾಪಾಸ್ ಕೇಳಿದ್ದ ಗೋವಿಂದ ಬಾಬು ಪೂಜಾರಿ ಅವರಿಗೆ ಖೆಡ್ಡಾ ತೋಡಲು ಚೈತ್ರಾ ಕುಂದಾಪುರ ಮುಂದಾಗಿದ್ದ ವಿಚಾರ ಬಯಲಾಗಿದೆ.  ಗೋವಿಂದ ಬಾಬು ಪೂಜಾರಿ ಅವರು ಹಣ ಮರಳಿ ಕೇಳುವ ಇಲ್ಲವೇ ಪೋಲಿಸ್ ದೂರು ದಾಖಲಿಸುವ ಬಗ್ಗೆ ಮಾತುಕತೆ ಆಡುತ್ತಿದ್ದಾಗಲೇ ಈ‌ ಕಿಲಾಡಿ […]

ಅಪರಾಧ

ಉದ್ಯಮಿಗೆ ವಿಧಾನಸಭೆ ಟಿಕೆಟ್ ಕೊಡಿಸುವ ಪ್ರಕರಣ:  ಅಭಿನವ ಹಾಲಶ್ರೀ ಯವರಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ

ಉದ್ಯಮಿಗೆ ವಿಧಾನಸಭೆ ಟಿಕೆಟ್ ಕೊಡಿಸುವ ಪ್ರಕರಣ:  ಅಭಿನವ ಹಾಲಶ್ರೀ ಯವರಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ  ಬೆಂಗಳೂರು : ಉದ್ಯಮಿಗೆ ವಿಧಾನಸಭೆ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 3ನೇ ಆರೋಪಿ ಅಭಿನವ ಹಾಲಶ್ರೀ ಕೊರ್ಟ್ ಮೊರೆ ಹೋಗಿದ್ದಾರೆ.  ಬಂಧನದ ಭೀತಿಯಿಂದ ತಲೆಮರೆಸಿಕೊಂಡಿರುವ ಅಭಿನವ ಹಾಲಶ್ರೀ ಅಜ್ಞಾತ ಸ್ಥಳದಿಂದಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಅಭಿನವ ಹಾಲಶ್ರೀ ಪರ ವಕೀಲರು 57ನೇ CCH ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.  MLA ಟಿಕೆಟ್ ಡೀಲಿಂಗ್ ಹಿಂದೆ ಇರೋ […]

ಅಪರಾಧ ವಿಡಿಯೋ

 ಬಟ್ಟೆ ತೊಳೆಯುವ ಸಾಬೂನಿನ ನೊರೆ ಬಾಯಿಗೆ ಹಾಕಿ ಮೂರ್ಚೆ ಹೋದಂತೆ ನಟಿಸಿದ ಚೈತ್ರಾ – ಸಿಸಿಬಿ ಪೋಲಿಸರ ಮುಂದೆ ನಾಟಕ

ಬಟ್ಟೆ ತೊಳೆಯುವ ಸಾಬೂನಿನ ನೊರೆ ಬಾಯಿಗೆ ಹಾಕಿ ಮೂರ್ಚೆ ಹೋದಂತೆ ನಟಿಸಿದ ಚೈತ್ರಾ – ಸಿಸಿಬಿ ಪೋಲಿಸರ ಮುಂದೆ ನಾಟಕ ಬೆಂಗಳೂರು: ಬಹುಕೋಟಿ ವಂಚನೆಯ ಬೃಹನ್ನಾಟಕ ಸೂತ್ರಧಾರಿ ಚೈತ್ರಾ ಕುಂದಾಪುರ ಸಿಸಿಬಿ ಪೋಲಿಸರ ಮುಂದೆ ಮತ್ತೊಂದು ನಾಟಕ ಮಾಡಿರುವ ಅನುಮಾನ ಮೂಡಿದೆ‌.   ಇಂದು ಮುಂಜಾನೆ ಮೂರ್ಚೆ ಬಂದಂತೆ ನಟಿಸಿದ್ದ ಚೈತ್ರಾ ಬಾಯಲ್ಲಿ ನೊರೆ ಬರಲು ಬಟ್ಟೆ ತೊಳೆಯುವ ಸಾಬೂನಿನ ನೊರೆ ಹಾಕಿಕೊಂಡ ಶಂಕೆ ವ್ಯಕ್ತವಾಗಿದೆ.  ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಸಿಬಿ ಕಚೇರಿಯಲ್ಲಿರುವ ವಾಶ್​ ರೂಮ್ ಅನ್ನು ಪೊಲೀಸರು […]

ಪ್ರಚಲಿತ

ದುರಾಸೆಯೇ ಭ್ರಷ್ಟಾಚಾರದ ಮೂಲ: ನ್ಯಾ| ಸಂತೋಷ್ ಹೆಗ್ಡೆ 

ದುರಾಸೆಯೇ ಭ್ರಷ್ಟಾಚಾರದ ಮೂಲ: ನ್ಯಾ| ಸಂತೋಷ್ ಹೆಗ್ಡೆ  ಬಂಟ್ವಾಳ : ದುರಾಸೆಯೇ ಭ್ರಷ್ಟಾಚಾರದ ಮೂಲವಾಗಿದ್ದು, ದುರಾಸೆಗೆ ಯಾವುದೇ ಔಷಧಿ ಇಲ್ಲ ಎಂದು ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೇಳಿದರು. ಜಮೀಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕ ಹಾಗೂ ತುಂಬೆ ಪದವಿಪೂರ್ವ ಕಾಲೇಜು ಇದರ ಆಶ್ರಯದಲ್ಲಿ ಸೋಮವಾರ ಕಾಲೇಜು ಸಭಾಂಗಣದಲ್ಲಿ “ಭ್ರಷ್ಟಾಚಾರ ಮುಕ್ತ ಸಮಾಜ, ಯುವ ಜನತೆಯ ಪಾತ್ರ” ಎಂಬ ವಿಷಯದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ  ಭಾಗವಹಿಸಿ ಅವರು ಮಾತನಾಡಿದರು.  ಶ್ರೀಮಂತಿಕೆ, ಅಧಿಕಾರವನ್ನು ಪೂಜಿಸುವ ಈಗಿನ ಸಮಾಜದಲ್ಲಿ ಪ್ರಾಮಾಣಿಕತೆಗೆ ಬೆಲೆ ಇಲ್ಲದಂತಾಗಿದೆ. ಕ್ರಿಮಿನಲ್ […]

eMedia Kannada  @2025. All Rights Reserved.