• Home  
  • ಉಚ್ಚಿಲ ಶ್ರೀ ಸಾರ್ವಜನಿಕ ಗಣೇಶೋತ್ಸವದ ವಿಸರ್ಜನೆ ಸಂಪನ್ನ
- ಕರಾವಳಿ - ಜೀವನಶೈಲಿ - ವಿಡಿಯೋ

ಉಚ್ಚಿಲ ಶ್ರೀ ಸಾರ್ವಜನಿಕ ಗಣೇಶೋತ್ಸವದ ವಿಸರ್ಜನೆ ಸಂಪನ್ನ

Share: ಉಚ್ಚಿಲ ಶ್ರೀ ಸಾರ್ವಜನಿಕ ಗಣೇಶೋತ್ಸವದ ವಿಸರ್ಜನೆ ಸಂಪನ್ನ. ಉಡುಪಿ\ಉಚ್ಚಿಲ: 36ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಸಮಿತಿ ಉಚ್ಚಿಲ ಇದರ ಆರಾಧನೆಯ ಗಣೇಶನ ವಿಗ್ರಹದ ವಿಸರ್ಜನೆಯು ಶುಕ್ರವಾರ ರಾತ್ರಿ    ಉಚ್ಚಿಲ ಬದ್ದಿಂಜೆ ಮಠದ  ಕೆರೆಯಲ್ಲಿ ಜಲಸ್ಥಂಭನ ನಡೆಯಿತು.  ಸಂಜೆ ಮಹಾಪೂಜೆ ನೆರವೇರಿದ ಬಳಿಕ ಶೋಭಾ ಯಾತ್ರೆಯ ಪ್ರಾರಂಭಗೊಂಡಿತು. ಶೋಭಾ ಯಾತ್ರೆಯಲ್ಲಿ ಮೆರವಣಿಗೆಯು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಿಂದ ಮೊದಲ್ಗೊಂಡು ಎರ್ಮಾಳು ಜನಾರ್ಧನ ದೇವಸ್ಥಾನದವರೆಗೆ ಸಾಗಿ ಅಲ್ಲಿಂದ ಉಚ್ಚಿಲ ಬದ್ದಿಂಜೆ ಮಠದ ಕೆರೆಯಲ್ಲಿ ಜಲಸ್ಥಂಭನ ಗೊಳಿಸಲಾಯಿತು. ಶೋಭಾ ಯಾತ್ರೆಯು ಚೆಂಡೆ, […]

ಉಚ್ಚಿಲ ಶ್ರೀ ಸಾರ್ವಜನಿಕ ಗಣೇಶೋತ್ಸವದ ವಿಸರ್ಜನೆ ಸಂಪನ್ನ.

ಉಡುಪಿ\ಉಚ್ಚಿಲ: 36ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಸಮಿತಿ ಉಚ್ಚಿಲ ಇದರ ಆರಾಧನೆಯ ಗಣೇಶನ ವಿಗ್ರಹದ ವಿಸರ್ಜನೆಯು ಶುಕ್ರವಾರ ರಾತ್ರಿ    ಉಚ್ಚಿಲ ಬದ್ದಿಂಜೆ ಮಠದ  ಕೆರೆಯಲ್ಲಿ ಜಲಸ್ಥಂಭನ ನಡೆಯಿತು.

 ಸಂಜೆ ಮಹಾಪೂಜೆ ನೆರವೇರಿದ ಬಳಿಕ ಶೋಭಾ ಯಾತ್ರೆಯ ಪ್ರಾರಂಭಗೊಂಡಿತು.

ಶೋಭಾ ಯಾತ್ರೆಯಲ್ಲಿ ಮೆರವಣಿಗೆಯು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಿಂದ ಮೊದಲ್ಗೊಂಡು ಎರ್ಮಾಳು ಜನಾರ್ಧನ ದೇವಸ್ಥಾನದವರೆಗೆ ಸಾಗಿ ಅಲ್ಲಿಂದ ಉಚ್ಚಿಲ ಬದ್ದಿಂಜೆ ಮಠದ ಕೆರೆಯಲ್ಲಿ ಜಲಸ್ಥಂಭನ ಗೊಳಿಸಲಾಯಿತು.

ಶೋಭಾ ಯಾತ್ರೆಯು ಚೆಂಡೆ, ವಾದ್ಯ, ಬ್ಯಾಂಡು ಕೀಲು ಕುದುರೆ, ಡಿಜೆ ಸೌಂಡು ಹಾಗೂ ಸ್ಥಬ್ಧ – ಚಿತ್ರಗಳನ್ನು ಒಳಗೊಂಡಿತ್ತು.

ಉಚ್ಚಇಲ ಶ್ರೀ ಮಹಾಲಕ್ಷ್ಮೀ ದೇಗುಲದ ಪ್ರಧಾನ ಅರ್ಚಕ ವೇ.ಮೂ ಕೆವಿ ರಾಘವೇಂದ್ರ ಉಪಾಧ್ಯಾಯ, ವೇ.ಮೂ ಕೆವಿ ವಿಷ್ಣುಮೂರ್ತಿ ಉಪಾಧ್ಯಾಯರವರು ಪೂಜಾ ವಿಧಿ ವಿಧಾನ ಪೂರೈಸಿದರು.

ಈ ಸಂದರ್ಭ ಉಚ್ಚಿಲ ಸಾರ್ವಜನಿಕ ಗಣೇಶೋತ್ಸವದ ಸಮಿತಿಯ ಅಧ್ಯಕ್ಷ ಕಿಶೋರ್‌ ಶೆಟ್ಟಿ ಎರ್ಮಾಳು, ಕಾರ್ಯದರ್ಶಿ ಮಹೇಶ್‌ ಉಚ್ಚಿಲ, ಕೋಶಾಧಿಕಾರಿ ವಿಷ್ಣುಮೂರ್ತಿ ಉಪಾಧ್ಯಾಯ, ಜತೆ ಕಾರ್ಯದರ್ಶಿ ಅಶೋಕ್‌ ಆರ್‌ ಕರ್ಕೇರಾ, ಉಪಾಧ್ಯಕ್ಷರುಗಳಾದ ಬಾಲಕೃಷ್ಣ ಪೂಜಾರಿ ಉಚ್ಚಿಲ, ಕೆ. ವಿಶ್ವನಾಥ್‌, ಕೆ. ವಾಸುದೇವ ರಾವ್‌, ದಿನೇಶ್‌ ಎರ್ಮಾಳು, ಕರುಣಾಕರ ಕೋಟ್ಯಾನ್‌, ನೂರಾರು ಸಂಖ್ಯೆಯಲ್ಲಿ  ಭಕ್ತಾಧಿಗಳು ಶೋಭಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.