• Home  
  • ಶಿರ್ವ : ಕಾಣಿಕೆ ಡಬ್ಬಿ ಕಳವಿಗೆ ಯತ್ನ- ಯುವಕರಿಬ್ಬರನ್ನು ಪೊಲೀಸರಿಗೊಪ್ಪಿಸಿದ ಸ್ಥಳೀಯರು
- ಅಪರಾಧ

ಶಿರ್ವ : ಕಾಣಿಕೆ ಡಬ್ಬಿ ಕಳವಿಗೆ ಯತ್ನ- ಯುವಕರಿಬ್ಬರನ್ನು ಪೊಲೀಸರಿಗೊಪ್ಪಿಸಿದ ಸ್ಥಳೀಯರು

Share: ಶಿರ್ವ ಪಂಜಿಮಾರು ಶ್ರೀ ವ್ಯಾಘ್ರ ಚಾಮುಂಡಿ ಸನ್ನಿಧಾನದ ಕಾಣಿಕೆ ಡಬ್ಬಿ ಕಳವು ಮಾಡಿದ ಇಬ್ಬರು ಯುವಕರನ್ನು ಸ್ಥಳೀಯ ತಂಡದವರು ಹಿಡಿದು ಶಿರ್ವ ಪೊಲೀಸರಿಗೊಪ್ಪಿಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಅಪರಿಚಿತ ಯುವಕರಿಬ್ಬರು ಕಾಣಿಕೆ ಡಬ್ಬಿಯನ್ನು ಕಳವು ಮಾಡಿ ಸಮೀಪದ ಕಾಡಿನಲ್ಲಿ ಡಬ್ಬಿ ಒಡೆಯಲು ಪ್ರಯತ್ನಿಸುತ್ತಿದ್ದರು. ಶಬ್ದ ಕೇಳಿದ ಪರಿಸರದ ನಾಗರಿಕರು ಪಂಜಿಮಾರಿನ ಯುವಕರಿಗೆ ಮಾಹಿತಿ ನೀಡಿದ್ದರು. ತಕ್ಷಣ ಯುವಕರ ತಂಡ ಸ್ಥಳಕ್ಕಾಗಮಿಸಿದಾಗ ಓರ್ವ ಬಸ್ಸಿನಲ್ಲಿ ಪರಾರಿಯಾಗಿದ್ದ. ಬೆನ್ನಟ್ಟಿದ ಯುವಕರು ಆತನನ್ನು ಬಂಟಕಲ್ಲಿನಲ್ಲಿ ಇಳಿಸಿ ಕರೆತಂದಿದ್ದಾರೆ. ಮತ್ತೋರ್ವ […]

ಶಿರ್ವ ಪಂಜಿಮಾರು ಶ್ರೀ ವ್ಯಾಘ್ರ ಚಾಮುಂಡಿ ಸನ್ನಿಧಾನದ ಕಾಣಿಕೆ ಡಬ್ಬಿ ಕಳವು ಮಾಡಿದ ಇಬ್ಬರು ಯುವಕರನ್ನು ಸ್ಥಳೀಯ ತಂಡದವರು ಹಿಡಿದು ಶಿರ್ವ ಪೊಲೀಸರಿಗೊಪ್ಪಿಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಅಪರಿಚಿತ ಯುವಕರಿಬ್ಬರು ಕಾಣಿಕೆ ಡಬ್ಬಿಯನ್ನು ಕಳವು ಮಾಡಿ ಸಮೀಪದ ಕಾಡಿನಲ್ಲಿ ಡಬ್ಬಿ ಒಡೆಯಲು ಪ್ರಯತ್ನಿಸುತ್ತಿದ್ದರು.

ಶಬ್ದ ಕೇಳಿದ ಪರಿಸರದ ನಾಗರಿಕರು ಪಂಜಿಮಾರಿನ ಯುವಕರಿಗೆ ಮಾಹಿತಿ ನೀಡಿದ್ದರು. ತಕ್ಷಣ ಯುವಕರ ತಂಡ ಸ್ಥಳಕ್ಕಾಗಮಿಸಿದಾಗ ಓರ್ವ ಬಸ್ಸಿನಲ್ಲಿ ಪರಾರಿಯಾಗಿದ್ದ. ಬೆನ್ನಟ್ಟಿದ ಯುವಕರು ಆತನನ್ನು ಬಂಟಕಲ್ಲಿನಲ್ಲಿ ಇಳಿಸಿ ಕರೆತಂದಿದ್ದಾರೆ.

ಮತ್ತೋರ್ವ ಕಾಡಿನಲ್ಲಿ ಅವಿತುಕೊಂಡಿದ್ದು ಯುವಕರ ತಂಡ ಪತ್ತೆ ಹಚ್ಚಿ ಶಿರ್ವ ಪೊಲೀಸರಿಗೆ ಒಪ್ಪಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.