Tag: Karavali

ಕರಾವಳಿ ರಾಜಕೀಯ

ನುಡಿದಂತೆ ನಡೆದ ಕಾಂಗ್ರೆಸ್ ಸರಕಾರ – ರಮೀಜ್ ಹುಸೇನ್

ಕಾಪು: ಈ ಆರ್ಥಿಕ ವರ್ಷದಲ್ಲಿ ಘೋಷಣೆ ಮಾಡಿರುವ ಎಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡಿ ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಯ ಮಾತನ್ನು ಈಡೇರಿಸಿದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರಿಗೆ ಅಭಿನಂದನೆಗಳು ಎಂದು ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೇನ್ ತಿಳಿಸಿದ್ದಾರೆ. ಗ್ಯಾರಂಟಿ ಜಾರಿಗಳನ್ನು ಯಾವುದೇ ಜಾತಿ, ಧರ್ಮಗಳ ತಾರತಮ್ಯ ಇಲ್ಲದೇ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದಲ್ಲದೇ ಸಾಮಾನ್ಯ ಜನರಿಗೆ ಆಸರೆಯನ್ನು ನೀಡಿದೆ.  ಜನ ಸಾಮಾನ್ಯರು ಬೆಲೆ ಏರಿಕೆ ಹಾಗು ಯುವ ಜನತೆ ನಿರುದ್ಯೋಗದ ಸಮಸ್ಯೆಯಿಂದ ತತ್ತರಿಸಿರುವ‌ ಈ ಸಂದರ್ಭದಲ್ಲಿ ಜನರ ಬದುಕಿಗೆ […]

ಅಪರಾಧ ವ್ಯವಹಾರ

ಕೊಲ್ಲೂರಿನಲ್ಲಿ ಕಲುಷಿತಗೊಂಡ ನೀರು – ಪರಿಹಾರಕ್ಕಾಗಿ ಆಗ್ರಹ

ಕೊಲ್ಲೂರಿನಲ್ಲಿ ಕಲುಷಿತಗೊಂಡ ನೀರು – ಪರಿಹಾರಕ್ಕಾಗಿ ಆಗ್ರಹ ಕೊಲ್ಲೂರು: ಕೋಟ್ಯಾಂತರ ರೂಪಾಯಿ ವ್ಯಯಿಸಿದ ಕೊಲ್ಲೂರು ಒಳಚರಂಡಿ ಹಾಗೂ ಕುಡಿಯುವ ನೀರಿನ ಸರಬರಾಜು ಯೋಜನೆಯ ಕಳಪೆ ಕಾಮಗಾರಿಯ ಪರಿಣಾಮ ಸುತ್ತಮುತ್ತಲಿನ ಗ್ರಾಮಸ್ಥರು ಕುಡಿಯಲು ಬಳಸುವ ನೀರು ಕಲುಷಿತಗೊಂಡು ಕುಡಿಯುವ ನೀರಿಗೆ ಹಾಹಾಕಾರವೆದ್ದಿದೆ. ಯು. ಜಿ. ಡಿ ಕಳಪೆ ಕಾಮಗಾರಿಯಿಂದಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಸಮೀಪದ ಅಗ್ನಿ ತೀರ್ಥವೂ ಕಲುಷಿತಗೊಂಡಿದೆ. ಪರಿಣಾಮವಾಗಿ ಸ್ಥಳೀಯ ವಾಸಿಗಳ ಕುಡಿಯುವ ನೀರಿನ ಬಾವಿಗಳಿಗೂ ಕಲುಷಿತ ನೀರು ನುಗ್ಗಿದ್ದು, ಬಾವಿಗಳ ನೀರು ನಿಷ್ಪ್ರಯೋಜಕವಾಗಿದೆ. ಈ […]

ಅಪರಾಧ ಜೀವನಶೈಲಿ ವ್ಯವಹಾರ

ಮಣಿಪಾಲ: ಗಾಂಜಾ ಸೇವನೆ- ನಾಲ್ವರು ವಶಕ್ಕೆ

ಮಣಿಪಾಲ: ಗಾಂಜಾ ಸೇವನೆಗೆ ಸಂಬಂಧಿಸಿ ನಾಲ್ವರನ್ನು ಮಣಿಪಾಲ ಪೊಲೀಸರು ವಿದ್ಯಾರತ್ನ ನಗರದ ವಿದ್ಯಾರತ್ನ ರೆಸಿಡೆನ್ಸಿ ಬಳಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಓಡಿಸ್ಸಾದ ಸಾತ್ವಿಕ್ ಸಾಹೂ(21), ಅಸ್ಸಾಮಿನ ರಿಷಿರಾಜ್ ಮೊಮಿನ್(21),   ಅಮನ್ ಗೊಗೈ(21), ಬಿಹಾರದ ಅಮನ್ ಕುಮಾರ್(21) ಎಂಬುವವರನ್ನು ವಶಕ್ಕೆ ಪಡೆದು ಮಣಿಪಾಲ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು, ವರದಿಯಲ್ಲಿ ಇವರೆಲ್ಲರು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಣಿಪಾಲ: ಗಾಂಜಾ […]

ಕರಾವಳಿ ರಾಜಕೀಯ

ಗ್ಯಾರಂಟಿ ಅನುಷ್ಠಾನಕ್ಕೆ ಕುಂದಾಪುರ ಕಾಂಗ್ರೆಸ್ ಹರ್ಷ

ಕುಂದಾಪುರ: ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಐದು ಗ್ಯಾರೆಂಟಿಗಳನ್ನು ಅನುಷ್ಠಾನ ಘೋಷಣೆ ಮಾಡಿರುವುದನ್ನು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸ್ವಾಗತಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿಯವರು, ಬಿಜೆಪಿ ಮುಖಂಡರು ಗ್ಯಾರಂಟಿ ಬಗ್ಗೆ ಟೀಕೆ ಮತ್ತು ಲೇವಡಿ ಮಾಡಿ ಗ್ಯಾರಂಟಿಗೆ ವಾರಂಟಿ ಇಲ್ಲ ಮತ್ತು ಗ್ಯಾರಂಟಿ ಪುಸ್ತಕದೊಳಗಿನ ನವಿಲಗರಿ ಎಂದಿದ್ದರು. ಆದರೆ ಕಾಂಗ್ರೆಸ್ ನಡೆದಂತೆ ನುಡಿಯುವ ಪಕ್ಷ ಎಂದಿದ್ದಾರೆ. ಪ್ರಥಮ ಸಂಪುಟ ಸಭೆಯಲ್ಲಿ […]

ಕರಾವಳಿ ಜೀವನಶೈಲಿ ವ್ಯವಹಾರ

ಉಡುಪಿಯಲ್ಲಿ ರಾಷ್ಟ್ರೀಯ ಲೋಕ್ ಅದಾಲತ್

ಉಡುಪಿ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಇವರ ವತಿಯಿಂದ ರಾಜ್ಯಾದ್ಯಂತ 2023 ರ ಜುಲೈ 8 ರಂದು ರಾಷ್ಟ್ರೀಯ ಲೋಕ್ ಅದಾಲತ್/ ಮೆಗಾ ಲೋಕ್ ಅದಾಲತ್‌ನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಈ ಮೂಲಕ ತಕ್ಷಣ ಪರಿಹಾರ ಕಂಡುಕೊಳ್ಳಬಹುದಾಗಿದೆ.  ಅದಾಲತ್‌ನಲ್ಲಿ ಸಾರ್ವಜನಿಕರು ರಾಜಿಯಾಗಬಲ್ಲ ಅಪರಾಧಿಕ ಪ್ರಕರಣ, ಬ್ಯಾಂಕ್ ಸಾಲ ವಸೂಲಾತಿ ಪ್ರಕರಣ, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣ, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ಜಿಲ್ಲಾ […]

ರಾಜಕೀಯ ವ್ಯವಹಾರ

ಗ್ಯಾರಂಟಿ ಯೋಜನೆಯಲ್ಲಿ ಬಿಜೆಪಿ ರಾಜಕೀಯ – ಕೃಷ್ಣಮೂರ್ತಿ ಆಚಾರ್ಯ

ಉಡುಪಿ: ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಬಗ್ಗೆ ರಾಜಕೀಯ ಮಾಡುತ್ತಿರುವ ಬಿಜೆಪಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ ಅವರು ಹೇಳಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಅವರು, ಕುಯಿಲಾಡಿ ಸುರೇಶ್ ನಾಯಕ್ ಅವರು ಬಸ್ ಮಾಲಕರ ಸಂಘದ ಜಿಲ್ಲಾಧ್ಯಕ್ಷ, ಅದೇ ರೀತಿ ಉಡುಪಿಯ ಬಿಜೆಪಿ ಜಿಲ್ಲಾಧ್ಯಕ್ಷರೂ ಕೂಡ ಆಗಿರುತ್ತಾರೆ. ಆದರೂ ಕೊರೋನಾ ಸಮಯದಲ್ಲಿ ಬಸ್‌ನ ಟಿಕೆಟ್ ದರ ಏರಿಕೆಯನ್ನು ಮಾಡಿದ್ದರು. ಅವರದ್ದೇ ಸರಕಾರ ಇದ್ದರೂ ಬೆಲೆ ಏರಿಕೆ ಕಡಿಮೆ ಮಾಡಿಲ್ಲ. ಟೋಲ್ […]

ಕರಾವಳಿ ತಂತ್ರಜ್ಞಾನ ವ್ಯವಹಾರ

ಜೂನ್ 7 ರಂದು ಅಂಚೆ ಅದಾಲತ್

ಉಡುಪಿ: ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಜೂನ್ 7 ರಂದು ಅಂಚೆ ಅದಾಲತ್ ನಡೆಯಲಿದ್ದು, ಅಂಚೆ ಗ್ರಾಹಕರು ತಮ್ಮ ದೂರು ಮತ್ತು ಸಲಹೆಗಳನ್ನು ಜೂನ್ 5 ರೊಳಗೆ ಅಧೀಕ್ಷಕರ ಕಚೇರಿಗೆ ಸಲ್ಲಿಸಬಹುದು ಅಥವಾ ಅಂಚೆ ಅದಾಲತ್ ನಡೆಯುವ ದಿನದಂದು ಹಾಜರಿದ್ದು ಚರ್ಚಿಸಿ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಎಂದು ಉಡುಪಿ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರಾವಳಿ ದೇಶ-ವಿದೇಶ ರಾಜಕೀಯ

ಖಾಲಿ ಹುದ್ದೆಗೆ ಶೀಘ್ರ ನೇಮಕಾತಿ: ಸಚಿವ ಮಧು ಬಂಗಾರಪ್ಪ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆಯಾಗುವುದು ಖಚಿತ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.  ಮುಂದಿನ ವರ್ಷ ಈ ರೀತಿ ಸಮಸ್ಯೆ ಆಗದಂತೆ ಈಗಿನಿಂದಲೇ ಕ್ರಮ ಕೈಗೊಳ್ಳುತ್ತೇವೆ. ಪಠ್ಯ ಪರಿಷ್ಕರಣೆ ಸಂಬಂಧ ಸೋಮವಾರ ಸಂಜೆ ಬಂದು ಕಾಣುವಂತೆ ಸಿಎಂ ಹೇಳಿದ್ದಾರೆ. ಈ ಬಗ್ಗೆ ಸಾಹಿತಿಗಳು-ತಜ್ಞರ ಜೊತೆಯೂ ಚರ್ಚೆಯಾಗಿದೆ. ಸಿಎಂ ನೇತೃತ್ವದಲ್ಲಿಯೇ ಪರಿಷ್ಕರಣೆಗೆ ಮುಂದಾಗಲಾಗುವುದು ಎಂದಿದ್ದಾರೆ. ನನ್ನ ಇಲಾಖೆಯಲ್ಲಿ ಶಿಕ್ಷಕರ ಕೊರತೆಯಿದೆ. ಶಿಕ್ಷಕರ ಕೌನ್ಸಲಿಂಗ್ ಆರಂಭವಾಗಿದೆ, ಅಲ್ಲದೆ ಖಾಲಿ ಇರುವ ಹುದ್ದೆಗೆ ಶೀಘ್ರ ನೇಮಕಾತಿ ನಡೆಯಲಿದೆ ಎಂದು […]

ಕರಾವಳಿ ವ್ಯವಹಾರ

ಕುಮಟಾದಲ್ಲಿ ಈಡಿಗ ಬಿಲ್ಲವ ನಾಮಧಾರಿ ಚಿಂತನ ಸಭೆ

ಕುಮಟಾ: ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠ ಮತ್ತು ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ನಾಮಧಾರಿ ಸಭಾಭವನದಲ್ಲಿ ನಡೆಯಿತು. ಈಡಿಗ ಬಿಲ್ಲವ ನಾಮಧಾರಿ ಚಿಂತನ ಸಭೆ ಶನಿವಾರ ಸಂಜೆ ಪ್ರಾರಂಭ ಗೊಂಡಿತು. ಪರಮಪೂಜ್ಯ ಡಾಕ್ಟರ್ ಶ್ರೀ ಪ್ರಣವಾನಂದ ಸ್ವಾಮೀಜಿ ರವರು  ಹಳದಿ ಬಾವುಟವನ್ನು ಧ್ವಜಾರೋಹಣ ಮಾಡಿದರು.  ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಪೂಜಾರಿ ಉದ್ಘಾಟನೆ ನೆರವೇರಿಸಿದರು.  ಸಭೆಯಲ್ಲಿ ನಾಮಧಾರಿ ಸಮಾಜದ ನಾಯಕರುಗಳು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಎರಡು ದಿನಗಳ ಕಾಲದ ಈಡಿಗ […]

ಅಪರಾಧ ಕರಾವಳಿ

ಕಾರ್ಕಳ: ನಲ್ಲೂರಿನಲ್ಲಿ ಗೊಬ್ಬರ ಸಾಗಿಸುತ್ತಿದ್ದ ಟೆಂಪೋ ಮರಕ್ಕೆ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ.

ಕಾರ್ಕಳ ತಾಲೂಕಿನ ನಲ್ಲೂರು ಪರಪ್ಪಾಡಿ ಎಂಬಲ್ಲಿ ಇಂದ ಬೆಳಿಗ್ಗೆ ಮೀನಿನ ಗೊಬ್ಬರ ಸಾಗಿಸುತ್ತಿದ್ದ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ಪರಿಣಾಮ  ಟೆಂಪೋ ಮುಗುಚಿ ಬಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಲ್ಪೆಯಿಂದ ಬೆಂಗಳೂರಿಗೆ ಮೀನಿನ ಗೊಬ್ಬರ ಸಾಗಿಸುತ್ತಿದ್ದ ಲಾರಿ ಪಾಜೆಗುಡ್ಡೆಯ ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಟೆಂಪೋದಲ್ಲಿದ್ದ ಗೊಬ್ಬರ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.  ಟೆಂಪೋದಲ್ಲಿ ಚಾಲಕ ಸೇರಿದಂತೆ ಮೂವರು ಪ್ರಯಾಣಿಸುತ್ತಿದ್ದು ಆ ಪೈಕಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ […]

eMedia Kannada  @2025. All Rights Reserved.