Tag: Kaup police

ಅಪರಾಧ

ಉದ್ಯಾವರ : ಪಡುಕೆರೆ ಪಾಪನಾಷಿನಿ‌ ನದಿಯಲ್ಲಿ ಅಪರಿಚಿತ ಶವ ಪತ್ತೆ: ಗುರುತು ಪತ್ತೆಗೆ ಪೊಲೀಸ್‌ ಸೂಚನೆ (Udyavara : Unidetified body found in Padukare Papanashini river, Police notice for Identification)

ಉದ್ಯಾವರ : ಪಡುಕೆರೆ ಪಾಪನಾಷಿನಿ‌ ನದಿಯಲ್ಲಿ ಅಪರಿಚಿತ ಶವ ಪತ್ತೆ: ಗುರುತು ಪತ್ತೆಗೆ ಪೊಲೀಸ್‌ ಸೂಚನೆ ಉದ್ಯಾವರ: ಉದ್ಯಾವರ ಗ್ರಾಮದ ಕಾನಕೊಡ ಪಡುಕೆರೆ ಪಾಪನಾಷಿನಿ‌ ನದಿಯ ಪಶ್ಚಿಮ ಬದಿಯಲ್ಲಿ 35 ರಿಂದ 40 ವರ್ಷದ ಗಂಡಸಿನ ಮೃತದೇಹ ಪತ್ತೆ ಆಗಿದ್ದು, ಗುರುತು ಪತ್ತೆಗಾಗಿ ಕಾಪು ಪೊಲೀಸರು ಮನವಿ ಮಾಡಿದ್ದಾರೆ.    ಗುರುವಾರ 35 ರಿಂದ 40 ವರ್ಷದ ಗುರುತು ಪತ್ತೆ ಆಗದ ಗಂಡಸ್ಸಿನ ಶವವು ಕಂಡು ಬಂದಿದೆ. ಮೃತ ವ್ಯಕ್ತಿ ಆಕಾಶ ನೀಲಿ ಬಣ್ಣದ ಟೀಶರ್ಟ್, ಕಡು […]

ಅಪಘಾತ

ಕಾಪು – ಕೊಪ್ಪಲಂಗಡಿ : ಬೈಕ್‌ಗೆ ಟ್ಯಾಂಕರ್ ಡಿಕ್ಕಿ, ಟೈಲರ್‌ ಯುವಕ ಸಾವು ( Kaup – Koppalangadi : Tanket collides with byke, Tailor youth dies)

ಕಾಪು – ಕೊಪ್ಪಲಂಗಡಿ : ಬೈಕ್‌ಗೆ ಟ್ಯಾಂಕರ್ ಡಿಕ್ಕಿ : ಟೈಲರ್‌ ಯುವಕ ಸಾವು  (Kaup – Koppalangadi) ಕಾಪು : ಟ್ಯಾಂಕರೊಂದು ಹಿಂಬದಿಯಿಂದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ತಳೀಯ ಟೈಲರ್‌ ಯುವಕ ಧಾರುಣವಾಗಿ ಮೃತ ಪಟ್ಟ ಘಟನೆ ಶನಿವಾರ ರಾತ್ರಿ ಕಾಪು ಕೊಪ್ಪಲಂಗಡಿ ರಾಹೆ. ೬೬ ರಲ್ಲಿ ಸಂಭವಿಸಿದೆ.  ಮೃತ ಯುವಕನನ್ನು ಕಾಪುವಿನ ನಿವಾಸಿ ಹರೀಶ್‌ ಕುಮಾರ್‌ (೪೫) ಎಂದು ಗುರುತಿಸಲಾಗಿದೆ. ಅವಿವಾಹಿತನಾದ ಹರೀಶ್‌ ಟೈಲರ್‌ ಉದ್ದಿಮೆ ನಡೆಸುತ್ತಿದ್ದರು.  ಟ್ಯಾಂಕರ್‌ ಮಂಗಳೂರುನಿಂದ ಉಡುಪಿ ಕಡೆ […]

ಅಪಘಾತ

ಉದ್ಯಾವರ : ನಿಂತಿದ್ದ ಲಾರಿಗೆ ಟೂರಿಸ್ಟ್ ವಾಹನ ಡಿಕ್ಕಿ- ಕೊಲ್ಲೂರಿಗೆ ತೆರಳುತ್ತಿದ್ದ ಪ್ರವಾಸಿಗರಿಗೆ ಗಾಯ (Udupi – Udyavara : A Tourist vehicle collided with parked lorry)

ಉದ್ಯಾವರ : ನಿಂತಿದ್ದ ಲಾರಿಗೆ ಟೂರಿಸ್ಟ್ ವಾಹನ ಡಿಕ್ಕಿ– ಕೊಲ್ಲೂರಿಗೆ ತೆರಳುತ್ತಿದ್ದ ಪ್ರವಾಸಿಗರಿಗೆ ಗಾಯ  (Udupi – Udyawara) ಉದ್ಯಾವರ : ನಿಂತಿದ್ದ ಲಾರಿಗೆ ಟೂರಿಸ್ಟ್‌ ವಾಹನ ಡಿಕ್ಕಿ ಹೊಡೆದು ಪುಣ್ಯಕ್ಷೇತ್ರ ದರ್ಶನಕ್ಕೆ ಹೊರಟಿದ್ದ ಪ್ರವಾಸಿಗರು ಗಾಯಗೊಂಡ ದುರ್ಘಟನೆ ಭಾನುವಾರ ಮುಂಜಾನೆ ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಪೆಟ್ರೋಲ್ ಬಂಕ್ ಬಳಿ ಸಂಭವಿಸಿದೆ.  ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ತೆರಳುತ್ತಿದ್ದ ಹೊರ ರಾಜ್ಯದ ಟೂರಿಸ್ಟ್‌ ವಾಹನವು ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ […]

ಅಪಘಾತ

ಮೂಳೂರು : ರಸ್ತೆ ದಾಟುತ್ತಿದ್ದ ದಂಪತಿಗೆ ಬಸ್ಸು ಡಿಕ್ಕಿ, ಪತಿ ಸಾವು, ಪತ್ನಿ ಗಂಭೀರ (Mooluru : A Bus collided with a couple crossing the road, husband died, wife seriously injured)

ಮೂಳೂರು : ರಸ್ತೆ ದಾಟುತ್ತಿದ್ದ ದಂಪತಿಗೆ ಬಸ್ಸು ಡಿಕ್ಕಿ, ಪತಿ ಸಾವು, ಪತ್ನಿ ಗಂಭೀರ (Mooluru) ಮೂಳೂರು: ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಪತಿ-ಪತ್ನಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಪತಿ ಸ್ಥಳದಲ್ಲೇ ಮೃತಪಟ್ಟು, ಪತ್ನಿ ತೀವ್ರವಾಗಿ ಗಾಯಗೊಂಡ ಘಟನೆ ಮೂಳೂರು ಮಿರ್ಚಿ ಹೋಟೆಲ್ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅ. 9ರಂದು ರಾತ್ರಿ ನಡೆದಿದೆ.  ಮೃತರನ್ನು ಕಾಪು ಭಾರತ್ ನಗರದ ನಿವಾಸಿ ಹಿದಾಯತ್ತುಲ್ಲಾ (55) ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಇವರ ಪತ್ನಿ ಸಾವರ್ ಎಂಬವರು ಉಡುಪಿಯ […]

ಅಪಘಾತ

ಮೂಳೂರು ಕಾರು ಢಿಕ್ಕಿ: ಮಂಗಳೂರಿನ ಬಟ್ಟೆ ವ್ಯಾಪಾರಿ ಧಾರುಣ ಮೃತ್ಯು (Mooluru car accident, A youth business man dead)

ಮೂಳೂರು ಕಾರು ಢಿಕ್ಕಿ: ಮಂಗಳೂರಿನ ಬಟ್ಟೆ ವ್ಯಾಪಾರಿ ಧಾರುಣ ಮೃತ್ಯು (Kaup) ಕಾಪು: ಕಾರೊಂದು ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಧಾರುಣವಾಗಿ ಮೃತಪಟ್ಟ ಘಟನೆ ಕಾಪು ಬಳಿಯ ಕೊಪ್ಪಲಂಗಡಿ ರಾಹೆ ೬೬ರಲ್ಲಿ ಶನಿವಾರ ಸಂಜೆ ನಡೆದಿದೆ. ಪ್ರಸ್ತುತ ಮಂಗಳೂರಿನಲ್ಲಿ ಬಟ್ಟೆ ವ್ಯಾಪಾರ ನಡೆಸುತ್ತಿರುವ ತಮಿಳುನಾಡು ಮೂಲದ ಮಣಿಕಂಠ ಪ್ರಭು (೨೮) ಮೃತ ಪಟ್ಟವರು ಎಂದು ತಿಳಿದು ಬಂದಿದೆ. ಅಫಘಾತಕ್ಕೆ ಕಾರಣವಾದ ಕಾರಿನ ಚಾಲಕ ಹಳೆಯಂಗಡಿ ನಿವಾಸಿ ಮೊಹಮ್ಮದ್ ಸಹಾದ್ ಎಂಬಾತನೂ ಗಾಯಗೊಂಡಿದ್ದು, ಆತನನ್ನು ಉಡುಪಿ ಖಾಸಗಿ […]

ಅಪರಾಧ

ಕಾಪು ಬೀಚ್‌ ಬಳಿ ಬೈಕ್‌, ಮೊಬೈಲ್‌ ಇಟ್ಟು ಯುವಕ ನಾಪತ್ತೆ: ತೀವ್ರ ಶೋಧ (Youth leaves byke, mobile phone near Kaup beach and goes missing : Intence search)

ಕಾಪು ಬೀಚ್‌ ಬಳಿ ಬೈಕ್‌, ಮೊಬೈಲ್‌ ಇಟ್ಟು ಯುವಕ ನಾಪತ್ತೆ: ತೀವ್ರ ಶೋಧ (Kaup) ಕಾಪು :  ಕಾಪುವಿನ ಸುಪ್ರಸಿದ್ಧ ಲೈಟ್‌ಹೌಸ್‌ ಬೀಚ್‌ ಬಳಿ ಯುವಕನೋರ್ವ ಬೈಕ್‌, ಮೊಬೈಲ್ ಮತ್ತಿತರ ಬೆಲೆಬಾಳುವ ವಸ್ತುಗಳನ್ನು ಬಿಟ್ಟು ನಾಪತ್ತೆಯಾಗಿದ್ದು, ನಿನ್ನೆಯಿಂದ ಅವನಿಗಾಗಿ ಬೀಚ್‌ನುದ್ದಕ್ಕೂ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಕಾಪು ಪಡುಗ್ರಾಮದ ನಿವಾಸಿ ತುಳಸಿ ಸಾಲ್ಯಾನ್ ಎಂಬವರ ಪುತ್ರ 20ರ ಹರೆಯದ ಕರಣ್ ಸಾಲ್ಯಾನ್ ನಾಪತ್ತೆಯಾಗಿರುವ ಯುವಕ. ನಾಪತ್ತೆ ಆಗಿದ್ದಾನೆ.  ಗುರುವಾರ ರಾತ್ರಿಯಿಂದೀಚೆಗೆ ಈತ ನಾಪತ್ತೆಯಾಗಿದ್ದು, ಶುಕ್ರವಾರ ಬೆಳಗ್ಗೆ ಹುಡುಕಿದಾಗ […]

ಅಪಘಾತ

ಕಾಪು – ಕೊಪ್ಪಲಂಗಡಿ : ಟಿಪ್ಪರ್ ಗೆ ಪಿಕಪ್ ವಾಹನ ಡಿಕ್ಕಿ, ಚಾಲಕನಿಗೆ ಗಾಯ (Kaup Koppalangadi; Tipper – pickup accident)

ಕಾಪು – ಕೊಪ್ಪಲಂಗಡಿ : ಟಿಪ್ಪರ್ ಗೆ ಪಿಕಪ್ ವಾಹನ ಡಿಕ್ಕಿ, ಚಾಲಕನಿಗೆ ಗಾಯ (Kaup) ಕಾಪು:  ರಾಷ್ಟೀಯ ಹೆದ್ದಾರಿ 66ರ  ಕೊಪ್ಪಲಂಗಡಿ ಬಳಿ ರಸ್ತೆ ಬದಿ ನಿಂತಿದ್ದ ಟಿಪ್ಪರ್ ಗೆ ಪಿಕಪ್ ವಾಹನ ಡಿಕ್ಕಿ ಹೊಡೆದ ಘಟನೆ  ನಡೆದಿದೆ.  ಮಂಗಳೂರಿನಿಂದ  ಉಡುಪಿ ಕಡೆ ಹೋಗುತ್ತಿದ್ದ ಪಿಕಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಕೊಪ್ಪಲಂಗಡಿ ಬಳಿ ರಸ್ತೆ ಬದಿ ನಿಂತಿದ್ದ ಟಿಪ್ಪರ್‌ನ  ಹಿಂಬದಿಗೆ  ಡಿಕ್ಕಿ  ಹೊಡೆದಿದ್ದಾನೆ.  ಗಂಭೀರ ಗಾಯಗೊಂಡ ಪಿಕಪ್ ಚಾಲಕನನ್ನು  ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. […]

ಅಪರಾಧ

ಪೊಲಿಪು ಮಸೀದಿ ಜಂಕ್ಷನ್ ಬಳಿ ಕಾರು ಪಲ್ಟಿ: ತಪ್ಪಿದ ಅನಾಹುತ (A Car Overturned at Polipu Masjid junction)

ಪೊಲಿಪು ಮಸೀದಿ ಜಂಕ್ಷನ್ ಬಳಿ ಕಾರು ಪಲ್ಟಿ: ತಪ್ಪಿದ ಅನಾಹುತ PHOTO CREDIT : RAKESH K  (Kaup) ಕಾಪು : ರಾಷ್ಟ್ರೀಯ ಹೆದ್ದಾರಿ ೬೬ರ ಪೊಲಿಪು ಮಸೀದಿ ಜಂಕ್ಷನ್ ಬಳಿ ಕುಂದಾಪುರದಿಂದ ಮೂಲ್ಕಿ ಕಡೆಗೆ ತೆರಳುತ್ತಿದ್ದ ಟೊಯೊಟಾ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಡಿವೈಡರ್‌ಗೆ ಢಿಕ್ಕಿ ಹೊಡೆದು ಪಲ್ಟಿಯಾಗಿ ನಿಂತಿದೆ.  ಕಾರಿನಲ್ಲಿದ್ದ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾಪು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಪರಾಧ

ಕಟಪಾಡಿ: ಎಕ್ಸ್‌ಪ್ರೆಸ್‌ ಬಸ್‌ ಢಿಕ್ಕಿ, ವ್ಯಕ್ತಿ ಸಾವು (Katapadi Express Bus collided: one person died)

ಕಟಪಾಡಿ: ಎಕ್ಸ್‌ಪ್ರೆಸ್‌ ಬಸ್‌ ಢಿಕ್ಕಿ, ವ್ಯಕ್ತಿ ಸಾವು (Katapadi) ಕಟಪಾಡಿ, ಎ. 7: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ತೇಕಲ್‌ತೋಟದ ಬಳಿ ಎಕ್ಸ್‌ಪ್ರೆಸ್‌ ಬಸ್ ಢಿಕ್ಕಿ ಹೊಡೆದು ಬ್ಯಾಂಡ್ ವಾದಕ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ.  ಮೂಲತಃ ಉಡುಪಿ ಕೆಮ್ಮಣ್ಣು ತೋನ್ಸೆ ಮೂಲದ, ಕಟಪಾಡಿ ತೇಕಲತೋಟದ ಮನೆಯೊಂದರಲ್ಲಿ ಬಾಡಿಗೆ ವಾಸವಿದ್ದ ಕುಮಾರ್ (55) ಮೃತ ವ್ಯಕ್ತಿ. ವಿವಾಹಿತನಾಗಿದ್ದ ಅವರು ಪತ್ನಿ ಮತ್ತು ವಿದೇಶದಲ್ಲಿರುವ ಮಗಳನ್ನು ಅಗಲಿದ್ದಾರೆ.  ಶನಿವಾರ ಸಂಜೆ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ […]

ಅಪರಾಧ

ಕಾಪು: ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಬಲೆಯೊಳಗೆ ಸಿಲುಕಿ ಸಾವು (Kaup;  A Fisherman who went fishing got cought in the net and died)

ಕಾಪು: ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಬಲೆಯೊಳಗೆ ಸಿಲುಕಿ ಸಾವು   ಕಾಪು : ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಬಲೆಗೆ ಸಿಕ್ಕಿಕೊಂಡು ಸಾವನ್ನಪಿದ ಘಟನೆ ಕಾಪುವಿನ ಪೊಲಿಪು ಕಡಲ ಕಿನಾರೆಯಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.  ಕಾಪು ಪೊಲಿಪು‌ ನಿವಾಸಿ ಕಿಶೋರ್ (29) ಮೃತ ದುರ್ದೈವಿ.  ಪ್ರತಿದಿನ ಕಯಾಕ್ ಮೂಲಕ ಏಕಾಂಗಿಯಾಗಿ ಮೀನುಗಾರಿಕೆಗೆ ತೆರಳುತ್ತಿದ್ದ ಕಿಶೋರ್ ಶುಕ್ರವಾರ ಮುಂಜಾನೆ ಕೂಡಾ ಏಕಾಂಗಿಯಾಗಿ ಮೀನುಗಾರಿಕೆಗೆ ತೆರಳಿದ್ದು, ಮೀನುಗಾರಿಕಾ ಬಲೆಗೆ ಸಿಲುಕಿ ಮೃತಪಟ್ಟಿದ್ದಾರೆ.  ಸಮುದ್ರದಲ್ಲಿ ತೇಲುತ್ತಿದ್ದ ಕಯಾಕ್ ಅನ್ನು ಗಮನಿಸಿದ ಮತ್ತೊಂದು ಬೋಟಿನವರಿಗೆ ಮೃತದೇಹ […]

eMedia Kannada  @2025. All Rights Reserved.