Tag: kp kumaraguru thantri

ಧಾರ್ಮಿಕ

ಕಾಪು ಕೋತ್ವಾಲಗುತ್ತು ಮೂಲ ನಾಗ ಬ್ರಹ್ಮಸ್ಥಾನದ ನಾಗಮಂಡಲ : ಪೂರ್ವಭಾವಿ ಹೊರೆಕಾಣಿಕೆ (The Nagamandal of the Naga Brahmasthan of Kaapu Kotwalguttu: A preliminary burden offering)

ಕಾಪು ಕೋತ್ವಾಲಗುತ್ತು ಮೂಲ ನಾಗ ಬ್ರಹ್ಮಸ್ಥಾನದ ನಾಗಮಂಡಲ : ಪೂರ್ವಭಾವಿ ಹೊರೆಕಾಣಿಕೆ  ಶನಿವಾರ ನಡೆಯಲಿರುವ ಚತುಃಪವಿತ್ರ ನಾಗ ಮಂಡಲೋತ್ಸವ ಅನ್ನಸಂತರ್ಪಣೆ (Kaup) ಕಾಪು: ಕಾಪು ಕೋತ್ವಾಲಗುತ್ತು ಮೂಲ ನಾಗ  ಬ್ರಹ್ಮಸ್ಥಾನದಲ್ಲಿ ಕೋತ್ವಾಲಗುತ್ತು ನಾಗಮಂಡಲ ಸೇವಾ ಸಮಿತಿ, ಕೋತ್ವಾಲಗುತ್ತು ಕುಟುಂಬಿಕರು ಮತ್ತು ಮೂಲಸ್ಥಾನದ ಭಕ್ತಾದಿಗಳ ವತಿಯಿಂದ ಶನಿವಾರ   ನಡೆಯಲಿರುವ ಚತುಃಪವಿತ್ರ ನಾಗ ಮಂಡಲೋತ್ಸವ ಅನ್ನಸಂತರ್ಪಣೆಗೆ  ಪೂರ್ವಭಾವಿಯಾಗಿ ಗುರುವಾರ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಕಾಪು ದಂಡತೀರ್ಥ ಮಠದ ಶ್ರೀ ಮುಖ್ಯಪ್ರಾಣ ದೇವರ ಸನ್ನಿಧಾನದಿಂದ ಹೊರಟ ಹೂ ಹಿಂಗಾರ ಫಲವಸ್ತು ಹೊರೆ ಕಾಣಿಕೆ ಮೆರವಣಿಗೆಗೆ ಉಡುಪಿ ಶ್ರೀ ಪುತ್ತಿಗೆ ಮಠಾಧೀಶರಾ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಪುಷ್ಪಾರ್ಚನೆಗೈದು ಚಾಲನೆ ನೀಡಿದರು.  ಕ್ಷೇತ್ರದ ತಂತ್ರಿ ವೇ. ಮೂ. ಶ್ರೀಶ ತಂತ್ರಿ, ಪ್ರಧಾನ ತಂತ್ರಿ ಕೆ.ಪಿ. ಕುಮಾರಗುರು ತಂತ್ರಿ, ನಾಗಪಾತ್ರಿ ಕಕ್ಕುಂಜೆ ವಾಸುದೇವ ಆಚಾರ್ಯ ಧಾರ್ಮಿಕ ಪೌರೋಹಿತ್ಯ ನಿರ್ವಹಿಸಿದರು. ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ  ವಾಸುದೇವ ಶೆಟ್ಟಿ, ಆಡಳಿತ ಮೊಕ್ತೇಸರ ನಡಿಕೆರೆ ರತ್ನಾಕರ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ, ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಮೊಕ್ತೇಸರರಾದ ಶಶಿಧರ್ ಸುವರ್ಣ, ಶಾಂತಲತಾ ಶೆಟ್ಟಿ, ಕೋತ್ವಾಲಗುತ್ತು ನಾಗಮಂಡಲ ಸೇವಾ ಸಮಿತಿ ಅಧ್ಯಕ್ಷ ಕೋತ್ವಾಲಗುತ್ತು ಹೆಬ್ಬಾಗಿಲುಮನೆ ಕಾಪು ದಿವಾಕರ್ ಶೆಟ್ಟಿ, ಉಪಾಧ್ಯಕ್ಷರಾದ ಕೋತ್ವಾಲಗುತ್ತು ಮೇಲ್ಮನೆ ಚಂದ್ರಹಾಸ ಶೆಟ್ಟಿ, ಕೋತ್ವಾಲ ಗುತ್ತು ನಡುಪಾಲು ಮನ ಚಂದ್ರಹಾಸ ಶೆಟ್ಟಿ, ಕೋತ್ವಾಲ ಗುತ್ತು ಹಾವಂಜೆಮನೆ ಕರುಣಾಕರ ಶೆಟ್ಟಿ, ಕೊಡವೂರು ಗರಡೆಮನೆ ಅಣ್ಣಪ್ಪ ಶೆಟ್ಟಿ ಕೋತ್ವಾಲಗುತ್ತು, ಕೋತ್ವಾಲಗುತ್ತು ಮೇಲ್ಮನೆ ಚಂದ್ರಹಾಸ ಶೆಟ್ಟಿ, ಕೋತ್ವಾಲಗುತ್ತು ನಡುಪಾಲು ಮನ ಚಂದ್ರಹಾಸ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೋತ್ವಾಲಗುತ್ತು ಹೊಸಮನೆ ಸುಮನ್ ಶೆಟ್ಟಿ, ಕೋಶಾಧಿಕಾರಿ ಕೋತ್ವಾಲಗುತ್ತು ಹೆಬ್ಬಾಗಿಲು ಮನೆ ಜಿನೇಂದ್ರ ಶೆಟ್ಟಿ, ಪ್ರಮುಖರಾದ ಕೆ. ಶಶಿಧರ ಶೆಟ್ಟಿ ಎರ್ಮಾಳು, ಸದಾನಂದ ಶೆಟ್ಟಿ ಪುಣೆ, ಅಜಿತ್ ಶೆಟ್ಟಿ ಬರೋಡಾ, ಅಶ್ವಿನ್ ಶೆಟ್ಟಿ ಬರೋಡಾ, ಪ್ರಶಾಂತ್ ನಾಯಕ್, ಪ್ರಕಾಶ್ ಶೆಟ್ಟಿ ಮೇಲ್ಮನೆ, ಸುನಿಲ್ ಶೆಟ್ಟಿ, ಗಣ್ಯರಾದ ಕೆ. ವಿಶ್ವನಾಥ್, ಶ್ರೀಕರ ಶೆಟ್ಟಿ, ರಮೇಶ್ ಶೆಟ್ಟಿ ಕೊಲ್ಯ, ರಘುರಾಮ ಶೆಟ್ಟಿ, ಸಂದೀಪ್ ಶೆಟ್ಟಿ ಹಾಗೂ ಕೋತ್ವಾಲಗುತ್ತು ಕುಟುಂಬಸ್ಥರು, ಮೂಲಸ್ಥಾನವನ್ನು ನಂಬಿಕೊಂಡು ಬಂದಿರುವ ಭಕ್ತರು ಮತ್ತು ಸಾವಿರ ಸೀಮೆಯ ಭಗವದ್ಭಕ್ತರು ಪಾಲ್ಗೊಂಡಿದ್ದರು. 

ಧಾರ್ಮಿಕ ವಿಡಿಯೋ

ಕಾಪು: ಹರಿದ್ವಾರದಿಂದ ತಂದಿದ್ದ ಗಂಗಾಜಲ  ಮೆರವಣಿಗೆಯೊಂದಿಗೆ ಕಾಪು ಶ್ರೀ ಹೊಸ ಮಾರಿಗುಡಿ ದೇಗುಲಕ್ಕೆ (Kaup: Gangajal brought from Haridwar with a procession to Kaup Sri Hosa Marigudi temple)

ಕಾಪು: ಹರಿದ್ವಾರದಿಂದ ತಂದಿದ್ದ ಗಂಗಾಜಲ ಮೆರವಣಿಗೆಯೊಂದಿಗೆ ಕಾಪು ಶ್ರೀ ಹೊಸ ಮಾರಿಗುಡಿ ದೇಗುಲಕ್ಕೆ (Kaup)ಕಾಪು : ಮಾರ್ಚ್ 5ರಂದು ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಳಕ್ಕೆ ಕಾಪು ಶ್ರೀ ಲಕ್ಷ್ಮಿ ಜನಾರ್ಧನ ದೇವರ ಸನ್ನಿಧಾನದಲ್ಲಿ ನವಕುಂಭಗಳಲ್ಲಿ ಪೂಜೆಗೊಂಡ ಗಂಗಾಜಲವನ್ನು ಪೂರ್ಣಕುಂಭ   ಮೆರವಣಿಗೆಯೊಂದಿಗೆ ಸೋಮವಾರ ಸಂಜೆ ಕಾಪು ಶ್ರೀ ಹೊಸ ಮಾರಿಗುಡಿ ದೇವಳಕ್ಕೆ ಸಂಭ್ರಮದಿಂದ ತರಲಾಯಿತು.  ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಹರಿದ್ವಾರದಲ್ಲಿ ಫೆಬ್ರವರಿ 12ರ ಕುಂಭ ಸಂಕ್ರಮಣದ ಹುಣ್ಣಿಮೆಯ ಪರ್ವಕಾಲದಲ್ಲಿ ನವಕುಂಭಗಳಲ್ಲಿ ಗಂಗಾಜಲವನ್ನು ತುಂಬಿಸಿ, […]

ಧಾರ್ಮಿಕ ವಿಡಿಯೋ

  ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ :  ಪ್ರತಿಷ್ಠಾ ಬ್ರಹ್ಮ ಕಲಶೋತ್ಸವಕ್ಕೆ ಚಾಲನೆ (Kaup Sri New Marigudi Temple: Pratishtha Brahma Kalashotsava inaugurated)

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ :  ಪ್ರತಿಷ್ಠಾ ಬ್ರಹ್ಮ ಕಲಶೋತ್ಸವಕ್ಕೆ ಚಾಲನೆ (Kaup) ಕಾಪು: ಸಂಪೂರ್ಣ ಶಿಲಾಮಯದೊಂದಿಗೆ ಪುನರ್ ನಿರ್ಮಾಣಗೊಂಡ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಮಂಗಳವಾರ ಬೆಳಿಗ್ಗೆ ಪ್ರತಿಷ್ಠಾ ಬ್ರಹ್ಮಲಕಶೋತ್ಸವಕ್ಕೆ ಚಾಲನೆ ನೀಡಲಾಯಿತು.   ಕೊರಂಗ್ರಪಾಡಿ ವೇದಮೂರ್ತಿ ಕೆ ಜಿ ರಾಘವೇಂದ್ರ ತಂತ್ರಿಗಳ ಮಾರ್ಗದರ್ಶನದಲ್ಲಿ, ಕ್ಷೇತ್ರದ ಪ್ರಧಾನ ತಂತ್ರಿಗಳಾದ ವೇದಮೂರ್ತಿ ಕೆಪಿ. ಕುಮಾರ ಗುರು ತಂತ್ರಿಯವರ ನೇತೃತ್ವದಲ್ಲಿ, ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿಯವರ ಸಹಕಾರದಲ್ಲಿ ಧಾರ್ಮಿಕ ವಿಧಿಗಳೊಂದಿಗೆ ಚಾಲನೆ ನೀಡಲಾಯಿತು. ಋತ್ವಿಜರ […]

ಧಾರ್ಮಿಕ

ಹರಿದ್ವಾರದಿಂದ ತಂದ ಪವಿತ್ರ ಗಂಗಾಜಲ ಕಾಪುವಿಗೆ ಆಗಮನ (The holy Ganga water brought from Haridwar arrives at Kaup)

ಹರಿದ್ವಾರದಿಂದ ತಂದ ಪವಿತ್ರ ಗಂಗಾಜಲ ಕಾಪುವಿಗೆ ಆಗಮನ (Kaup) ಕಾಪು : ಸಂಪೂರ್ಣ ಶಿಲಾಮಯವಾಗಿ ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಫೆಬ್ರವರಿ 25 ರಿಂದ ಮಾರ್ಚ್ 5 ರವರೆಗೆ ನಡೆಯಲಿದ್ದು,  ಬ್ರಹ್ಮಕಲಶೋತ್ಸವಕ್ಕಾಗಿ ಹರಿದ್ವಾರದಿಂದ ವಿಮಾನದ ಮೂಲಕ ತರಲಾದ ಪವಿತ್ರ ಗಂಗಾಜಲವನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ  ಗುರ್ಮೆ ಸುರೇಶ್ ಶೆಟ್ಟಿ ಅವರು ಗಣ್ಯರ ಮೂಲಕ ಸ್ವಾಗತಿಸಿದರು.   ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಹರಿದ್ವಾರದಲ್ಲಿ ಫೆಬ್ರವರಿ 12ರ ಕುಂಭ […]

eMedia Kannada  @2025. All Rights Reserved.