Tag: malpe

ಅಪರಾಧ

ಮಲ್ಪೆ ಸಮುದ್ರ ತೀರದಲ್ಲಿ ಇಬ್ಬರು ಹುಡುಗಿಯರು ನೀರುಪಾಲು : ಒಬ್ಬಾಕೆ ಮೃತ್ಯು : ಮತ್ತೋರ್ವಳ ರಕ್ಷಣೆ.

ಉಡುಪಿ: ಮಡಿಕೇರಿಯಿಂದ ನಾಪತ್ತೆಯಾಗಿದ್ದ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರು ಮಲ್ಪೆ ಸಮುದ್ರ ತೀರದಲ್ಲಿ ನೀರುಪಾಲಾಗಿದ್ದು, ಅವರಲ್ಲಿ ಒಬ್ಬಾಕೆ ಮೃತಪಟ್ಟು ಇನ್ನೊಬ್ಬಾಕೆ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲುಗೊಂಡಿರುವ ಘಟನೆ ಘಟಿಸಿದೆ. ಮಡಿಕೇರಿಯ ಖಾಸಗಿ ಕಾಲೇಜೊಂದರಲ್ಲಿ ಪ್ರಥಮ ಪಿಯು ವ್ಯಾಸಂಗ ಮಾಡುತ್ತಿರುವ ಮಾನ್ಯ ಮತ್ತು ಯಶಸ್ವಿನಿ ಎಂಬಿಬ್ಬರು ವಿದ್ಯಾರ್ಥಿನಿಯರು ಕಳೆದ ಮೂರು ದಿನಗಳ ಹಿಂದೆ ಇದ್ದಕ್ಕಿದಂತೆ ನಾಪತ್ತೆಯಾಗಿದ್ದರು. ಇತ್ತಕಡೆ ಶನಿವಾರ ಮಧ್ಯರಾತ್ರಿ ಮಲ್ಪೆ ತೀರದಲ್ಲಿ ಇಬ್ಬರು ವಿದ್ಯಾರ್ಥಿನಿಯರು ನೀರಿನಲ್ಲಿ ಮುಳುಗುತ್ತಿದ್ದಾರೆ ಎಂಬ ಸುದ್ದಿ ತಿಳಿದು ಮುಳುಗುತಜ್ಞ ಈಶ್ವರ್ ಮಲ್ಪೆ ಘಟನಾ ಸ್ಥಳಕ್ಕಾಗಮಿಸಿ […]

ಕರಾವಳಿ

ಮಲ್ಪೆ ಕಡಲ ಕಿನಾರೆಯಲ್ಲಿ ಗಂಗೆಯ ಕೂದಲ ರಾಶಿ: ಸಾರ್ವಜನಿಕ ಆಕರ್ಷಣೆ

ಮಲ್ಪೆ ಕಡಲ ಕಿನಾರೆಯಲ್ಲಿ ಗಂಗೆಯ ಕೂದಲ ರಾಶಿ: ಸಾರ್ವಜನಿಕ ಆಕರ್ಷಣೆ ಉಡುಪಿಯ ಮಲ್ಪೆ ಸಮುದ್ರ ತೀರದಲ್ಲಿ ಅಪರೂಪದ ಪ್ರಾಕೃತಿಕ ವಿದ್ಯಮಾನ ಸಂಭವಿಸಿದೆ. ಕಡಲ ತೀರದ ಉದ್ದಕ್ಕೂ ರಾಶಿ ರಾಶಿ ನಾರು ಬೇರುಗಳು ಬಂದು ಬಿದ್ದಿವೆ. ರಾತ್ರಿ ಬೆಳಗಾಗುವುದರೊಳಗಾಗಿ ಕಡಲು ಈ ಕಸದ ರಾಶಿಯನ್ನು ತಂದು ಗುಡ್ಡೆ ಹಾಕಿದೆ.  ಹಾಗಂತ ಇದನ್ನು ಕಲ್ಮಶ ಅಥವಾ ಕಸ ಎನ್ನಲು ಸಾಧ್ಯವಿಲ್ಲ. ಸ್ಥಳೀಯ ಆಡು ಭಾಷೆಯಲ್ಲಿ ಈ ವಿಶಿಷ್ಟ ಸಸ್ಯ ಜನ್ಯ ನಾರುಗಳನ್ನು ಗಂಗೆಯ ಕೂದಲು ಎಂದು ಕರೆಯುತ್ತಾರೆ. ಸಮುದ್ರ ತೀರದ […]

ಕರಾವಳಿ

ಕಡಲಿಗಿಳಿದ ಸಾಂಪ್ರದಾಯಿಕ ನಾಡದೋಣಿ ಮೀನುಗಾರರು

ಮಲ್ಪೆ: ಬಿಪರ್ ಜಾಯ್ ಚಂಡಮಾರುತದ ಅಬ್ಬರ ತಣ್ಣಗಾಗಿದೆ.ಮುಂಗಾರು ಮಳೆ ಕ್ಷೀಣಗೊಂಡಿದ್ದು ಪ್ರಕ್ಷುಬ್ಧಗೊಂಡ ಕಡಲು ಶಾಂತವಾಗಿದೆ. ಹೀಗಾಗಿ ನಾಡದೋಣಿ ಮೀನುಗಾರರು ಸಮುದ್ರದತ್ತ ಮುಖ ಮಾಡಿದ್ದಾರೆ. ರಾಜ್ಯದ ಕರಾವಳಿಯಲ್ಲಿ ಜೂನ್ ಹಾಗೂ ಜುಲೈ ತಿಂಗಳಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ಮಳೆಗಾಲದ ನಿಷೇಧ ಇದೆ. ಮೀನುಗಳ ಸಂತಾನೋತ್ಪತ್ತಿ ಮಳೆಗಾಲದಲ್ಲಿ ಆಗುವುದರಿಂದ ಈ ಅವಧಿಯಲ್ಲಿ ಆಳಸಮುದ್ರ ಮೀನುಗಾರಿಕೆಗೆ ಅವಕಾಶ ಇಲ್ಲ. ಈ ಸಮಯದಲ್ಲಿ ಸಾಂಪ್ರದಾಯಿಕ ನಾಡದೋಣಿ  ಮೀನುಗಾರರು ಸಂಪ್ರದಾಯಿಕವಾಗಿ, ಸಮುದ್ರ ತೀರದಲ್ಲಿ ಮೀನುಗಾರಿಕೆ ನಡೆಸುತ್ತಾರೆ.   ಈ ಬಾರಿ ಜೂನ್‌ನಲ್ಲಿ ಚಂಡಮಾರುತದ ಎಫೆಕ್ಟ್ ‌ನಿಂದ […]

ಅಪರಾಧ

ಮಲ್ಪೆ ಸರಕಾರಿ ಶಾಲೆಯಲ್ಲಿ ಪ್ರತಿಭಟನೆ ಸಂದರ್ಭ ತಳ್ಳಾಟ- 6 ವಿದ್ಯಾರ್ಥಿಗಳಿಗೆ ಗಾಯ ,ಆಸ್ಪತ್ರೆಗೆ ದಾಖಲು

 ಮಲ್ಪೆ: ಕೋಡಿಬೆಂಗ್ರೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ  ಕೊರತೆ ಇದ್ದರೂ, ಇದೀಗ  ಓರ್ವ ಶಿಕ್ಷಕರನ್ನು ವರ್ಗಾವಣೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಿರುವ ಕ್ರಮ ವಿರೋಧಿಸಿ ಗ್ರಾಮಸ್ಥರು ಆಯೋಜಿಸಿದ್ದ ಪ್ರತಿಭಟನೆ ಸಂದರ್ಭ 6 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಉಡುಪಿಯ ಆದರ್ಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಪ್ರಾಥಮಿಕ ಶಾಲೆಯ ಪುಟ್ಟ ಮಕ್ಕಳಾಗಿದ್ದು, ಎದೆ,  ಬೆನ್ನು‌ ಮತ್ತು ಕೈಗಳಿಗೆ ಪೆಟ್ಟಾಗಿದೆ. ಇದೀಗ ಗಾಯಗೊಂಡ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.  ಕೋಡಿಬೆಂಗ್ರೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ. ಹೀಗಿರುವಾಗ […]

ಕರಾವಳಿ

ಉಡುಪಿ ಶಾಸಕ ಯಶ್ಪಾಲ್‌ ಸುವರ್ಣರೊಂದಿಗೆ ಮೀನುಗಾರಿಕಾ ಇಲಾಖೆ,  ಬಂದರು ಇಲಾಖೆಯ ಅಧಿಕಾರಿಗಳು ಹಾಗೂ ಮೀನುಗಾರ ಸಂಘಟನೆಯ ಪ್ರಮುಖರ ಸಭೆ

ಉಡುಪಿ ಶಾಸಕ ಯಶ್ಪಾಲ್‌ ಸುವರ್ಣರೊಂದಿಗೆ ಮೀನುಗಾರಿಕಾ ಇಲಾಖೆ,  ಬಂದರು ಇಲಾಖೆಯ ಅಧಿಕಾರಿಗಳು ಹಾಗೂ ಮೀನುಗಾರ ಸಂಘಟನೆಯ ಪ್ರಮುಖರ ಸಭೆ ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ  ಯಶ್ ಪಾಲ್ ಸುವರ್ಣ ರವರು ಮಲ್ಪೆ ಮೀನುಗಾರರ ಸಂಘದ ಸಭಾಂಗಣದಲ್ಲಿ ಮೀನುಗಾರಿಕೆ ಇಲಾಖೆ ಮತ್ತು ಬಂದರು ಇಲಾಖೆಯ ಅಧಿಕಾರಿಗಳು ಹಾಗೂ ಮೀನುಗಾರ ಸಂಘಟನೆಯ ಪ್ರಮುಖರೊಂದಿಗೆ  ಸಭೆ ನಡೆಸಿದರು.  ಸಭೆಯಲ್ಲಿ ಮುಂದಿನ ಮೀನುಗಾರಿಕಾ ಋತುವಿನ ಚಟುವಟಿಕೆಗೆ ಪೂರಕವಾಗಿ ಪಾಸ್ ಬುಕ್ ನವೀಕರಣ, ಬಂದರು ಸ್ವಚ್ಚತೆ, ಭದ್ರತೆ ಹಾಗೂ ಸುವ್ಯಸ್ಥಿತ ನಿರ್ವಹಣೆಗೆ ಸ್ಥಳೀಯ […]

eMedia Kannada  @2025. All Rights Reserved.