Tag: mangaluru

ಶಾಲಾ ಕಾಲೇಜು

ಗಂಗೂಬಾಯಿ ಹಾನಗಲ್‌ ವಿವಿ, ರಾಜ್ಯವ್ಯಾಪ್ತಿ ಕೋರ್ಸ್ ಆರಂಭ : ನಾಗೇಶ್ ಬೆಟ್ಟಕೋಟೆ

ಗಂಗೂಬಾಯಿ ಹಾನಗಲ್‌ ವಿವಿ, ರಾಜ್ಯವ್ಯಾಪ್ತಿ ಕೋರ್ಸ್ ಆರಂಭ : ನಾಗೇಶ್ ಬೆಟ್ಟಕೋಟೆ ಮಂಗಳೂರು: ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಐತಿಹಾಸಿಕ ಚಟುವಟಿಕೆಗಳಿಗೆ ನಾಂದಿ ಹಾಡಿದೆ. ಕೇಂದ್ರ ಸ್ಥಾನ ಮೈಸೂರಿನಲ್ಲಿ ನಡೆಸುತ್ತಿದ್ದ ಕೋರ್ಸ್‍ಗಳನ್ನು ರಾಜ್ಯವ್ಯಾಪಿ ನಡೆಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ ಎಂದು  ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿವಿ ಉಪಕುಲಪತಿ ನಾಗೇಶ್ ವಿ. ಬೆಟ್ಟಕೋಟೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.  ವಿಶ್ವವಿದ್ಯಾಲಯದೊಡನೆ ರಾಜ್ಯದ ಯಾವುದೇ ನೋಂದಾಯಿತ ಶಿಕ್ಷಣ ಸಂಸ್ಥೆಗಳು ಒಡಂಬಡಿಕೆ ಮಾಡಿಕೊಂಡು […]

ಫ್ಯಾಷನ್

ಗ್ಲೋಬಲ್ ಮಿಸೆಸ್ ಇಂಡಿಯಾ ಇಂಟರ್‌ನ್ಯಾಷನಲ್‌ ಯೂನಿವರ್ಸ್ – 2023 ಮಂಗಳೂರು ನಗರದ ಶಮಾ ವಾಜಿದ್ ಆಯ್ಕೆ

ಗ್ಲೋಬಲ್ ಮಿಸೆಸ್ ಇಂಡಿಯಾ ಇಂಟರ್‌ನ್ಯಾಷನಲ್‌ ಯೂನಿವರ್ಸ್ – 2023 ಮಂಗಳೂರು ನಗರದ ಶಮಾ ವಾಜಿದ್ ಆಯ್ಕೆ ಮಂಗಳೂರು: ದೆಹಲಿಯಲ್ಲಿ ಗ್ಲೋಬಲ್ ಇಂಡಿಯಾ ಎಂಟರ್‌ಟೈನ್‌ಮೆಂಟ್‌ ಪ್ರೊಡಕ್ಷನ್ಸ್ ಆಯೋಜಿಸಿದ್ದ ಗ್ಲೋಬಲ್ ಮಿಸೆಸ್ ಇಂಡಿಯಾ ಇಂಟರ್‌ನ್ಯಾಷನಲ್‌ ಯೂನಿವರ್ಸ್ – 2023 ಸ್ಪರ್ಧೆಯಲ್ಲಿ ಮಂಗಳೂರು ನಗರದ ಶಮಾ ವಾಜಿದ್​​ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ದೇಶದ 22ಕ್ಕೂ ಅಧಿಕ ರಾಜ್ಯದಲ್ಲಿ ನಡೆದ ಆಡಿಷನ್​​ನಲ್ಲಿ ಆಯ್ಕೆಯಾದ ಎಲ್ಲಾ ಸ್ಪರ್ಧಿಗಳನ್ನು ಹಿಂದಿಕ್ಕಿ ಶಮಾ ಈ ಸಾಧನೆ ಮಾಡಿದ್ದಾರೆ.  ಈ ಸ್ಪರ್ಧೆಯಲ್ಲಿ ಕಿರೀಟಕ್ಕೆ ಮುತ್ತಿಟ್ಟಿರುವ ಶಮಾ 2024ರಲ್ಲಿ ನಡೆಯುವ ಗ್ಲೋಬಲ್​ […]

ಕರಾವಳಿ

ಮಂಗಳೂರು ಉರ್ವಾ ಸ್ಟೋರ್‌ ಪರಿಸರದಲ್ಲಿ ನೀರಿನ ಸಮಸ್ಯೆ, ದೂರು

ಮಂಗಳೂರು: ವಿಪರೀತ ಮಳೆಯ ಸಂಧರ್ಭದಲ್ಲೂ ಕುಡಿಯುವ ನೀರಿನ ಸಮಸ್ಯೆ ; ಮಳೆಯ ನೀರನ್ನೇ ಕುಡಿದ ನಾಗರಿಕರು.  DYFI ನಿಂದ ಮೇಯರ್ ಆಯುಕ್ತರಿಗೆ ಮನವಿ ಮಂಗಳೂರು: ಉರ್ವಾಸ್ಟೋರ್ ಸುಂಕದಕಟ್ಟೆ ಪ್ರದೇಶದಲ್ಲಿ ಕಳೆದ 12 ದಿನಗಳಿಂದ ಕುಡಿಯುವ ನೀರಿನ ವಿಪರೀತ ಸಮಸ್ಯೆ ತಲೆದೋರಿದ್ದು,ಈ ಬಗ್ಗೆ ಸ್ಥಳೀಯ ನಾಗರಿಕರು DYFI ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಆಯುಕ್ತರನ್ನು ಭೇಟಿಯಾಗಿ ಮನವಿಯನ್ನು ಅರ್ಪಿಸಿದರು.  ಕಳೆದ ವಾರ ವಿಪರೀತ ಮಳೆ ಸುರಿದಿದ್ದರೂ ಉರ್ವಾಸ್ಟೋರಿನ ಸುಂಕದಕಟ್ಟೆಯ ನಾಗರಿಕರು ಮಾತ್ರ ಮಳೆಯ ನೀರನ್ನೇ ಕುಡಿಯುವ […]

ಅಪರಾಧ

ಮಂಗಳೂರಿನಲ್ಲಿ ಬೆಂಕಿ ಹಚ್ಚಿ ಕಾರ್ಮಿಕನನ್ನು ಕೊಂದ ಮಾಲೀಕ, ಬಳಿಕ ಕರೆಂಟ್​ ಶಾಕ್​ ನಾಟಕ

ಮಂಗಳೂರು : ಪೆಟ್ರೋಲ್​ ಸುರಿದು ತಾನೇ ಬೆಂಕಿ ಹಚ್ಚಿ ಕಾರ್ಮಿಕನನ್ನು ಮಾಲೀಕನೇ ಕೊಂದು ಹಾಕಿದ ಘಟನೆ ಮಂಗಳೂರಿನ ಮುಳಿಹಿತ್ಲು ಜಂಕ್ಷನ್​ ಬಳಿಯಲ್ಲಿ ಸಂಭವಿಸಿದೆ. ಉತ್ತರ ಭಾರತ ಮೂಲದ ಗಜ್ಞಾನ್​ ಅಲಿಯಾಸ್​ ಜಗು ಕೊಲೆಯಾದ ಕಾರ್ಮಿಕ. ಮುಶುಪಾ ಜನರಲ್ ಸ್ಟೋರ್​ ಮಾಲೀಕನಾದ ತೌಸಿಫ್​ ಹುಸೈನ್​ ಎಂಬಾತ ಈ ದುಷ್ಕೃತ್ಯ ಎಸಗಿದ್ದಾನೆ. ಶನಿವಾರ ಬೆಳಗ್ಗೆ 7:30ರ ಸುಮಾರಿಗೆ ಜಗುಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಆತನನ್ನು ಕೊಂದಿದ್ದ ತೌಸಿಫ್​ ಹುಸೈನ್​ ಈ ಘಟನೆಯಿಂದ ತನ್ನನ್ನು ತಾನು ಬಚಾವ್​ ಮಾಡೋಕೆ ಹೊಸ […]

ಕರಾವಳಿ

ಮಂಗಳೂರು ಮಾಜಿ ಮೇಯರ್ ರಜನಿ ದುಗ್ಗಣ್ಣ ನಿಧನ

ಮಂಗಳೂರು : ಮಾಜಿ ಮೇಯರ್ ರಜನಿ ದುಗ್ಗಣ್ಣ(67) ಅವರು ಭಾನುವಾರ ನಿಧನರಾದರು. ಅನಾರೋಗ್ಯದಿಂದ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮಂಗಳೂರಿನ 24ನೇ ಮೇಯರ್ ಆಗಿ ಕಾರ್ಯನಿರ್ವಹಿಸಿದ್ದರು. 2010ರಲ್ಲಿ ಅವರು ಮಂಗಳೂರು ಮೇಯರ್ ಆಗಿದ್ದರು. ಮಂಗಳೂರಿಗೆ ಅವರು 5ನೇ ಮಹಿಳಾ ಮೇಯರ್. ರಾಜಕೀಯವಾಗಿ ಅವರು ಬಿಜೆಪಿಯನ್ನು ಪ್ರತಿನಿಧಿಸುತ್ತಿದ್ದರು. ಅವರು ಒಬ್ಬ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ರಜನಿ ದುಗ್ಗಣ ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕರಾವಳಿ ಶಾಲಾ ಕಾಲೇಜು

ಭಾರೀ ಮಳೆ ಹಿನ್ನೆಲೆ; ದಕ್ಷಿಣ ಕನ್ನಡ & ಉಡುಪಿ ಜಿಲ್ಲೆಯಲ್ಲಿ ಶಾಲೆ, ಪಿಯು ಕಾಲೇಜುಗಳಿಗೆ ನಾಳೆ(ಜೂ.7)ಯೂ ರಜೆ

ಮಂಗಳೂರು:ದ.ಕ.ಜಿಲ್ಲೆಯಲ್ಲಿ ವ್ಯಾಪಕ ಮಳೆ ಹಿನ್ನೆಲೆ, ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರಕಾರಿ, ಅನುದಾನಿತ, ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ಪದವಿಪೂರ್ವ ಕಾಲೇಜುಗಳಿಗೆ ಜು.7ರಂದು ರಜೆ ಘೋಷಿಸಲಾಗಿದೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಈ ಕುರಿತು ಆದೇಶವನ್ನು ಹೊರಡಿಸಿದ್ದಾರೆ. ನೀರು ನಿಲ್ಲುವ ತಗ್ಗು ಪ್ರದೇಶ ಕೆರೆ, ನದಿ, ಸಮುದ್ರ ತೀರಕ್ಕೆ ಮಕ್ಕಳು ತೆರಳದಂತೆ ಪಾಲಕರು ಎಚ್ಚರಿಕೆ ವಹಿಸುವಂತೆ ಸೂಚನೆಯನ್ನು ನೀಡಲಾಗಿದೆ. ಉಡುಪಿ ಜಿಲ್ಲೆಯಲ್ಲೂ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಜೂ(7) ನಾಳೆ ಜಿಲ್ಲೆಯ ಎಲ್ಲಾ ಶಾಲಾ-ಪದವಿ ಪೂರ್ವ ಕಾಲೇಜುಗಳಿಗೆ […]

ಅಪರಾಧ

ಬಂಟ್ವಾಳ; ತುಂಬೆ ಬಳಿ ಕಾರು ಅಪಘಾತ; ಕಾಲೇಜು ವಿದ್ಯಾರ್ಥಿನಿ ದುರ್ಮರಣ

ಬಂಟ್ವಾಳ: ಚಾಲಕ‌ನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟಿರುವ ಘಟನೆ ತುಂಬೆಯಲ್ಲಿ ನಡೆದಿದೆ. ಮಂಗಳೂರು ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ, ಪುತ್ತೂರಿನ ಕೂರ್ನಡ್ಕ ನಿವಾಸಿ ಹನಾ (19) ಮೃತಪಟ್ಟ ವಿದ್ಯಾರ್ಥಿನಿ. ಕೂರ್ನಡ್ಕ ನಿವಾಸಿ ಅಬ್ದುಲ್ ಮಜೀದ್ ಹಾಗೂ ಶಮೀಮಾ ದಂಪತಿಯ ಪುತ್ರಿಯಾಗಿರುವ ಹನಾ ಅಲೋಶಿಯಸ್ ಕಾಲೇಜಿನ ಬಿಬಿಎಂ ವಿದ್ಯಾರ್ಥಿನಿ. ಹನಾ ಪುತ್ತೂರಿನಿಂದ ಮಂಗಳೂರು ಕಡೆಗೆ ಐ20 ಕಾರಿನಲ್ಲಿ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು, ಪಲ್ಟಿಯಾಗಿದೆ. ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿದೆ.

ಕರಾವಳಿ

*ಪಟ್ಲ ಫೌಂಡೇಶನ್ ಟ್ರಸ್ಟ್ ಯಕ್ಷಾಶ್ರಯ ಯೋಜನೆಯಡಿ ಆರ್ಥಿಕ ಕೊಡುಗೆ*

ಮಂಗಳೂರು: ಯಕ್ಷಗಾನ ಕಲಾವಿದರಿಗೆ ಯಕ್ಷಧ್ರುವ  ಪಟ್ಲ ಫೌಂಡೇಶನ್ ಟ್ರಸ್ಟಿನ ಯೋಜನೆಗಳಲ್ಲಿ ಒಂದಾದ ಯಕ್ಷಾಶ್ರಯದಡಿ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯವನ್ನು ಟ್ರಸ್ಟ್ ಕಚೇರಿಯಲ್ಲಿ ವಿತರಿಸಲಾಯಿತು. ಸುಂಕದಕಟ್ಟೆ ಮೇಳದ ಜಯೇಂದ್ರ  ಕಿದೂರ್, ಸಸಿಹಿತ್ಲು ಮೇಳದ ಗುಡ್ಡಪ್ಪ ಸುವರ್ಣ ಇವರುಗಳಿಗೆ 2ನೇ ಕಂತು ಮತ್ತು ಬಪ್ಪನಾಡು ಮೇಳದ ನಾಗಪ್ಪ ಪಡುಮಲೆ ಇವರಿಗೆ ಕೊನೆಯ ಕಂತಿನ ಮೊತ್ತದ ಚಕ್ಕನ್ನು ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರು  ವಿತರಿಸಿದರು. ಈ ಸಂದರ್ಭದಲ್ಲಿ ಫೌಂಡೇಶನಿನ ಪ್ರಧಾನ ಕಾರ್ಯದರ್ಶಿ ಅಡ್ಯಾರ್ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ […]

ಕರಾವಳಿ ಶಾಲಾ ಕಾಲೇಜು

ದ. ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಂಗಳೂರು ನಗರ ಪ್ರದಕ್ಷಿಣೆ

ಗುರುವಾರ ಶಾಲಾ ಕಾಲೇಜಿಗೆ ರಜೆ ಮಂಗಳೂರು : ನಗರದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಬುಧವಾರ ನಗರ ಪ್ರದಕ್ಷಿಣೆ ಕೈಗೊಂಡರು. ನಗರದ ಪಂಪ್‌ ವೇಲ್, ಉಜ್ಜೋಡಿ, ಗೋರಿಗುಡ್ಡೆ, ಎಕ್ಕೂರು, ನೇತ್ರಾವತಿ ಬ್ರಿಡ್ಜ್, ನಂತೂರು, ಕೆಪಿಟಿ ವೃತ್ತ ಸೇರಿದಂತೆ ವಿವಿಧೆಡೆ ಮಿಂಚಿನ ಸಂಚಾರ ನಡೆಸಿ ಮಳೆಯಿಂದ ಆಗಿರುವ ಪರಿಸ್ಥಿತಿಯನ್ನು ಪರಿಶೀಲಿಸಿದರು. ತೀವ್ರ ಸಮಸ್ಯೆ ಉಂಟಾಗಿರುವ ಕಡೆಗಳಲ್ಲಿ ತುರ್ತು ಕೆಲಸಗಳನ್ನು ಕೈಗೊಂಡು ಜನರಿಗೆ ಸಮಸ್ಯೆ ಆಗದ ರೀತಿಯಲ್ಲಿ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು […]

ಕರಾವಳಿ

ಕರಾವಳಿಯಲ್ಲಿ ಭಾರೀ ಮಳೆ – ಬುಧವಾರ ಶಾಲಾ ಕಾಲೇಜಿಗೆ ರಜೆ

ಕರಾವಳಿ ಕರ್ನಾಟಕದಲ್ಲಿ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಅಂಗನವಾಡಿ ಹಾಗೂ ಶಾಲಾ- ಕಾಲೇಜುಗಳಿಗೆ ಜುಲೈ 5ರಂದು ರಜೆ ಸಾರಲಾಗಿದೆ.ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಜು. 5 ರವರೆಗೆ ರೆಡ್ ಅಲಟ್೯ ಘೋಷಣೆಯಾಗಿರುವ ಕಾರಣ, ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳಿಗೆ ಜು.5ರ ಬುಧವಾರ ರಜೆ ಘೋಷಿಸಲಾಗಿದೆ.ಮುಂಜಾಗ್ರತಾ ಕ್ರಮವಾಗಿ […]

eMedia Kannada  @2025. All Rights Reserved.