Tag: mangaluru

ಕರಾವಳಿ ವಿಡಿಯೋ

ಮಂಗಳೂರು ನಗರದ ಹಲವೆಡೆ ಕೃತಕ ನೆರೆ, ರಸ್ತೆ, ಅಂಗಡಿಗಳು ಮುಳುಗಡೆ

ಮಂಗಳೂರು: ಕೆಲವು ದಿನಗಳಿಂದ ಕರಾವಳಿಯಾದ್ಯಂತ ಉತ್ತಮ ವರ್ಷಧಾರೆಯಾಗುತ್ತಿದ್ದು, ಮಂಗಳೂರು ನಗರದ ಹಲವೆಡೆ ಕೃತಕ ನೆರೆ ಆವರಿಸಿದೆ. ರಸ್ತೆ, ಅಂಗಡಿಗಳು ಮುಳುಗಡೆಯಾಗಿವೆ. ಪಂಪ್ ವೆಲ್ ಮೇಲ್ಸೇತುವೆ ಅಡಿಭಾಗದಲ್ಲಿ ನೀರು ತುಂಬಿಕೊಂಡಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಮಂಗಳೂರು ನಗರಕ್ಕೆ ಪ್ರವೇಶಿಸಲು ಪಂಪ್ ವೆಲ್ ಪ್ರಮುಖ ಮಾರ್ಗವಾಗಿದ್ದು, ಇದೀಗ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ನೀರು ಕಾಲುವೆಯಲ್ಲಿ ಹರಿಯಲು ಸಾಧ್ಯವಾಗದೆ ಪಂಪ್ ವೆಲ್ ಮೇಲ್ಸೇತುವೆ ಕೆಳಗಿನ ರಸ್ತೆಯಲ್ಲಿ ಕಟ್ಟಿ ನಿಂತಿದೆ. ಹೀಗಾಗಿ ಇಲ್ಲಿ ವಾಹನಗಳು ಚಲಿಸಲು ಸಾಧ್ಯವಾಗದೆ ಸಾಲುಗಟ್ಟಿ ನಿಂತಿವೆ. […]

ಅಪರಾಧ

ಮಂಗಳೂರು; ಮಕ್ಕಳಿಗೆ ವಾಹನ ಕೊಟ್ಟು ಅಪಘಾತವಾದರೆ ಪೋಷಕರ ಮೇಲೆ ಕೇಸ್

  ಮಂಗಳೂರು: ಮಕ್ಕಳು ದ್ವಿಚಕ್ರ ವಾಹನ ಚಲಾಯಿಸಿ ಅಪಘಾತ ನಡೆದರೆ ಹೆತ್ತವರ ಮೇಲೆ ಕೇಸ್ ದಾಖಲಿಸಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಹೇಳಿದ್ದಾರೆ. ದ್ವಿಚಕ್ರ ವಾಹನ ಅಪಘಾತಗಳ ಬಗ್ಗೆ ನಿನ್ನೆ ನಡೆದ ನಗರ ಪೊಲೀಸ್ ಕಮೀಷನರ್ ಅವರ ಫೋನ್-ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಈ ಬಗ್ಗೆ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಅವರು, ಇನ್ನು ಮುಂದೆ ಮಕ್ಕಳು ದ್ವಿಚಕ್ರ ಚಲಾಯಿಸಿ ಅಪಘಾತ ನಡೆಸಿದರೆ […]

ಕರಾವಳಿ

Breaking news ಮಂಗಳೂರಿನಲ್ಲಿ ಜೂನ್  30 : ಸ್ಥಗಿತಗೊಂಡ ಸರಕಾರಿ ನರ್ಮ್ ಬಸ್ ಪುನರಾರಂಭಕ್ಕೆ ಒತ್ತಾಯಿಸಿ ಪ್ರತಿಭಟನಾ ಪ್ರದರ್ಶನ

ಮಂಗಳೂರು : ಸ್ಥಗಿತಗೊಂಡ ಸರಕಾರಿ ನರ್ಮ್ ಬಸ್ ಗಳನ್ನು ಪುನರಾರಂಭಿಸಲು ಒತ್ತಾಯಿಸಿ, ಜಿಲ್ಲೆಯ ವಿವಿಧ ಭಾಗಗಳಿಗೆ ಸರಕಾರಿ ಬಸ್ ಗಳನ್ನು ಒದಗಿಸಲು ಆಗ್ರಹಿಸಿ, ಮಂಗಳೂರು ಮೂಡಬಿದ್ರಿ ಕಾರ್ಕಳ ಹಾಗೂ ಮಂಗಳೂರು ಉಡುಪಿ ನಡುವೆ ಸರಕಾರಿ ಬಸ್  ಸೇವೆ ಪ್ರಾರಂಭಿಸಲು ಒತ್ತಾಯಿಸಿ ಜನವಾದಿ ಮಹಿಳಾ ಸಂಘಟನೆ (JMS) ದ. ಕ.ಜಿಲ್ಲಾ ಸಮಿತಿ ಮಂಗಳೂರು ಇವರಿಂದ ಜೂನ್ 30, ಶುಕ್ರವಾರ ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನಾ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಯಾಣ

ಮೆಗಾ ರೈಲು ಬ್ಲಾಕ್ : ನಾಳೆ ಕೊಂಕಣ ಮಾರ್ಗ ಪ್ರಯಾಣ ತುಸು ವ್ಯತ್ಯಯ

ಮೆಗಾ ರೈಲು ಬ್ಲಾಕ್ : ನಾಳೆ ಕೊಂಕಣ ಮಾರ್ಗ ಪ್ರಯಾಣ ತುಸು ವ್ಯತ್ಯಯ ಮಂಗಳೂರು: ಮಡಗಾಂವ್- ಕುಮಟಾ ನಡುವೆ ರೈಲು ಹಳಿಯಲ್ಲಿ ಇಂಜಿನಿಯರಿಂಗ್, ಸಿಗ್ನಲ್ ಮತ್ತು ಟೆಲಿಕಮ್ಯೂನಿಕೇಶನ್ ಹಾಗೂ ಇಲೆಕ್ಟ್ರಿಕಲ್ ಸಂಬಂಧಿಸಿದ ಕಾಮಗಾರಿಗಳು ಜೊತೆಯಾಗಿ ನಡೆಯಲಿರುವ ಹಿನ್ನೆಲೆಯಲ್ಲಿ ಜೂನ್ 15 ರಂದು ಈ ಮಾರ್ಗದಲ್ಲಿ ನಾಲ್ಕು ಗಂಟೆಗಳ ಮೆಗಾ ಬ್ಲಾಕ್ ಸೃಷ್ಟಿಯಾಗಲಿದೆ. ಪರಿಣಾಮ ಜೂ.15 ರಂದು ಕೊಂಕಣ ಮಾರ್ಗ ಸಂಚರಿಸುವ ರೈಲುಗಳ ಪ್ರಯಾಣದಲ್ಲಿ ತುಸು ವ್ಯತ್ಯಯವಾಗಲಿದೆ. ರೈಲು ನಂ. 06602 ಮಂಗಳೂರು ಸೆಂಟ್ರಲ್ – ಮಡಗಾಂವ್ ಕುಮಟಾ […]

ಪ್ರಚಲಿತ

ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ (ರಿ.) ವತಿಯಿಂದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಅಭಿನಂದನಾ ಸಮಾರಂಭ

 ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ (ರಿ.) ವತಿಯಿಂದ ಕಾಪು ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಅಭಿನಂದನಾ ಸಮಾರಂಭ    ಕುಡ್ಲ ಪೆವಿಲಿಯನ್ ಸಭಾಂಗಣದಲ್ಲಿ ನೆರವೇರಿತು.  ಈ ಸಂದರ್ಭದಲ್ಲಿ ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ (ರಿ.) ಸ್ಥಾಪಕಾಧ್ಯಕ್ಷರಾದ ಕೆ. ಸದಾನಂದ, ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ. ಮೋಹನ್ ಆಳ್ವ, ಡಾ. ಭಾಸ್ಕರ್ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಮೋನಪ್ಪ ಭಂಡಾರಿ, ಉದ್ಯಮಿಗಳಾದ ದೇವಾನಂದ ಶೆಟ್ಟಿ, ಕೆ.ಎಂ.ಎಫ್ ಅಧ್ಯಕ್ಷರಾದ ಸುಚರಿತ ಶೆಟ್ಟಿ, […]

ಅಪರಾಧ

breaking news ಮಂಗಳೂರಿನಲ್ಲಿ ಯುವತಿಯೋರ್ವಳು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣು

ಮಂಗಳೂರಿನಲ್ಲಿ ಯುವತಿಯೋರ್ವಳು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣು ಮಂಗಳೂರು :  ಯುವತಿಯೋರ್ವಳು ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಪಲದ ಚಿತ್ರಂಜಲಿ ನಗರದಲ್ಲಿ ಗುರುವಾರ ಘಟಿಸಿದೆ. ಕುಂಪಲ ಚಿತ್ರಾಂಜಲಿ  ನಗರದ ನಿವಾಸಿ ಅಶ್ವಿನಿ ಬಂಗೇರ (25) ಎಂದು ತಿಳಿದುಬಂದಿದೆ. ಅಶ್ವಿನಿಯ ಸ್ನೇಹಿತೆ ಬಂದು ಕೋಣೆಯ ಬಾಗಿಲು ಒಡೆದು ನೋಡಿದಾಗ, ಅಶ್ವಿನಿ ಫ್ಯಾನಿಗೆ ನೀನು ಬಿಗಿದು ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಅಶ್ವಿನಿ ಬರೆದ 24 ಡೆತ್ ಪುಟಗಳ ಡೆತ್‌ ನೋಟ್‌ ಪೊಲೀಸರಿಗೆ ದೊರೆತಿದೆ. ಬ್ಯಾಂಕ್ ಸಾಲದಿಂದ […]

ಅಪರಾಧ ಕರಾವಳಿ

ಪಿಲಿಕುಳ ಜೈವಿಕ ಮೃಗಾಲಯದಲ್ಲಿ ಹುಲಿ ಸಾವು

  ಮಂಗಳೂರು: ಪಿಲಿಕುಳದ ಡಾ| ಶಿವರಾಮ ಕಾರಂತ ಜೈವಿಕ ಮೃಗಾಲಯದಲ್ಲಿ ಹುಲಿಯೊಂದು ಇಂದು ಹೃದಯಾಘಾತವಾಗಿ ಸಾವನ್ನಪ್ಪಿದೆ. ಇತ್ತೀಚೆಗೆ ಎರಡು ಹುಲಿಗಳ ಮಧ್ಯೆ ನಡೆದ ಭೀಕರ ಕಾಳಗದಲ್ಲಿ ಗಾಯಗೊಂಡಿದ್ದ ಹುಲಿ ಇಂದು ಹೃದಯಾಘತದಿಂದ ಮೃತಪಟ್ಟಿದೆ. ಗಾಯಗೊಂಡಿದ್ದ ಈ ಹುಲಿ ಚೇತರಿಸಿತ್ತು. ಆದರೆ ಬುಧವಾರ ಹೃದಯಾಘಾತದಿಂದ ಸಾವನ್ನಪ್ಪಿದೆ. ಮೃತಪಟ್ಟ ಹುಲಿಯ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.

ಅಪರಾಧ ಕರಾವಳಿ

ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ದಲ್ಲಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿ ಆತ್ಮಹತ್ಯೆ

ಮಂಗಳೂರು : ಇಲ್ಲಿನ  ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ಕೀರ್ತನ್ ಕುಮಾರ್(38) ಎಂಬುವವರು ಕಚೇರಿ ಆವರಣದ ಗೋದಾಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನಾರೋಗ್ಯದಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಪತ್ನಿ ಮತ್ತು ಮಗುವನ್ನು ಅಗಲಿದ್ದಾರೆ. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರಾವಳಿ ಜೀವನಶೈಲಿ ವ್ಯವಹಾರ

ಮಂಗಳೂರು : ವಿವಿ ಕುಲಪತಿ ಪ್ರೊ. ಪಿ.ಎಸ್. ಯಡಿಪಡಿತ್ತಾಯ ನಿವೃತ್ತಿ, ಅಧಿಕಾರ ಹಸ್ತಾಂತರ

ಮಂಗಳೂರು : ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಸೇವಾನಿವೃತ್ತಿ ಹೊಂದಿದ್ದುಶುಕ್ರವಾರ ಅಧಿಕಾರ ಹಸ್ತಾಂತರಿಸಿದರು. ರಾಜ್ಯ ಶಾಸ್ತ್ರದ ಹಿರಿಯ ಪ್ರೊಫೆಸರ್ ಹಾಗೂ ಆರ್ಟ್ಸ್‌ ವಿಭಾಗದ ಡೀನ್ ಆಗಿರುವ ಪ್ರೊ. ಜಯರಾಜ ಅಮೀನ್ ಅವರಿಗೆ ಪ್ರೊ ಸುಬ್ರಹ್ಮಣ್ಯ ಯಡಪಡಿತ್ತಾಯಅವರು ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪ್ರೊ .ರಾಜಕೃಷ್ಣ ಚರಣ್ಣನವರ್, ಪ್ರೊ .ಸಂಗಪ್ಪ, ವಿವಿಧ ವಿಭಾಗಗಳ ಮುಖ್ಯಸ್ಥರು ,ಸಂಯೋಜಕರು ಉಪಸ್ಥಿರಿತರಿದ್ದರು.

eMedia Kannada  @2025. All Rights Reserved.