• Home  
  • ಮಣಿಪಾಲ: ಕೋಳಿ‌ ಅಂಕಕ್ಕೆ ದಾಳಿ ಮಾಡಿದ ಪೊಲೀಸರಿಗೇ ಆವಾಜ್- ತಬ್ಬಿಬ್ಬಾದ ಪೊಲೀಸರು!
- ಅಪರಾಧ - ವಿಡಿಯೋ

ಮಣಿಪಾಲ: ಕೋಳಿ‌ ಅಂಕಕ್ಕೆ ದಾಳಿ ಮಾಡಿದ ಪೊಲೀಸರಿಗೇ ಆವಾಜ್- ತಬ್ಬಿಬ್ಬಾದ ಪೊಲೀಸರು!

Share: ಮಣಿಪಾಲ: ಕೋಳಿ‌ ಅಂಕಕ್ಕೆ ದಾಳಿ ಮಾಡಿದ ಪೊಲೀಸರಿಗೇ ಆವಾಜ್- ತಬ್ಬಿಬ್ಬಾದ ಪೊಲೀಸರು!  ಮಣಿಪಾಲ‌: ಮಣಿಪಾಲ ಬಳಿಯ 80 ಬಡಗುಬೆಟ್ಟುವಿನಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರಿಗೇ ಗುಂಪೊಂದು ಅವಾಜ್ ಹಾಕಿದ ಪ್ರಸಂಗ ನಡೆದಿದೆ.  ಈ ಗುಂಪು ಬೆದರಿಸುವ ರೀತಿಯಲ್ಲಿ ಪೊಲೀಸರಿಗೆ ಆವಾಜ್ ಹಾಕುತ್ತಿದ್ದರೂ ಪೊಲೀಸರು ಮಾತ್ರ ಅಸಹಾಯಕರಾಗಿ ನಿಂತಿದ್ದಾರೆ.  ಕೋಳಿ ಅಂಕ ನಡೆಸುತ್ತಿದ್ದ ತಂಡವು , “ನೀವು ಇಲ್ಲಿಗೆಲ್ಲ ಬರುತ್ತೀರಿ. ಆದರೆ ಪಬ್, ಬಾರ್ ಓಸಿ, ಮಟ್ಕಾ ನಡೆಯುತ್ತಿದ್ದರೂ ಸುಮ್ಮನಿರುತ್ತೀರಿ ಯಾಕೆ? ಯಾಕೆಂದರೆ ನಿಮಗೆ […]

ಮಣಿಪಾಲ: ಕೋಳಿ‌ ಅಂಕಕ್ಕೆ ದಾಳಿ ಮಾಡಿದ ಪೊಲೀಸರಿಗೇ ಆವಾಜ್- ತಬ್ಬಿಬ್ಬಾದ ಪೊಲೀಸರು!

 ಮಣಿಪಾಲ‌: ಮಣಿಪಾಲ ಬಳಿಯ 80 ಬಡಗುಬೆಟ್ಟುವಿನಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರಿಗೇ ಗುಂಪೊಂದು ಅವಾಜ್ ಹಾಕಿದ ಪ್ರಸಂಗ ನಡೆದಿದೆ.

 ಈ ಗುಂಪು ಬೆದರಿಸುವ ರೀತಿಯಲ್ಲಿ ಪೊಲೀಸರಿಗೆ ಆವಾಜ್ ಹಾಕುತ್ತಿದ್ದರೂ ಪೊಲೀಸರು ಮಾತ್ರ ಅಸಹಾಯಕರಾಗಿ ನಿಂತಿದ್ದಾರೆ.

 ಕೋಳಿ ಅಂಕ ನಡೆಸುತ್ತಿದ್ದ ತಂಡವು , “ನೀವು ಇಲ್ಲಿಗೆಲ್ಲ ಬರುತ್ತೀರಿ. ಆದರೆ ಪಬ್, ಬಾರ್ ಓಸಿ, ಮಟ್ಕಾ ನಡೆಯುತ್ತಿದ್ದರೂ ಸುಮ್ಮನಿರುತ್ತೀರಿ ಯಾಕೆ? ಯಾಕೆಂದರೆ ನಿಮಗೆ ಅಲ್ಲಿ ಮಾಮೂಲಿ ಸಿಗುತ್ತೆ. ಮಾಜಿ‌ ಸಚಿವ  ಸೊರಕೆ ಮಾತು ಕೇಳ್ತೀರಾ? ಅವರು ಯಾರು?  ನಮ್ಮಲ್ಲೂ ಐದು ಜನ ಶಾಸಕರಿದ್ದಾರೆ. ಮಣಿಪಾಲದಲ್ಲಿ ಪಬ್, ಬಾರ್ ಗಳು ಮದ್ಯ ರಾತ್ರಿ ವರೆಗೆ ನಡೆಯುತ್ತವೆ” ಎಂದು ಗುಂಪು ಪೊಲೀಸರಿಗೇ ಆವಾಜ್ ಹಾಕಿದೆ.

ಅವಾಜ್ ಹಾಕಿದ ಗುಂಪಿನಲ್ಲಿ ಪಂಚಾಯತ್ ಸದಸ್ಯನೂ ಇದ್ದ ಎನ್ನಲಾಗಿದೆ.

ಆದರೆ ಈತನಕ ಪೊಲೀಸರು ಇವರ ವಿರುದ್ಧ ಕ್ರಮ ಕೈಗೊಂಡ ಬಗ್ಗೆ ವರದಿಯಾಗಿಲ್ಲ.

Leave a comment

Your email address will not be published. Required fields are marked *

eMedia Kannada  @2025. All Rights Reserved.