Tag: Moodbidri

ಶಾಲಾ ಕಾಲೇಜು

ಕೊರಿಯಾ ಜಾಂಬೂರಿಗೆ ಮೂಡಬಿದ್ರಿಯ ಆಳ್ವಾಸ್ ವಿದ್ಯಾರ್ಥಿಗಳು

ಕೊರಿಯಾ ಜಾಂಬೂರಿಗೆ ಮೂಡಬಿದ್ರಿಯ ಆಳ್ವಾಸ್ ವಿದ್ಯಾರ್ಥಿಗಳು ದಕ್ಷಿಣ ಕೊರಿಯಾದಲ್ಲಿ ೨೫ನೇ ಅಂತರರಾಷ್ಟ್ರೀಯ ಜಾಂಬೂರಿ ಮೂಡಬಿದ್ರೆ. ವಿದ್ಯಾಗಿರಿ: ದಕ್ಷಿಣ ಕೊರಿಯಾದ ಜಿಯೋಲ್ಲಾದಲ್ಲಿ ಆಗಸ್ಟ್ ೨ ರಿಂದ ೧೨ರ ವರೆಗೆ ೨೫ನೇ ಅಂತರರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೂರಿ ನಡೆಯಲಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ೮ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಆಳ್ವಾಸ್‌ನ ೮ ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಒಟ್ಟು ೪೮ ಸ್ಕೌಟ್ಸ್ ಮತ್ತು ಗೈಡ್ಸ್ಗಳು ಭಾಗವಹಿಸಲಿದ್ದಾರೆ.  ಆಳ್ವಾಸ್ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಅನನ್ಯ, ಹತ್ತನೇಯ […]

ಶಾಲಾ ಕಾಲೇಜು

‘ಸುಳ್ಳು ಸುದ್ದಿ ಕಾಲದಲ್ಲಿ ಸಂಶೋಧನೆ ಅವಶ್ಯ’ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಸತೀಶ್‌ಕುಮಾರ್ ಅಂಡಿಂಜೆ

 ‘ಸುಳ್ಳು ಸುದ್ದಿ ಕಾಲದಲ್ಲಿ ಸಂಶೋಧನೆ ಅವಶ್ಯ’ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಸತೀಶ್‌ಕುಮಾರ್ ಅಂಡಿಂಜೆ ವಿದ್ಯಾಗಿರಿ: ‘ಸುಳ್ಳು ಸುದ್ದಿ ಮತ್ತು ಮಾಹಿತಿ ತಿರುಚುವ ಈ ಕಾಲಘಟ್ಟದಲ್ಲಿ ಸತ್ಯ ಹುಡುಕಾಡಲು ಸಂಶೋಧನೆ ಅತೀ ಅಗತ್ಯವಾಗಿದೆ’ ಎಂದು ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಸತೀಶ್‌ಕುಮಾರ್ ಅಂಡಿಂಜೆ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ ವಿಭಾಗದಲ್ಲಿ  ‘ಸಂಶೋಧನಾ ಚಿತ್ರಣದ ನಾವಿಕತೆ, ಪರಿಕಲ್ಪನೆ ಮತ್ತು ಪರಿಣಾಮ’ ಕುರಿತು ಅವರು ಮಾತನಾಡಿದರು. ಸಂಶೋಧನೆ ಬಹು ಆಯಾಮವನ್ನು ಹೊಂದಿದೆ. […]

ಶಾಲಾ ಕಾಲೇಜು

‘ಆ್ಯಗಾನ್ -೨೦೨೩’ಮ್ಯಾನೇಜ್ಮೆಂಟ್ ಫೆಸ್ಟ್

ಮೂಡಬಿದ್ರೆ ಆಳ್ವಾಸ್‌ ನಲ್ಲಿ ಎರಡು ದಿನಗಳ ರಾಜ್ಯ ಮಟ್ಟದ ಮ್ಯಾನೇಜ್ಮೆಂಟ್ ಫೆಸ್ಟ್‌ ಮೂಡುಬಿದಿರೆ: ನಿರ್ವಹಣೆಯು ಸರಿಯಾದ ಯೋಜನೆಯಿಂದ ಪ್ರಾರಂಭವಾಗಿ ನಿಯಂತ್ರಣದಿAದ ಕೊನೆಗೂಳ್ಳುವಂತಹದ್ದು. ಅದೇ ರೀತಿ ವಿದ್ಯಾರ್ಥಿಗಳಿಗೆ  ಭವಿಷ್ಯದ  ಕುರಿತು ಸರಿಯಾದ ಯೋಜನೆ ಹಾಗು ದೂರದೃಷ್ಟಿ ಇದ್ದರೆ ಬದುಕಿನಲ್ಲಿ ಸಫಲತೆ ಸಿಗುತ್ತದೆ ಎಂದು ಮುಂಬೈನ ಅಲೆಂಬಿಕ್  ಫಾರ್ಮಸ್ವಿಟಿಕಲ್ಸ್ ಲಿಮಿಟೆಡ್‌ನ ಮಾನವ ಸಂಪನ್ಮೂಲ ಮತ್ತು ಬಿಸಿನೆಸ್ ಸಪೋರ್ಟ್ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ ಹೇಳಿದರು. ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿAಗ್ ಹಾಗೂ ತಂತ್ರಜ್ಞಾನ ಕಾಲೇಜಿನ ಸ್ನಾತಕೋತ್ತರ ಎಂ.ಬಿ.ಎ ವಿಭಾಗದ ವತಿಯಿಂದ ಎರಡು […]

ಶಾಲಾ ಕಾಲೇಜು

ಆಳ್ವಾಸ್‌ ಕಾಲೇಜಿನಲ್ಲಿ ಹರೀಶ್ ಟಿ.ಜಿ ಕೃತಿ ‘ಕಡಿದ ದಾರಿ’ ಬಿಡುಗಡೆ

‘ತನ್ನೊಳಗೆ ಕರೆದೊಯ್ಯುವ ಕತೆಯೇ ಉತ್ತಮ’ : ಡಾ. ಪುಂಡಿಕಾಯಿ  ಮೂಡಬಿದ್ರಿ, ವಿದ್ಯಾಗಿರಿ: ‘ಕತೆ ತನ್ನೊಳಗೆ ಕರೆದೊಯ್ಯಬೇಕು. ಅಲ್ಲಿ ಓದುಗ ತನ್ನನ್ನು ಗುರುತಿಸುವಂತಾಗಬೇಕು. ಅದೇ ಅತ್ಯುತ್ತಮ ಕತೆ’ ಎಂದು ಇತಿಹಾಸ ಸಂಶೋಧಕ, ನಿವೃತ್ತ ಪ್ರಾಧ್ಯಾಪಕ ಡಾ. ಪುಂಡಿಕಾಯಿ  ಗಣಪಯ್ಯ ಭಟ್ ಹೇಳಿದರು. ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗ ಮತ್ತು ಐ.ಕ್ಯೂ.ಎ.ಸಿ ಸಹಯೋಗದಲ್ಲಿ ಬುಧವಾರ ಕುವೆಂಪು ಸಭಾಂಗಣಲ್ಲಿ ನಡೆದ ‘ಕಡಿದ ದಾರಿ’ ಕಥಾಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮನ್ನು ಓದಿಸಿಕೊಂಡು ಹೋಗುವ ಕೃತಿಯನ್ನು ನಾವು ಗುರುತಿಸುತ್ತೇವೆ.  ಅದರ ವಿಷಯಗಳನ್ನು […]

ಶಾಲಾ ಕಾಲೇಜು

ಆಳ್ವಾಸ್‌ನಲ್ಲಿ ‘ಭಿಷಕ್ – ೨೦೨೩’  ರಾಷ್ಟ್ರೀಯ ವೈದ್ಯರ ದಿನ ಆಚರಣೆ

ವೈದ್ಯನೂ ಮಾನವನೇ: ಡಾ.ರಾಜೇಶ್ ಬಲ್ಲಾಳ ಮೂಡಬಿದ್ರೆ,ವಿದ್ಯಾಗಿರಿ: ಪರಿಪೂರ್ಣ ಅಭ್ಯಾಸದಿಂದ ಮಾತ್ರ ಯಶಸ್ವಿ ವೈದ್ಯನಾಗಲು ಸಾಧ್ಯ ಎಂದು ಮಂಗಳೂರಿನ ಕೆ.ಎಂ.ಸಿ ಕಾಲೇಜಿನ ಪ್ರಾಧ್ಯಾಪಕ ಡಾ.ರಾಜೇಶ್ ಬಲ್ಲಾಳ ಹೇಳಿದರು. ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಶನಿವಾರ ವಿ.ಎಸ್ ಆಚಾರ್ಯ ಸಂಭಾಗಣದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ವೈದರ ದಿನಾಚರಣೆ ‘ಭಿಷಕ್ -೨೦೨೩’ರಲ್ಲಿ ಅವರು ಮಾತನಾಡಿದರು. ವೈದ್ಯ ವೃತ್ತಿ ಕುರಿತು ಅರಿವು ಮೂಡಿಸಲು ಭಾರತರತ್ನ ಡಾ.ಬಿಧನ್ ಚಂದ್ರ ರಾಯ್ ಅವರ ನೆನಪಿನಲ್ಲಿ ಜುಲೈ ೧ರಂದು ‘ರಾಷ್ಟ್ರೀಯ ವೈದರ ದಿನ’ ಆಚರಿಸಲಾಗುತ್ತದೆ. ‘ವೈದ್ಯೋ […]

ಶಾಲಾ ಕಾಲೇಜು

ವೇಟ್‌ಲಿಫ್ಟಿಂಗ್: ಸಮಗ್ರ ಪ್ರಶಸ್ತಿ ಎತ್ತಿದ ಆಳ್ವಾಸ್

ಮಂಗಳೂರು ವಿ.ವಿ. ಅಂತರ ಕಾಲೇಜು ಪುರುಷ ಮತ್ತು ಮಹಿಳಾ  ಚಾಂಪಿಯನ್‌ಶಿಪ್ ವಿದ್ಯಾಗಿರಿ: ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಪುರುಷ ಮತ್ತು ಮಹಿಳಾ ವಿಭಾಗದ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಆಳ್ವಾಸ್ ಕಾಲೇಜು ಎತ್ತಿ ಹಿಡಿದಿದೆ. ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು ಕೃಷಿಸಿರಿ ವೇದಿಕೆಯಲ್ಲಿ ಹಮ್ಮಿಕೊಂಡ ಪಂದ್ಯಾವಳಿಯಲ್ಲಿ ಆಳ್ವಾಸ್ ಸಮಗ್ರ ಚಾಂಪಿಯನ್ ಆಯಿತು. ಮಹಿಳಾ ವಿಭಾಗದಲ್ಲಿ ಸತತ ೧೯ನೇ ಬಾರಿ ಚಾಂಪಿಯನ್ ಆದÀ ಆಳ್ವಾಸ್ ಕಾಲೇಜು ತಂಡವು ‘ಶಿರ್ವ […]

ಕರಾವಳಿ

‘ಘಾಂದ್ರುಕ್’ ಕಾದಂಬರಿ ಅವಲೋಕನ – ಸಂವಾದದಲ್ಲಿ ಕಾದಂಬರಿಕಾರ ಚಪ್ಪರಿಕೆ

ಮನುಷ್ಯನಾಗಿ ಬದುಕಲು ಕಲಿಸದ ಧರ್ಮ ಯಾಕೆ? ವಿದ್ಯಾಗಿರಿ: ‘ಮನುಷ್ಯನಿಗೆ ಮನುಷ್ಯನಾಗಿ ಬದುಕಲು ಕಲಿಸದ ಧರ್ಮ ಯಾಕೆ? ಎಂಬುದು ‘ಘಾಂದ್ರುಕ್’ ಕೃತಿಯ ಒಳನೋಟವೂ ಹೌದು’ ಎಂದು ಕಾದಂಬರಿಕಾರ ಸತೀಶ್ ಚಪ್ಪರಿಕೆ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ಕನ್ನಡ ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗಗಳು ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡ ತಮ್ಮ ‘ಘಾಂದ್ರುಕ್’ ಕಾದಂಬರಿ ಅವಲೋಕನ – ಸಂವಾದ ಕಾರ್ಯಕ್ರಮದಲ್ಲಿ ಅವರು ಪ್ರತಿಕ್ರಿಯಿಸಿದರು. ಧರ್ಮ ಇಂದು ವ್ಯಾಪಾರಿ ಸರಕಾಗುತ್ತಿದೆ. ಮನುಕುಲದ ಉದ್ಧಾರಕ್ಕಾಗಿ ಬಳಕೆಯಾಗುತ್ತಿಲ್ಲ. […]

ಕರಾವಳಿ

ಆಳ್ವಾಸ್ ಕೇಂದ್ರೀಯ ಶಾಲೆಯ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನೆ

ನಾಯಕತ್ವ ಇದ್ದಲ್ಲಿ ಗುರಿ ಸ್ಪಷ್ಟ: ವಿವೇಕ್ ಆಳ್ವ ವಿದ್ಯಾಗಿರಿ(ಮೂಡುಬಿದಿರೆ): ‘ನಾಯಕತ್ವ ಗುಣ ಇದ್ದವರಲ್ಲಿ ಗುರಿ ಸ್ಪಷ್ಟವಾಗಿರುತ್ತದೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಆಳ್ವಾಸ್ ಕೇಂದ್ರೀಯ ಶಾಲೆಯ ೨೦೨೩-೨೪ನೇ ಸಾಲಿನ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಅವರು ಮಾತನಾಡಿದರು. ನಾಯಕತ್ವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳುವುದರಿಂದ ಸಮಾಜದಲ್ಲಿ ಉತ್ತಮ ಪ್ರಜೆ ಆಗಬಹುದು. ಶಾಲಾ ಹಂತದಲ್ಲೇ ನಾಯಕತ್ವ ವಹಿಸಿ ಜವಾಬ್ದಾರಿಯನ್ನು ನಿಭಾಯಿಸಿ ಎಂದು ಕಿವಿಮಾತು ಹೇಳಿದರು.  ವಿದ್ಯಾರ್ಥಿಗಳಲ್ಲಿ ಶಿಸ್ತು ಹಾಗೂ ನಾಯಕತ್ವ ಗುಣವನ್ನು […]

ಕರಾವಳಿ ಶಾಲಾ ಕಾಲೇಜು

ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ‘ವೇದಾಂಗ-೨೦೨೩’

ವೇದಾಂಗಗಳಿಲ್ಲದೇ ವೇದ ಅಪೂರ್ಣ: ಜಿತಕಾಮಾನಂದ ಸ್ವಾಮೀಜಿ ವಿದ್ಯಾಗಿರಿ (ಮೂಡುಬಿದಿರೆ): ‘ವೇದಾಂಗಗಳಿಲ್ಲದೆ ವೇದ ಅಪೂರ್ಣ’ ಎಂದು ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷ ಜಿತಕಾಮಾನಂದ ಸ್ವಾಮೀಜಿ ಹೇಳಿದರು. ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಆಯುರ್ವೇದ ಸಂಹಿತಾ ಮತ್ತು ಸಿದ್ಧಾಂತ ವಿಭಾಗದ ವತಿಯಿಂದ ಶನಿವಾರ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ‘ವೇದಾಂಗ ೨೦೨೩’ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.  ಶಿಕ್ಷಾ, ಕಲ್ಪ, ನಿರುಕ್ತಾ, ವ್ಯಾಕರಣ, ಛಂದಸ್ಸು, ಜ್ಯೋತಿಷ್ಯ ಎಂಬ ಆರು ವೇದಾಂಗಗಳಿವೆ. ನಿರಂತರ ಅಭ್ಯಾಸದ ಮೂಲಕ ವೇದಗಳನ್ನು ಅರ್ಥೈಸಿಕೊಳ್ಳಲು ಸಾಧ್ಯ […]

ಕರಾವಳಿ ಶಾಲಾ ಕಾಲೇಜು

ಆಳ್ವಾಸ್‌ನಲ್ಲಿ ‘ಅಂತರ್ಜಾಲ:  ‘ರೀಚ್-೨೦೨೩’

  ವಿದ್ಯಾಗಿರಿ (ಮೂಡುಬಿದಿರೆ): ‘ಜಗತ್ತು ಇಂದು ಡಿಜಿಟಲ್ ತೆಕ್ಕೆಗೆ ಜಾರಿದ್ದು, ಅಂತರ್ಜಾಲ ಬದುಕಿನ ಭಾಗವಾಗಿದ್ದು, ಬಳಕೆದಾರರಿಗೆ ಒಳಿತು ಕೆಡುಕಿನ ಅರಿವು ಇರಬೇಕು’ ಎಂದು ಮಂಗಳೂರಿನ ವಕೀಲೆ ಲತಾ ಸಿ. ಎಸ್ ಹೊಳ್ಳ ಎಂದು ಹೇಳಿದರು. ಆಳ್ವಾಸ್ ಕಾಲೇಜಿನ ಸಮಾಜಕಾರ್ಯ ವಿಭಾಗದ ವತಿಯಿಂದ ಶುಕ್ರವಾರ ಕುವೆಂಪು ಸಭಾಂಗಣದಲ್ಲಿ ನಡೆದ ‘ಆಳ್ವಾಸ್  ರೀಚ್ -೨೦೨೩’ ರಾಜ್ಯ ಮಟ್ಟದ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು. ತಂತ್ರಜ್ಞಾನದ ಬೆಳವಣಿಗೆ ದೇಶದ ಅಭಿವೃದ್ಧಿಗೆ ಪೂರಕ. ಆದರೆ, ಅದು ನಮ್ಮ ನಿಯಂತ್ರಣದಲ್ಲಿರಬೇಕು. ಅದರೆ, ಅಂತರ್ಜಾಲವು ಜಗತ್ತನ್ನು ಆಳುವ […]

eMedia Kannada  @2025. All Rights Reserved.