Tag: Moodbidri

ತಂತ್ರಜ್ಞಾನ

ಆಳ್ವಾಸ್‌ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು ಮತ್ತು ಕರ್ನಾಟಕ ಜರ್ಮನ್ ಟೆಕ್ನಿಕಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಜೊತೆ ಒಡಂಬಡಿಕೆ

 ಮೂಡಬಿದ್ರಿ : ಕರ್ನಾಟಕ ಜರ್ಮನ್ ಟೆಕ್ನಿಕಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಜೊತೆ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು (ಎಐಇಟಿ) ಈಚೆಗೆ ಒಡಂಬಡಿಕೆಗೆ ಸಹಿ ಮಾಡಿದೆ. ವಿವಿಧ ತರಬೇತಿ ಕಾರ್ಯಕ್ರಮಗಳ ಅಡಿಯಲ್ಲಿ ಕೌಶಲ ಅಭಿವೃದ್ಧಿ ತರಬೇತಿಯನ್ನು ನೀಡಲು ಈ ಒಪ್ಪಂದವನ್ನು ಮಾಡಲಾಗಿದೆ.  ಯುವಕರ ಎಂಜಿನಿಯರಿಂಗ್ ಕೌಶಲಗಳ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸುವ ಆಶಯವನ್ನು ಈ ಒಪ್ಪಂದ ಒಳಗೊಂಡಿದೆ. ಕೆಜಿಟಿಟಿಐ ಮಂಗಳೂರಿನ ನಿರ್ದೇಶಕ ಗಿರಿಧರ್ ಸಾಲಿಯಾನ್ ಅವರ ಸಮ್ಮುಖದಲ್ಲಿ ಈ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲಾಯಿತು. ಆಳ್ವಾಸ್ ಕಾಲೇಜಿನ ವ್ಯವಸ್ಥಾಪಕ […]

ಪ್ರಚಲಿತ

  ಆಳ್ವಾಸ್‌ನಲ್ಲಿ ೯ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ

ವಿದ್ಯಾಗಿರಿ: ವಿಶ್ವ ಯೋಗ ದಿನವಾದ ಬುಧವಾರ ಬೆಳಿಗ್ಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳು ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಹಾಗೂ ಶ್ರೀಮತಿ ಮೋಹಿನಿ ಅಪ್ಪಾಜಿ ನಾಯಕ ಸಭಾಂಗಣದಲ್ಲಿ ಸಾಮೂಹಿಕ ಯೋಗಾಭ್ಯಾಸ ನಡೆಸಿದರು. ಯೋಗಾಭ್ಯಾಸಕ್ಕೆ ಮೂಡುಬಿದಿರೆ ಜೈನ ಮಠದ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹಾಗೂ ಪುರಸಭಾ ಸದಸ್ಯ ಪ್ರಸಾದ್ ಕುಮಾರ್ ಇದ್ದರು. ಆಳ್ವಾಸ್ ಶಿಕ್ಷಣ […]

ಮನೋರಂಜನೆ

ರೂಪೇಶ್ ಶೆಟ್ಟಿಯ ‘ಸರ್ಕಸ್’: ಮೂಡಬಿದ್ರಿ ಆಳ್ವಾಸ್‌ನಲ್ಲಿ ಟ್ರೇಲರ್ ಬಿಡುಗಡೆ

‘ಬದುಕಿನ ಸರ್ಕಸ್ ಸಿನಿಮಾದಲ್ಲಿ ನೋಡಿ’ ವಿದ್ಯಾಗಿರಿ(ಮೂಡುಬಿದಿರೆ): ‘ಬದುಕು ಒಂದು ಸರ್ಕಸ್. ಸಿನಿಮಾ ಪ್ರಪಂಚ ಮತ್ತೊಂದು ವಿಭಿನ್ನ ಸರ್ಕಸ್. ನೀವು ಬದುಕಿನ ಸರ್ಕಸ್ ಅನ್ನು ಸಿನಿಮಾ ‘ಸರ್ಕಸ್’ ನಲ್ಲಿ ನೋಡಿ ನಲಿದಾಡಬಹುದು’ ಎಂದು ಬಿಗ್‌ಬಾಸ್ ವಿಜೇತ, ನಟ, ನಿರ್ದೇಶಕ ರೂಪೇಶ್ ಶೆಟ್ಟಿ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಆಳ್ವಾಸ್ ಫಿಲ್ಮ್ ಸೊಸೈಟಿ ಮತ್ತು ತುಳು ಸಂಘದÀ ಸಹಯೋಗದಲ್ಲಿ  ಶಿವರಾಮ ಕಾರಂತ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕಿಕ್ಕಿರಿದು ತುಂಬಿದ್ದ ಯುವ ಪ್ರೇಕ್ಷಕರ ಕರಾಡತನದ ನಡುವೆ ‘ಸರ್ಕಸ್’ ತುಳು ಸಿನಿಮಾದ […]

ಕರಾವಳಿ

‘ಪ್ರವಾಸ ಸೆಲ್ಫಿಗೆ ಸೀಮಿತವಾಗದಿರಲಿ’ ಆಳ್ವಾಸ್‌ನಲ್ಲಿ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್

ವಿದ್ಯಾಗಿರಿ (ಮೂಡುಬಿದಿರೆ): ಪ್ರವಾಸ ಕಥನ ಎಂದರೆ ಕೇವಲ ಫೋಟೊ, ಸೆಲ್ಫಿಗಳಲ್ಲ. ಅಂತರದೃಷ್ಟಿಯಿಂದ ಆಸ್ವಾದಿಸುವುದು, ಧ್ಯಾನಸ್ಥ ಸ್ಥಿತಿಯಲ್ಲಿ ಗ್ರಹಿಸುವುದು, ಬದ್ಧತೆಯಿಂದ ಬರೆಯುವುದು ಎಂದು ಸಾಹಿತಿ, ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಇಂಗ್ಲಿಷ್ ವಿಭಾಗವು ಕುವೆಂಪು ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡ ‘ಫಿಲೊಕಲಿʼ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಬದುಕೊಂದು ಚಲನೆ. ನಾವೆಲ್ಲ ಅಲೆಮಾರಿ. ರಾಮನ ಚಲನೆಯೇ ರಾಮಾಯಣ. ಡಾರ್ವಿನ್ ಚಲನೆಯ ಪ್ರತಿಫಲವೇ ವಿಕಾಸವಾದ ಹೀಗೆ ಪುರಾಣ, ಇತಿಹಾಸ, ವಿಜ್ಞಾನ, ಜನಪದ ಎಲ್ಲವೂ ಚಲನೆಯನ್ನು ಆಧರಿಸಿವೆ […]

ಕರಾವಳಿ

ಜಗತ್ತಿನ ಶೇ ೩೦ ರಷ್ಟು ಕ್ರೀಡಾ ಆರ್ಥಿಕ ಚಟುವಟಿಕೆಯು ಫುಟ್‌ಬಾಲ್ ಕ್ರೀಡೆಯ ಮೇಲೆ ಅವಲಂಬಿತವಾಗಿದೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಡಾ. ವಿನಯ್ ಆಳ್ವ

ಮಂಗಳೂರು ವಿಶ್ವವಿದ್ಯಾಲಯದ ಉಡುಪಿ ವಲಯ ಅಂತರ ಕಾಲೇಜು ಫುಟ್‌ಬಾಲ್ ಪಂದ್ಯಾಟ ಉದ್ಘಾಟನೆ   ಮೂಡಬಿದ್ರಿ, ವಿದ್ಯಾಗಿರಿ: ಫುಟ್‌ಬಾಲ್ ಕ್ರೀಡೆಯು ಹಲವು ಆಟಗಾರರಿಗೆ ಜನಪ್ರಿಯತೆ ತಂದುಕೊಟ್ಟಿದ್ದು, ಜಗತ್ತಿನ ಶೇ ೩೦ ರಷ್ಟು ಕ್ರೀಡಾ ಆರ್ಥಿಕ ಚಟುವಟಿಕೆಯು ಫುಟ್‌ಬಾಲ್ ಕ್ರೀಡೆಯ ಮೇಲೆ ಅವಲಂಬಿತವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಡಾ. ವಿನಯ್ ಆಳ್ವ ಹೇಳಿದರು. ಮಂಗಳೂರು ವಿಶ್ವವಿದ್ಯಾಲಯ ಹಾಗೂ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಸಹಯೋಗದಲ್ಲಿ ಶುಕ್ರವಾರ ಆಳ್ವಾಸ್ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯದ ಉಡುಪಿ ವಲಯ ಅಂತರ […]

ಪ್ರಚಲಿತ

ಸಂಸ್ಕ್ರತಿಯ ಅರಿವು ಅಗತ್ಯ; ಡಾ ತೋಮಸ್ ಸ್ಕರಿಯಾ

ಆಳ್ವಾಸ್ ಕೇರಳ ಸಮಾಜಂ ವತಿಯಿಂದ ‘ಕಲೋತ್ಸವ ೨೦೨೩ ಮೂಡಬಿದ್ರಿ, ವಿದ್ಯಾಗಿರಿ: ಕಲೆ ಹಾಗೂ ಸಂಸ್ಕ್ರತಿ ದೇಶದ ಬಹು ದೊಡ್ಡ ಸಂಪತ್ತು. ಇದನ್ನು ಆಸ್ವಾದಿಸುವ ಮನಸ್ಥಿತಿ ಎಲ್ಲರಲ್ಲೂ ಇರಬೇಕು ಎಂದು ಅಂತರಾಷ್ಟಿçÃಯ ಆಪ್ತಸಮಾಲೋಚಕ ಡಾ. ಥಾಮಸ್ ಸ್ಕರಿಯಾ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಕೇರಳ ಸಮಾಜಂ ವೇದಿಕೆ  ಆಯೋಜಿಸಿದ ‘ಕಲೋತ್ಸವ ೨೦೨೩ ‘ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಸ್ಕ್ರತಿಯ ಆಚರಣೆ  ನಮ್ಮ ಘನತೆಯನ್ನು ಎತ್ತಿ ಹಿಡಿಯುತ್ತದೆ. ಒಡನಾಟ, ಹಾಗೂ ನಡವಳಿಕೆಯಿಂದ  ವ್ಯಕ್ತಿಯ ಸಂಸ್ಕಾರವನ್ನು ತಿಳಿಯಬಹುದಾಗಿದೆ.  ಮನುಷ್ಯ ಸಂಘ ಜೀವಿ. […]

ಕರಾವಳಿ

ಮೂಡುಬಿದಿರೆ, ವಿದ್ಯಾಗಿರಿಯಲ್ಲಿ ‘ಪರಿಸರ ಮತ್ತು ಸಾಹಿತ್ಯ’ ವಿಚಾರಗೋಷ್ಠಿ

ಮೂಡುಬಿದಿರೆ, ವಿದ್ಯಾಗಿರಿ ‘ಪರಿಸರ ಮತ್ತು ಸಾಹಿತ್ಯ’ ವಿಚಾರಗೋಷ್ಠಿ ವಿದ್ಯಾಗಿರಿ ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ಕನ್ನಡ ವಿಭಾಗ ಆಯೋಜಿಸಿದ ‘ಪರಿಸರ ಮತ್ತು ಸಾಹಿತ್ಯ’ ವಿಚಾರಗೋಷ್ಠಿಯಲ್ಲಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಬಿ. ಪಿ. ಸಂಪತ್ ಕುಮಾರ್ ಭಾಗವಹಿಸಿದರು. ಅವರು ಈ ಸಂದರ್ಭ ಮಾತನಾಡಿ, ಪ್ರಕೃತಿ ಅತ್ಯಮೂಲ್ಯ ಸಂಪತ್ತು. ನಮ್ಮ ಒಳನೋಟದಿಂದ ಪ್ರಕೃತಿಯ ಸಾಕಷ್ಟು ವಿಚಾರಗಳನ್ನು ತಿಳಿಯಬಹುದು. ಆದರೆ, ನಾವು ಪ್ರಕೃತಿಯನ್ನು ಅಧ್ಯಯನ ಮಾಡದೇ ಕಲಿಕೆಯಿಂದ ವಂಚಿತರಾಗುತ್ತಿದ್ದೇವೆ ಎಂದರು. ಈಚಿನ […]

ಕರಾವಳಿ

ಮೂಡಬಿದ್ರಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ‘ಹಿಂದಿ ಶಿಕ್ಷಾ ಶಾಸ್ತ್ರ ಪುಸ್ತಕ ಬಿಡುಗಡೆ

ಮೂಡಬಿದ್ರಿ ವಿದ್ಯಾಗಿರಿ: ಮಂಗಳೂರು ವಿಶ್ವವಿದ್ಯಾಲಯದ ಬಿ.ಇಡಿ ಮೊದಲ ಸೆಮಿಸ್ಟರ್‌ನ ಹಿಂದಿ ವಿಷಯದ ಪರಿಷ್ಕೃತ ‘ಹಿಂದಿ ’ ಪಠ್ಯಪುಸ್ತಕ ವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಬುಧವಾರ ಬಿಡುಗಡೆ ಮಾಡಿದರು.ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಶಂಕರಮೂರ್ತಿ ಎಚ್.ಕೆ,, ಲೇಖಕರಾದ ಉಪನ್ಯಾಸಕ ರಘುನಂದನ್ ಇದ್ದರು.ಈ ಪುಸ್ತಕವು ಹಿಂದಿ ಭಾಷೆಗೆ ಸಂಬAಧಿಸಿದAತೆ ಭಾಷೆಯ ಪರಿಚಯ, ಭಾಷೆಯ ಘಟಕ, ಭಾಷೆಯ ವೈವಿಧ್ಯ, ಮಾತೃಭಾಷೆ, ಭಾಷಾ ನೀತಿಗಳು ಮತ್ತು ಭಾಷಾ ಸೂತ್ರಗಳು, ಭಾಷಾ ಕಲಿಕೆ, ಭಾಷಾ ಪಠ್ಯಕ್ರಮ, ಕಲಿಕಾ ಚಟುವಟಿಕೆಗಳನ್ನು ಒಳಗೊಂಡಿದೆ.

ಕರಾವಳಿ ವ್ಯವಹಾರ

ಆಳ್ವಾಸ್ ಪತ್ರಿಕೋದ್ಯಮ ವಿಭಾಗದಲ್ಲಿ ರಾಂ ಅಜೆಕಾರು ‘ಪತ್ರಿಕೋದ್ಯಮವು ಕಾಳಜಿಯ ಬರಹ’

ವಿದ್ಯಾಗಿರಿ(ಮೂಡುಬಿದಿರೆ): ‘ನಿಷ್ಪಕ್ಷಪಾತವಾಗಿ ಬದ್ಧತೆ- ಕಾಳಜಿಯಿಂದ ಬರೆಯುವುದೇ ಪತ್ರಿಕೋದ್ಯಮ’ ಎಂದು ಕಾರ್ಕಳ ಕನ್ನಡಪ್ರಭ ವರದಿಗಾರ ರಾಂ ಅಜೆಕಾರು ಹೇಳಿದರು.ಆಳ್ವಾಸ್ ಕಾಲೇಜು ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಭಿವ್ಯಕ್ತಿ ವೇದಿಕೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.ಸುದ್ದಿಯ ವೈಭವೀಕರಣ ಸಲ್ಲದು. ಸುದ್ದಿ ಸಕಾರಾತ್ಮಕ ಬದಲಾವಣೆಗೆ ಒತ್ತು ನೀಡಬೇಕು. ಅದು ಮನಸ್ಸಿಗೆ ನೆಮ್ಮದಿ, ಸೌಹಾರ್ದತೆ ಸೃಷ್ಟಿಸಬೇಕು ಎಂದ ಅವರು, ಜನಪ್ರಿಯರ ಬಗ್ಗೆ ಬರೆಯುವ ಬದಲು ಹಳ್ಳಿಗರ ಬದುಕು, ಸಮಸ್ಯೆಗಳಲ್ಲಿ ಇರುವವರ ಸುದ್ದಿ ಮಾಡಬೇಕು ಎಂದರು.ಜನರಲ್ಲಿ ಪರಿಸರ ಪ್ರಜ್ಞೆ ಅಗತ್ಯ. […]

ಫ್ಯಾಷನ್ ಶಾಲಾ ಕಾಲೇಜು

 ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಫ್ಯಾಷನ್ ಡಿಸೈನಿಂಗ್ ವಿಭಾಗದ ಅಭಿಕ್ಯ ಕಾರ್ಯಕ್ರಮ

ವಿದ್ಯಾಗಿರಿ (ಮೂಡುಬಿದಿರೆ): ‘ಫ್ಯಾಷÀನ್ ಲೋಕದ ಸಾಧನಗೆ ಆಕಾಶವೇ ಮಿತಿ. ಇಲ್ಲಿ ಹಿಂಜರಿಕೆ ಇಲ್ಲದೇ ಹೆಜ್ಜೆ ಇಟ್ಟರೆ, ಯಶಸ್ಸು ಸಾಧ್ಯ’ ಎಂದು ವಸ್ತç ವಿನ್ಯಾಸಕಿ ಸ್ಥಿತಿ ಮಯ್ಯ ಹೇಳಿದರು. ಆಳ್ವಾಸ್ ಕಾಲೇಜಿನ ಫ್ಯಾಷನ್ ಡಿಸೈನಿಂಗ್ ವಿಭಾಗವು ಹಮ್ಮಿಕೊಂಡ ‘ಅಭಿಕ್ಯ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಫ್ಯಾಷನ್ ಕ್ಷೇತ್ರವು ಇಂದು ಬೃಹದಾಕಾರವಾಗಿ ಬೆಳೆಯುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಿ  ಎಂದರು. ಉದ್ಯಮಿ ಉದಯ ಪೂಜಾರಿ ಮಾತನಾಡಿ, ಫ್ಯಾಷÀನ್ ಜಗತ್ತಿನಲ್ಲಿ ಮೂಲಜ್ಞಾನವು ಬಹಳ ಮುಖ್ಯ. ಇಲ್ಲಿ ಸೃಜನಶೀಲತೆಯು ನಮ್ಮನ್ನು ಎತ್ತರಕ್ಕೆ ಕೊಂಡೊಯುತ್ತದೆ. ಕೇವಲ ವಿನ್ಯಾಸ ಮಾತ್ರವಲ್ಲ, […]

eMedia Kannada  @2025. All Rights Reserved.