Tag: police

ಅಪರಾಧ

ಕಿನ್ನಿಗೋಳಿಯಲ್ಲಿ ಜ್ಯುವೆಲರಿ ಅಂಗಡಿ ಮಾಲಕ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣು

ಕಿನ್ನಿಗೋಳಿಯಲ್ಲಿ ಜ್ಯುವೆಲರಿ ಅಂಗಡಿ ಮಾಲಕ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣು ಕಿನ್ನಿಗೋಳಿ; ಜ್ಯುವೆಲರಿ ಅಂಗಡಿ ಮಾಲಕರೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಕಿನ್ನಿಗೋಳಿಯ ರಾಮನಗರಲ್ಲಿ ನಡೆದಿದೆ. ಕಿನ್ನಿಗೋಳಿ ನಿವಾಸಿ ಶ್ರೀಧರ ಆಚಾರ್ಯ ಜುವೆಲರ್ಸ್‌ನ ಮಾಲಕ ಉಮೇಶ್‌ ಆಚಾರ್ಯ (62) ಆತ್ಮಹತ್ಯೆಗೈದವರು. ಮಾನಸಿಕ ಖಿನ್ನತೆಯಿಂದ ಅವರು ತನ್ನ ಮನೆಯ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಿನ್ನಿಗೋಳಿ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷರಾಗಿದ್ದ ಅವರು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷರಾಗಿದ್ದರು.

ಅಪರಾಧ

ಬೆಂಗಳೂರು : ಬೆಂಗಳೂರಿನಲ್ಲಿ ಸ್ಪೋಟಕ್ಕೆ ಸಂಚು , 5 ಶಂಕಿತ ಭಯೋತ್ಪಾದಕರ ಬಂಧನ.

ಬೆಂಗಳೂರು : ಬೆಂಗಳೂರಿನಲ್ಲಿ ಸ್ಪೋಟಕ್ಕೆ ಸಂಚು , 5 ಶಂಕಿತ ಭಯೋತ್ಪಾದಕರ ಬಂಧನ.  ಬೆಂಗಳೂರು :  ಭಯೋತ್ಪಾದನೆ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಶಂಕೆಯ ಮೇಲೆ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬುಧವಾರ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಐವರನ್ನು ಬಂಧಿಸಿದ್ದಾರೆ. ವ್ಯಕ್ತಿಗಳನ್ನು ಸೈಯದ್ ಸುಹೇಲ್, ಉಮರ್, ಜಾನಿದ್, ಮುದಾಸಿರ್ ಮತ್ತು ಜಾಹಿದ್ ಎಂದು ಗುರುತಿಸಲಾಗಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.  “ಎಲ್ಲಾ ಐವರು ಸೈಯದ್ ಸುಹೇಲ್, ಉಮರ್, ಜಾನಿದ್, ಮುದಾಸಿರ್ ಮತ್ತು ಜಾಹಿದ್ ಎಂದು […]

ಅಪರಾಧ

ವಳಚ್ಚಿಲ್ ಸಹ್ಯಾದ್ರಿ ಕಾಲೇಜು ಬಳಿ ಭೀಕರ ರಸ್ತೆ ಅಪಘಾತ

ಡಿವೈಡರ್ ಗೆ ಬೈಕ್ ಬಡಿದು ಎಂಜಿನಿಯರಿಂಗ್ ವಿದ್ಯಾರ್ಥಿ ಸ್ಥಳದಲ್ಲೇ ಸಾವು ಮಂಗಳೂರು : ನಗರದ ಹೊರವಲಯದ ವಳಚ್ಚಿಲ್ ಬಳಿ ಬುಧವಾರ ನಡೆದ ರಸ್ತೆ ಅಪಘಾತದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ. ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜ್ ನ ಅರ್ಕಿಟೆಕ್ ವಿಭಾಗ ವಿದ್ಯಾರ್ಥಿಯಾಗಿರುವ ಕೇರಳ ಮೂಲದ ಮಹಮ್ಮದ್ ನಶತ್ (21) ಎಂಬಾತ ಅಪಘಾತದಲ್ಲಿ ಮೃತ ಪಟ್ಟ ದುರ್ದೈವಿಯಾಗಿದ್ದಾನೆ. ಬುಧವಾರ ಬೆಳಗ್ಗೆ ಕಾಲೇಜಿಗೆ‌ ಹೋಗುವಾಗ ಬೈಕ್ ಡಿವೈಡರ್ ಗೆ ಬಡಿದು ಯುವಕ ಹಾಗೂ ಬೈಕ್ ಮೇಲಕ್ಕೆ ಎಸೆಯಲ್ಪಟ್ಟಿದ್ದು, ಈ ದೃಶ್ಯ ರಸ್ತೆ […]

ಅಪರಾಧ

ಮರವಂತೆ: ಸೆಲ್ಫೀ ತೆಗೆದುಕೊಳ್ಳುತ್ತಿದ್ದ ವೇಳೆ ಕಾಲು ಜಾರಿ ಯುವಕ ಸಮುದ್ರ ಪಾಲು

ಮರವಂತೆ: ಸೆಲ್ಫೀ ತೆಗೆದುಕೊಳ್ಳುತ್ತಿದ್ದ ವೇಳೆ ಕಾಲು ಜಾರಿ ಯುವಕ ಸಮುದ್ರ ಪಾಲು ಕುಂದಾಪುರ: ಮೊಬೈಲ್ ನಲ್ಲಿ ಸೆಲ್ಫೀ ತೆಗೆದುಕೊಳ್ಳುತ್ತಿದ್ದ ವೇಳೆ ಯುವಕನೋರ್ವ ಕಾಲು ಜಾರಿ ಸಮುದ್ರಕ್ಕೆ ಬಿದ್ದು ನೀರಿನಲ್ಲಿ ಮುಳುಗಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾದ ಘಟನೆ ಮರವಂತೆ ಬೀಚ್ ನಲ್ಲಿ ಮಂಗಳವಾರ ಸಂಭವಿಸಿದೆ. ನಾಪತ್ತೆಯಾದ ಯುವಕನ್ನು ಗದಗ ಜಿಲ್ಲೆಯ ಮುಂಡರಗಿ ತಾಲೂಕು ನಿವಾಸಿ ಫೀರ್ ಸಾಬ್ ನದಾಫ್ (21) ಎಂದು ಗುರುತಿಸಲಾಗಿದೆ. ಫೀರ್ ಸಾಬ್ ಸುಮಾರು 2 ತಿಂಗಳ ಹಿಂದೆ ಗಾರೆ ಕೆಲಸಕ್ಕಾಗಿ ಕಾಪುವಿಗೆ ಆಗಮಿಸಿದ್ದು, ಮಂಗಳವಾರ ತನ್ನ […]

ಅಪರಾಧ

ಕಟಪಾಡಿ ಕಟ್ಟಡ ಕಾರ್ಮಿಕನ ಕೊಲೆ ಪ್ರಕರಣದ ಆರೋಪಿಯ ಬಂಧನ

ಕಟಪಾಡಿ ಕಟ್ಟಡ ಕಾರ್ಮಿಕನ ಕೊಲೆ ಪ್ರಕರಣದ ಆರೋಪಿಯ ಬಂಧನ ಉಡುಪಿ: ಕಟಪಾಡಿಯಲ್ಲಿ ನಡೆದ ಕಟ್ಟಡ ಕಾರ್ಮಿಕ ಗಣೇಶ್ ಕೊಲೆ ಪ್ರಕರಣದ ಆರೋಪಿಯನ್ನು ಕಾಪು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಓಡಿಸ್ಸಾ ಮೂಲದ ಕಾರ್ಮಿಕರಾದ ಅಕನ್ ಎಂದು ಗುರುತಿಸಲಾಗಿದೆ. ಜುಲೈ 17 ರಂದು ಕಾಪು ಠಾಣಾ ವ್ಯಾಪ್ತಿಯ ಕಟಪಾಡಿ ಹಳೇ ಸಂತೆ ಮಾರ್ಕೆಟ್ ಬಳಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಓಡಿಸ್ಸಾ ಮೂಲದ ಕಾರ್ಮಿಕರಾದ ಅಕನ್ ಮತ್ತು ಗಣೇಶ್ ಎಂಬವರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಹೊಡೆದಾಟ ನಡೆದು, ಅಕನ್ ಗಣೇಶ್ ಸೇತಿಗೆ […]

ಅಪರಾಧ

ಕಟಪಾಡಿ: ಕಾರ್ಮಿಕರಿಬ್ಬರ ನಡುವಿನ ಗಲಾಟೆ – ಒರ್ವನ ಕೊಲೆಯಲ್ಲಿ ಅಂತ್ಯ

ಕಟಪಾಡಿ: ಕಾರ್ಮಿಕರಿಬ್ಬರ ನಡುವಿನ ಗಲಾಟೆ – ಒರ್ವನ ಕೊಲೆಯಲ್ಲಿ ಅಂತ್ಯಉಡುಪಿ: ಕಾರ್ಮಿಕರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಸೋಮವಾರ ಸಂಜೆ ಕಟಪಾಡಿಯಲ್ಲಿ ಸಂಭವಿಸಿದೆ. ಮೃತ ವ್ಯಕ್ತಿಯನ್ನುಕಟಪಾಡಿ-ಶಿರ್ವ ರಸ್ತೆಯ ಬಳಿಯಲ್ಲಿ ಕಟ್ಟಡ ಕಾಮಗಾರಿ ನಿರ್ವಹಿಸುತ್ತಿದ್ದ ಓರಿಸ್ಸಾ ಮೂಲದ ಗಣೇಶ್ (50) ಎಂದು ಗುರುತಿಸಲಾಗಿದೆ. ಹತ್ಯೆಗೆ ಕಾರಣನಾದ ಕಾರ್ಮಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ ಕೆಲಸದ ವಿಷಯದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದ್ದು, ಇಬ್ಬರೂ ಹೊಡೆದಾಟ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ವೇಳೆ […]

ಅಪರಾಧ

ರೈಲ್ವೇ ಪ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದ ಬಾಲಕನನ್ನು ಕಾಲಿನಿಂದ ಒದ್ದು ದರ್ಪ ಮೆರೆದ ಪೊಲೀಸ್ ಅಧಿಕಾರಿ

ರೈಲ್ವೇ ಪ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದ ಬಾಲಕನನ್ನು ಕಾಲಿನಿಂದ ಒದ್ದು ದರ್ಪ ಮೆರೆದ ಪೊಲೀಸ್ ಅಧಿಕಾರಿ ಉತ್ತರಪ್ರದೇಶ: ರೈಲು ನಿಲ್ದಾಣವೊಂದರ ಪ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದ ಬಾಲಕನನ್ನು ರೈಲ್ವೆ ಪೊಲೀಸ್ ಪೇದೆಯೊಬ್ಬ ಕಾಲಿನಿಂದ ಒದ್ದು ಎಬ್ಬಿಸಿದ ಅಮಾನವೀಯ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸ್‌ ಅಧಿಕಾರಿಯ ನಡೆಗೆ ವ್ಯಾಪಕ ಆಕ್ರೋಶ ಕೇಳಿ ಬಂದಿದೆ. ಉತ್ತರಪ್ರದೇಶ ಬಲ್ಲಿಯಾ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಬಾಲಕನೋರ್ವ ರೈಲು ನಿಲ್ದಾಣದ ಫ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದು, ಈತನನ್ನು ಬೂಟುಗಾಲಿನಿಂದ ಒದ್ದು ರೈಲ್ವೆ ರಕ್ಷಣಾ ಪಡೆ […]

ಅಪರಾಧ

ಮಂಗಳೂರು; 9 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನ

ಮಂಗಳೂರು;9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಉರ್ವ ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಗಳೂರಿನ ಕಣ್ಣೂರು ಅಡ್ಯಾರ್‌ ನಿವಾಸಿ ಹಸೈನಾರ್‌ ಆಲಿಯಾಸ್‌ ಹಸೈನ್‌(35) ಬಂಧಿತ ಆರೋಪಿ. ಈತ 2012ರಲ್ಲಿ ಯುವತಿಯೋರ್ವಳು ಲೇಡಿಹಿಲ್‌ ಸಮೀಪ ಫ್ಲ್ಯಾಟ್‌ ಕಡೆಗೆ ಹೋಗುತ್ತಿದ್ದಾಗ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ. ಈ ಬಗ್ಗೆ ಉರ್ವ ಠಾಣೆಗೆ ಯುವತಿ ದೂರು ನೀಡಿದ್ದಳು. ಈ ವೇಳೆ ಆರೋಪಿಯನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಈತನಿಗೆ 2014ರ ಅ.18ರಂದು 4 ತಿಂಗಳ ಕಾರಾಗೃಹ ಶಿಕ್ಷೆ […]

ಅಪರಾಧ

ಕಾಸರಗೋಡಿನಲ್ಲಿ ಮರಳು ಮಾಫಿಯಾದೊಂದಿಗೆ ನಿಕಟ ನಂಟು: ಏಳು ಮಂದಿ ಪೊಲೀಸರು ಸೇವೆಯಿಂದ ವಜಾ

ಕಾಸರಗೋಡು: ಮರಳು ಮಾಫಿಯಾದೊಂದಿಗೆ ನಿಕಟ ನಂಟು ಹೊಂದಿದ್ದ ಕಾಸರಗೋಡಿನ ಇಬ್ಬರು ಸೇರಿದಂತೆ ಏಳು ಮಂದಿ ಪೊಲೀಸರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಕಾಸರಗೋಡು ಚಂದೇರಾ ಪೊಲೀಸ್‌ ಠಾಣೆಯ ಟಿ.ಎಂ. ಅಬ್ದುಲ್‌ ರಶೀದ್‌ ಮತ್ತು ಚೀಮೇನಿ ಠಾಣೆಯ ಬಿ. ಹರಿಕೃಷ್ಣನ್‌, ಗ್ರೇಡ್‌ ಎಸ್‌ಐಗಳಾದ ಕಣ್ಣೂರು ರೂರಲ್‌ನ ಸಿ. ಗೋಕುಲನ್‌, ಕಲ್ಲಿಕೋಟೆ ರೂರಲ್‌ನ ಪಿ. ಜೋಯಿ ಥೋಮಸ್‌, ಸಿವಿಲ್‌ ಪೊಲೀಸ್‌ ಆಫೀಸರ್‌ಗಳಾದ ಪಿ.ಎ. ನಿಸಾರ್‌ (ಕಣ್ಣೂರು ಸಿಟಿ), ಎಂ.ವೈ. ಶಿಬಿನ್‌ (ಕಲ್ಲಿಕೋಟೆ ರೂರಲ್‌) ಮತ್ತು ಪಿ.ಎ. ಶಜೀರ್‌ (ಕಣ್ಣೂರು […]

ಅಪರಾಧ

ಮಂಗಳೂರು: ಡಿವೈಡರ್ ಹಾರಿ ಪ್ರಪಾತಕ್ಕೆ ಉರುಳುತ್ತಿದ್ದ ಕಾರು ಸ್ವಲ್ಪದಲ್ಲೇ ಪಾರು: ಅದೃಷ್ಟವಶಾತ್ ಮೂವರು ಬಚಾವ್

ಮಂಗಳೂರು: ಡಿವೈಡರ್ ಹಾರಿ ಪ್ರಪಾತಕ್ಕೆ ಉರುಳುತ್ತಿದ್ದ ಕಾರು ಸ್ವಲ್ಪದಲ್ಲೇ ಪಾರು: ಅದೃಷ್ಟವಶಾತ್ ಮೂವರು ಬಚಾವ್ ಮಂಗಳೂರು : ನಗರದ ಕದ್ರಿ ಬಳಿ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್ ಹಾರಿದ್ದು, ಅದೃಷ್ಟವಶಾತ್ಸ್ವಲ್ಪದರಲ್ಲೇ ಪಕ್ಕದಲ್ಲಿದ್ದ ಪ್ರಪಾತಕ್ಕೆ ಉರುಳುವುದು ತಪ್ಪುವ ಮೂಲಕ ಕಾರಲ್ಲಿದ್ದ ಮೂವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಕದ್ರಿ ಸರ್ಕಿಟ್ ಹೌಸ್ ಬಿಜೈ ರಸ್ತೆ ಮಧ್ಯೆ ಬಟ್ಟಗುಡ್ಡೆ ಬಳಿ ಕಾರು ಅಪಘಾತ ಸಂಭವಿಸಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಅಲ್ಪಸ್ವಲ್ಪಗಾಯಗಳೊಂದಿಗೆ ಪವಾಡ ಸದೃಶ್ಯರಾಗಿ ಪಾರಾಗಿದ್ದಾರೆ.ಶುಕ್ರವಾರ ತಡರಾತ್ರಿ ಸುಮಾರು 12.30ರ […]

eMedia Kannada  @2025. All Rights Reserved.