ಸಾಂತೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪಾದುಕಾನ್ಯಾಸ ಕಾರ್ಯಕ್ರಮ(Padukanyasa program at Santoor Sri Subrahmanya Temple)
ಸಾಂತೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪಾದುಕಾನ್ಯಾಸ ಕಾರ್ಯಕ್ರಮ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಪೂಜಾದಿ ಕಾರ್ಯಕ್ರಮ (Padubidri) ಪಡುಬಿದ್ರಿ: ಇತಿಹಾಸ ಪ್ರಸಿದ್ಧ ಸಾಂತೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಶಿಲಾಮಯ ಸುತ್ತುಪೌಳಿ ನಿರ್ಮಾಣದ ಪಾದುಕಾನ್ಯಾಸ ಕಾರ್ಯಕ್ರಮವು ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ, ಕ್ಷೇತ್ರದ ಪ್ರಧಾನ ತಂತ್ರಿಗಳಾದ ವೇದಮೂರ್ತಿ ಬೆಳ್ಮಣ್ಣು ಸತೀಶ ತಂತ್ರಿಯವರ ಮಾರ್ಗದರ್ಶನದಲ್ಲಿ ನಡೆಯಿತು. ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಪೂಜ್ಯ ಶ್ರೀಪಾದರು ಆಶೀರ್ವಚನ ನೀಡಿದರು. […]


