ಸಾಂತೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪಾದುಕಾನ್ಯಾಸ ಕಾರ್ಯಕ್ರಮ
ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಪೂಜಾದಿ ಕಾರ್ಯಕ್ರಮ
(Padubidri) ಪಡುಬಿದ್ರಿ: ಇತಿಹಾಸ ಪ್ರಸಿದ್ಧ ಸಾಂತೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಶಿಲಾಮಯ ಸುತ್ತುಪೌಳಿ ನಿರ್ಮಾಣದ ಪಾದುಕಾನ್ಯಾಸ ಕಾರ್ಯಕ್ರಮವು ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ, ಕ್ಷೇತ್ರದ ಪ್ರಧಾನ ತಂತ್ರಿಗಳಾದ ವೇದಮೂರ್ತಿ ಬೆಳ್ಮಣ್ಣು ಸತೀಶ ತಂತ್ರಿಯವರ ಮಾರ್ಗದರ್ಶನದಲ್ಲಿ ನಡೆಯಿತು.
ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಪೂಜ್ಯ ಶ್ರೀಪಾದರು ಆಶೀರ್ವಚನ ನೀಡಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಮುಂಬೈ ಘಟಕದ ಅಧ್ಯಕ್ಷರಾದ ಸಾಂತೂರು ನಡಿಮನೆ ಚಂದ್ರಶೇಖರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಅರ್ಚಕರಾದ ವೇ.ಮೂ. ವಿಠಲ ಜೋಯಿಸ, ಅರ್ಚಕರಾದ ವೇ.ಮೂ. ಗುರುರಾಜ ಜೋಯಿಸ, ವೇ. ಮೂ. ಅನಂತ ತ್ರಂತ್ರಿ, ದಯಾನಂದ ಹೆಗ್ಡೆ, ಸಾಂತೂರು ಪರಾರಿ ರತ್ನಾಕರ ಶೆಟ್ಟಿ, ಸಾಮನಾಡಿಗುತ್ತು, ಡಾ. ಸುಧಾಕರ ಶೆಟ್ಟಿ ಕುಂದಬೆಟ್ಟು, ಶ್ರೀಕ್ಷೇತ್ರ ಗೆಜ್ಜೆಗಿರಿ ಗೌರವಾಧ್ಯಕ್ಷ ಸಾಂತೂರು ಗರಡಿಮನೆ ರಾಜಶೇಖರ ಕೋಟ್ಯಾನ್, ಬ್ರಹ್ಮಕಲಶೋತ್ಸವ ಮುಂಬೈ ಸಮಿತಿ ಕಾರ್ಯದರ್ಶಿ ಶ್ರೀಮತಿ ಗೀತಾ ಶೆಟ್ಟಿ, ಶ್ರೀಮತಿ ಸ್ಮಿತಾ ರಮೇಶ್ ಶೆಟ್ಟಿ, ದಾನಿಗಳಾದ ಜಯ ಶೆಟ್ಟಿ ಬಂಗ್ಲೆಮನೆ ಕಾರ್ಕಳ, ಕೆ. ಸಿ. ಕಾಮತ್ ಕಾಂಜರಕಟ್ಟೆ, ಅರುಣ್ ಶೆಟ್ಟಿ ಮೇಲ್ಮನೆ ಸಾಂತೂರು, ನವೀನ್ ಚಂದ್ರ ಸುವರ್ಣ ಅಡ್ವೆ, ಪ್ರತಾಪ್ ಶೆಣೈ ಕಾಂಜರಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಘುಪತಿ ಜೋಯಿಸ ಮತ್ತು ಹರಿಕೃಷ್ಣ ತಂತ್ರಿ ವೇದಘೋಷ ಮಾಡಿದರು.
ವೇ.ಮೂ ಶ್ರೀನಿವಾಸ ತಂತ್ರಿ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಪ್ರಾಸ್ತಾವನೆ ಗೈದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧೀರ್ ರಾವ್ ವಂದಿಸಿದರು. ಪಿಲಾರು ಸುಧಾಕರ ಶೆಣೈ ನಿರ್ವಹಿಸಿದರು.

