Tag: sode eduxation trust secretary rathnakumar

ಕ್ರೀಡೆ ಶಾಲಾ ಕಾಲೇಜು

ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ ವಿಶ್ವವಿದ್ಯಾನಿಲಯ ಮಟ್ಟದ ಪುರುಷರ ವಾಲಿಬಾಲ್  ಪಂದ್ಯಾವಳಿ  ಉದ್ಘಾಟನೆ (VTU Mangalore Division Intercollegiate Volleyball Tournament (Men) 2025 : SMVITM, Bantakal Hosts Prestigious Sporting Event)

ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ ವಿಶ್ವವಿದ್ಯಾನಿಲಯ ಮಟ್ಟದ ಪುರುಷರ ವಾಲಿಬಾಲ್  ಪಂದ್ಯಾವಳಿ  ಉದ್ಘಾಟನೆ (Bantakal) ಬಂಟಕಲ್:‌ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಇದರ 2025ನೇ ಸಾಲಿನ ಮಂಗಳೂರು ವಲಯ ಮಟ್ಟದ ತಾಂತ್ರಿಕ ವಿದ್ಯಾಲಯಗಳ ಪುರುಷರ ವಾಲಿಬಾಲ್ ಪಂದ್ಯಾವಳಿಯು ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ವಿದ್ಯಾಲಯದ ಪ್ರಂಗಣದಲ್ಲಿ ಮಂಗಳವಾರ   ನಡೆಯಿತು.   ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿಯಾದ ಪ್ರೊ. ಡಾ. ರಾಧಕೃಷ್ಣ ಎಸ್ ಐತಾಳ್ ಇವರು ಭಾಗವಹಿಸಿದರು. ಅವರು ಮಾತನಾಡಿ, […]

ಶಾಲಾ ಕಾಲೇಜು

ಬಂಟಕಲ್‌ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳ “ಯಕ್ಷಸಿಂಚನ” ತಂಡವು “ಯಕ್ಷಗವಿಷ್ಠಿ 2025” ರಲ್ಲಿ ಎರಡನೇ ಸ್ಥಾನ (YAKSHASINCHANA TEAM OF SMVITM WON SECOND PLACE IN YAKSHAGAVISTI 2025”)

ಬಂಟಕಲ್‌ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳ “ಯಕ್ಷಸಿಂಚನ” ತಂಡವು “ಯಕ್ಷಗವಿಷ್ಠಿ 2025” ರಲ್ಲಿ ಎರಡನೇ ಸ್ಥಾನ (Bantakal)‌ ಬಂಟಕಲ್:‌ ಶ್ರೀ ಮಧ್ವ ವಾದಿರಾಜತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ “ಯಕ್ಷಸಿಂಚನ” ಯಕ್ಷಗಾನ ತಂಡವು ಎನ್.ಎಮ್ಎಎಮ್ಐಟಿ, ನಿಟ್ಟೆಯಲ್ಲಿ ನಡೆದ “ಯಕ್ಷಗವಿಷ್ಠಿ 2025” ಯಕ್ಷಗಾನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನಗಳಿಸಿದೆ. ದಕ್ಷಿಣಕನ್ನಡ ಮತ್ತುಉಡುಪಿ ಜಿಲ್ಲೆಯ ವಿವಿಧ ಕಾಲೇಜಿನ ತಂಡಗಳು ಭಾಗವಹಿಸಿದ್ದವು. ಶ್ರೀ ಮಧ್ವ ವಾದಿರಾಜತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ  ತಂಡವು“ರತ್ನಾವತಿಕಲ್ಯಾಣ”ಎಂಬ ಪ್ರಸಂಗವನ್ನು ಸ್ಫರ್ಧೆಯಲ್ಲಿ ಯಕ್ಷ ಗುರುಗಳಾದ   ರಾಕೇಶ್‌ ರೈ ಅಡ್ಕರವರ ಮಾರ್ಗದರ್ಶನದಲ್ಲಿ ಪ್ರದರ್ಶಿಸಿದರು. ತೆಂಕು ತಿಟ್ಟಿನ ಹೆಸರಾಂತ […]

ಶಾಲಾ ಕಾಲೇಜು

ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಅಟಲ್ ಟಿಂಕರಿಂಗ್ ಕಾರ್ಯಾಗಾರ (ATL Mentoring activity by Students of SMVITM at S.V.English medium school Gangolli)

 ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಅಟಲ್ ಟಿಂಕರಿಂಗ್ ಕಾರ್ಯಾಗಾರ (Bantakal) ಬಂಟಕಲ್:‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಆದಿತ್ಯ, ಅತುಲ್, ಬಲರಾಮ್ ಬಾರಧ್ವಜ್, ಅಲಕ ಮತ್ತು ರಾಖಿ, ಶರಣ್ಯ, ರಜನಿ ಇವರ ಆರ್ಡಿನೊ ಪ್ರೊಗ್ರಾಮಿಂಗ್ ಮತ್ತು ಪ್ರಾಜೆಕ್ಟ್ ತಯಾರಿಕೆ ಕುರಿತಾಗಿ ಪ್ರಾಯೋಗಿಕ ಕಲಿಕಾ ಮಾರ್ಗದರ್ಶನ ಕಾರ್ಯಾಗಾರವನ್ನು  ಸರಸ್ವತಿ ವಿದ್ಯಾಲಯ ಇಂಗ್ಲಿಷ್ ಮಾಧ್ಯಮ ಶಾಲೆ, ಗಂಗೊಳ್ಳಿ ಇಲ್ಲಿನ ಅಟಲ್ ಟಿಂಕರಿಂಗ್ ಲ್ಯಾಬ್‌ನಲ್ಲಿ ನಡೆಸಿಕೊಟ್ಟರು.  ವಿದ್ಯಾರ್ಥಿಗಳು ಪ್ರಾಯೋಗಿಕ ಸಂವಹನದ ಮೂಲಕ ರೊಬೋಟಿಕ್ಸ್, ಎಲೆಕ್ಟ್ರಾನಿಕ್ಸ್ ಮತ್ತು […]

ಶಾಲಾ ಕಾಲೇಜು

ಬಂಟಕಲ್‌ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳಿಂದ ಚಿಕ್ಕ ಮಕ್ಕಳಲ್ಲಿ ಪ್ರಾರಂಭಿಕ ಹಂತದಲ್ಲಿ ಆಟಿಸಂ ಸ್ಟೆಕ್ಟ್ರಂ ಡಿಸಾರ್ಡರ್ ಪತ್ತೆ ಮಾಡುವ ಯಂತ್ರದಅಭಿವೃದ್ಧಿ (Early Detection of Autism in Toddlers Using Machine Learning)  

ಬಂಟಕಲ್‌ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳಿಂದ ಚಿಕ್ಕ ಮಕ್ಕಳಲ್ಲಿ ಪ್ರಾರಂಭಿಕ ಹಂತದಲ್ಲಿ ಆಟಿಸಂ ಸ್ಟೆಕ್ಟ್ರಂ ಡಿಸಾರ್ಡರ್ ಪತ್ತೆ ಮಾಡುವ ಯಂತ್ರದಅಭಿವೃದ್ಧಿ (Bantakal) ಬಂಟಕಲ್:‌ ಚಿಕ್ಕ ಮಕ್ಕಳಲ್ಲಿ ಪ್ರಾರಂಭಿಕ ಹಂತದಲ್ಲಿಆಟಿಸಂ ಸ್ಪೆಕ್ಟಂ ಡಿಸಾರ್ಡರ್‌ಕಾಯಿಲೆಯನ್ನು ಯಂತ್ರ ಕಲಿಕಾ ತಂತ್ರ ಜ್ಞಾನವನ್ನು ಬಳಸಿಕೊಂಡು ಪತ್ತೆ ಮಾಡುವ ಯಂತ್ರವನ್ನು ಗಣಕಯಂತ್ರ ವಿಭಾಗದ  ವಿದ್ಯಾರ್ಥಿಗಳಾದ ರಮ್ಯಾ, ಶರಣ್ಯ, ಶ್ರೀಯಾ ಶೆಟ್ಟಿ ಮತ್ತು ವೈಷ್ಣವಿ ಬಿಜೂರ್‌ರವರು ಗಣಕಯಂತ್ರ ವಿಭಾಗದ ಪ್ರಾಧ್ಯಾಪಕಿ ಸವಿತಾ ಶೆಣೈಯವರ ಮಾರ್ಗದರ್ಶನದಲ್ಲಿ ಈ ಯೋಜನೆಯನ್ನುಅಭಿವೃದ್ಧಿ ಪಡಿಸಿದ್ದಾರೆ.  ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್‌ ನರಮಂಡಲದ ಬೆಳವಣಿಗೆಯಲ್ಲಿನ ನ್ಯೂನತೆಯಾಗಿದ್ದು, […]

ಶಾಲಾ ಕಾಲೇಜು

ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನೊಂದಿಗೆ ವೈಜ್ಞಾನಿಕ ಮತ್ತು ಸಿ ಎಸ್ ಐ ಆರ್ ಪ್ಯಾರಾಡೈಂ ಸಂಸ್ಥೆ, ಬೆಂಗಳೂರು ಜತೆ ಒಡಂಬಡಿಕೆ (MoU between SMVITM, Bantakal and CSIR-4PI, Bengaluru)

ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನೊಂದಿಗೆ ವೈಜ್ಞಾನಿಕ ಮತ್ತು ಸಿ ಎಸ್ ಐ ಆರ್ ಪ್ಯಾರಾಡೈಂ ಸಂಸ್ಥೆ, ಬೆಂಗಳೂರು ಜತೆ ಒಡಂಬಡಿಕೆ (Bantakal) ಬಂಟಕಲ್‌ : ಬಂಟಕಲ್‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು ಸಿ ಎಸ್ ಐ ಆರ್ ಪ್ಯಾರಾಡೈಂ ಸಂಸ್ಥೆ, ಬೆಂಗಳೂರು ಇವರೊಂದಿಗೆ ಗುರುವಾರ ಒಡಂಬಡಿಕೆಗೆ ಸಹಿ ಹಾಕಲಾಯಿತು.  ದಕ್ಷಿಣ ಭಾರತ ಖಾಸಗಿ ತಾಂತ್ರಿಕ ಕಾಲೇಜಿನ ಜತೆ ಇದು ಮೊದಲ ಒಡಂಬಡಿಕೆ ಎಂಬುದು  ಉಲ್ಲೇಖನೀಯ. ಈ ಎರಡೂ ಸಂಸ್ಥೆಗಳು ರಾಷ್ಟ್ರೀಯ ಕಾರ್ಯಗಾರಗಳನ್ನು ಆಯೋಜಿಸುವುದು, ವಿಚಾರ ಸಂಕಿರಣ, […]

ಶಾಲಾ ಕಾಲೇಜು

ಬಂಟಕಲ್‌ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗೆ “ಉತ್ತಮ ವಿದ್ಯಾರ್ಥಿಪ್ರಶಸ್ತಿ” “Best Student Award” for a student from Bantakal Technical College)

ಬಂಟಕಲ್‌ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗೆ “ಉತ್ತಮ ವಿದ್ಯಾರ್ಥಿಪ್ರಶಸ್ತಿ” (Bantakal) ಬಂಟಕಲ್ :‌ ಶ್ರೀ ಮಧ್ವ ವಾದಿರಾಜ ಇನ್ಸಿಟ್ಯೂಟ್‌ ಆಫ್‌ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್‌ಮೆಂಟ್‌ ಬಂಟಕಲ್ ಇಲ್ಲಿಯ ಅಂತಿಮ ವರ್ಷದ ಗಣಕ ಯಂತ್ರ ವಿಭಾಗದ ವಿದ್ಯಾರ್ಥಿಯಾದ ಧನುಶ್ ಶಾಸ್ತ್ರಿಯವರು ಐಎಸ್‌ಟಿಇ ಕರ್ನಾಟಕ ರಾಜ್ಯ ವಿಭಾಗದ 2024-25 ನೇ ಸಾಲಿನ “ಉತ್ತಮ ವಿದ್ಯಾರ್ಥಿ ಪ್ರಶಸ್ತಿ”ಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಯು ಕಾಲೇಜಿನ ಐಎಸ್‌ಟಿಇ ವಿದ್ಯಾರ್ಥಿ ಘಟಕದಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಅತ್ಯಂತ ಸಕ್ರಿಯವಾಗಿ ತೊಡಗಿಸಿಕೊಂಡಿರುವುದನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಕರ್ನಾಟಕ ಐಎಸ್‌ಟಿಇ ವತಿಯಿಂದ […]

ಶಾಲಾ ಕಾಲೇಜು

ಸೋದೆ ಶ್ರೀ ವಾದಿರಾಜ ಮಠದ ಶೈಕ್ಷಣಿಕ ಸಂಸ್ಥೆಗಳಿಗೆ ಮುಖ್ಯ ಆಡಳಿತಾಧಿಕಾರಿಯಾಗಿ ಡಾ. ರಾಧಾಕೃಷ್ಣ ಎಸ್‌ ಐತಾಳ್ ನೇಮಕ (Dr. Radhakrishna S Aital appointed as Chief Administrator for educational institutions of Sode Sri Vadiraja Math)

ಸೋದೆ ಶ್ರೀ ವಾದಿರಾಜ ಮಠದ ಶೈಕ್ಷಣಿಕ ಸಂಸ್ಥೆಗಳಿಗೆ ಮುಖ್ಯ ಆಡಳಿತಾಧಿಕಾರಿಯಾಗಿ ಡಾ. ರಾಧಾಕೃಷ್ಣ ಎಸ್‌ ಐತಾಳ್ ನೇಮಕ (Bantakal) ಬಂಟಕಲ್:‌ ಸೋದೆಶ್ರೀ ವಾದಿರಾಜ ಮಠದಿಂದ ಪ್ರವರ್ತಿತವಾದ ಶಿಕ್ಷಣ ಸಂಸ್ಥೆಗಳು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುತ್ತಿದ್ದು, ಎಲ್ಲಾ ವಿದ್ಯಾಸಂಸ್ಥೆಗಳು ಬೆಳವಣಿಗೆಯ ಉತ್ತುಂಗದಲ್ಲಿದೆ. ಈ ವಿದ್ಯಾಸಂಸ್ಥೆಗಳು ಇನ್ನಷ್ಟು ಬೆಳವಣಿಗೆ ಹೊಂದಲು ದಕ್ಷ ಆಡಳಿತಾಧಿಕಾರಿಯ ಅಗತ್ಯತೆಯನ್ನು ಮನಗಂಡು ಶಿಕ್ಷಣ ಕ್ಷೇತ್ರದಲ್ಲಿ ಸುಮಾರು ೩೮ ವರ್ಷಗಳಿಗೂ ಮಿಕ್ಕಿ ಅಪಾರ ಅನುಭವ ಹೊಂದಿರುವ ಮಣಿಪಾಲದ ಅಂತರಾಷ್ಟ್ರೀಯ  ಅನ್ವಯಿಕ ವಿಜ್ಞಾನ ಶಿಕ್ಷಣ ಕೇಂದ್ರದ ನಿರ್ದೇಶಕರಾಗಿದ್ದ ಡಾ. ರಾಧಾಕೃಷ್ಣಎಸ್‌ […]

ಕ್ರೀಡೆ ಶಾಲಾ ಕಾಲೇಜು

ಬಂಟಕಲ್‌ ತಾಂತ್ರಿಕ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ ಸಂಪನ್ನ (Annual Sports Meet Held at SMVITM, Bantakal)

ಬಂಟಕಲ್‌ ತಾಂತ್ರಿಕ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ ಸಂಪನ್ನ (Bantakal) ಬಂಟಕಲ್:‌ ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ ಜರುಗಿತು. ಕ್ರೀಯೇಟಿವ್‌ಎಜುಕೇಶನ್ ಫೌಂಡೇಶನ್, ಮೂಡಬಿದ್ರೆ ಇಲ್ಲಿನ ಸಹ-ಸಂಸ್ಥಾಪಕ ಡಾ. ಬಿ. ಗಣನಾಥ ಶೆಟ್ಟಿಯವರು    ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಮಾತನಾಡಿ, ಕ್ರೀಡೆಗಳಲ್ಲಿ ಭಾಗವಹಿಸುವುದು ದೈಹಿಕ ಸದೃಢತೆಗೆ ಮತ್ತು ಮಾನವನ ಜೀವನದಲ್ಲಿ ಮಾನಸಿಕ ಒತ್ತಡವನ್ನುಕಡಿಮೆ ಮಾಡಲು ಸಹಾಯಕವಾಗಿದೆ ಎಂದರು. ಈ ಸಂದರ್ಭದಲ್ಲಿಅವರು ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್‌ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ […]

ಶಾಲಾ ಕಾಲೇಜು

ಬಂಟಕಲ್ ತಾಂತ್ರಿಕ ಕಾಲೇಜು : 15ನೇ ವರ್ಷದ ವಾರ್ಷಿಕೋತ್ಸವ ಸಂಪನ್ನ(Annual Day Celebration at Shri Madhwa Vadiraja Institute of Technology and Management, Bantakal)

ಬಂಟಕಲ್ ತಾಂತ್ರಿಕ ಕಾಲೇಜು : 15ನೇ ವರ್ಷದ ವಾರ್ಷಿಕೋತ್ಸವ ಸಂಪನ್ನ (Bantakal) ಬಂಟಕಲ್:‌ ಬಂಟಕಲ್‌ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 15ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ಸಂಸ್ಥೆಯ ಆವರಣದಲ್ಲಿ ವಿಜೃಂಭಣೆಯಿಂದ ಸಂಪನ್ನಗೊಂಡಿತು.  ಸಮಾರಂಭದಲ್ಲಿ ಮೂಡಬಿದ್ರಿಯ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶ್ರೀಗಳು ತಮ್ಮ ಆಶೀರ್ವಚನದಲ್ಲಿ, ಪರಮಾತ್ಮನೇ ಪ್ರಪಂಚದ ಶ್ರೇಷ್ಠ ಇಂಜಿನಿಯರ್.‌ ಇಂಜಿನಿಯರಿಂಗ್ ರಂಗ ಅನಾದಿಕಾಲದಿಂದ ನಡೆದು ಬಂದ ದಾರಿಯನ್ನು ವಿವರಿಸಿದರು. ಇದೇ ಸಂದರ್ಭ ಶ್ರೀ […]

ಶಾಲಾ ಕಾಲೇಜು ಸಂಘ, ಸಂಸ್ಥೆಗಳು

          ಬಂಟಕಲ್ ಕಾಲೇಜಿನಲ್ಲಿ ರಾಜ್ಯ ಮಟ್ಟದ ತಾಂತ್ರಿಕ    ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ “ವರ್ಣೋತ್ಸವದ           ಸಮಾರೋಪ ಸಮಾರಂಭ (Valedictory Ceremony of Varnothsava 2025 at SMVITM, Bantakal)

 ಬಂಟಕಲ್ ಕಾಲೇಜಿನಲ್ಲಿ ರಾಜ್ಯ ಮಟ್ಟದ ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ “ವರ್ಣೋತ್ಸವ   ಸಮಾರೋಪ ಸಮಾರಂಭ (Bantakal) ಬಂಟಕಲ್:‌ ಬಂಟಕಲ್‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಜ್ಯ ಮಟ್ಟದ ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ “ವರ್ಣೋತ್ಸವ 2025” ಇದರ ಸಮಾರೋಪ ಸಮಾರಂಭ ಶುಕ್ರವಾರ ಸಂಜೆ ಕಾಲೇಜಿನ ಸಭಾಭವನದಲ್ಲಿ ವಿಜೃಂಭಣೆಯಿಂದ ಜರುಗಿತು.  ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನೆರವೇರಿತು. ಶ್ರೀಪಾದರು ತಮ್ಮ ಆಶೀರ್ವಚನದಲ್ಲಿ  […]

eMedia Kannada  @2025. All Rights Reserved.