Tag: vidhya kumari

ಕರಾವಳಿ

ಉಡುಪಿ ಜಿಲ್ಲಾಧಿಕಾರಿಯವರನ್ನು ಭೇಟಿಯಾದ ಕಸಾಪ ನಿಯೋಗ

ಉಡುಪಿ : ಉಡುಪಿಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ  ಶ್ರೀಮತಿ ವಿದ್ಯಾಕುಮಾರಿ ಅವರನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಸ್ವಾಗತಿಸಿ ಗೌರವಿಸಲಾಯಿತು.  ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಅಪರ ಜಿಲ್ಲಾಧಿಕಾರಿ ಶ್ರೀಮತಿ ವೀಣಾ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ನರಸಿಂಹ ಮೂರ್ತಿ ರಾವ್, ಭುವನಪ್ರಸಾದ ಹೆಗ್ಡೆ, ರಾಮಾಂಜಿ ಉಪಸಿತರಿದ್ದರು. ಈ ಸಂದರ್ಭದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಜಿಲ್ಲಾಧಿಕಾರಿಯವರಿಂದ ಸಹಕಾರಕೊರಲಾಯಿತು.

ಶಾಲಾ ಕಾಲೇಜು

ಎಂಐಟಿ 2023 ಹೊಸ ಶೈಕ್ಷಣಿಕ ವರ್ಷ ಆರಂಭ – ಶ್ರೀಮತಿ ವಿದ್ಯಾ ಕುಮಾರಿ, ಉಡುಪಿ ಜಿಲ್ಲಾಧಿಕಾರಿಯವರಿಂದ ಉದ್ಘಾಟನೆ.

ಎಂಐಟಿ 2023 ಹೊಸ ಶೈಕ್ಷಣಿಕ ವರ್ಷ ಆರಂಭ – ಶ್ರೀಮತಿ ವಿದ್ಯಾ ಕುಮಾರಿ, ಉಡುಪಿ ಜಿಲ್ಲಾಧಿಕಾರಿಯವರಿಂದ ಉದ್ಘಾಟನೆ. ಮಣಿಪಾಲ: ಪ್ರತಿಷ್ಠಿತ ಭಾರತೀಯ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಸಂಸ್ಥೆ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಹೊಸ ಶೈಕ್ಷಣಿಕ ವರ್ಷವನ್ನು 17 ಜುಲೈ 2023 ರಂದು ಉದ್ಘಾಟಿಸಲಾಯಿತು.   ಉಡುಪಿ ಜಿಲ್ಲಾಧಿಕಾರಿ ಶ್ರೀಮತಿ ವಿದ್ಯಾ ಕುಮಾರಿಯವರು    ಸಮಾರಂಭವನ್ನು ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ರಾಷ್ಟ್ರ ನಿರ್ಮಾಣ ಪ್ರಕ್ರಿಯೆಗೆ ಸಂಸ್ಥೆ ನೀಡುವ  ಅದ್ಭುತ ಕೊಡುಗೆಗಾಗಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.    ಉಡುಪಿ […]

ಕರಾವಳಿ

ಉಡುಪಿ ನೂತನ ಜಿಲ್ಲಾಧಿಕಾರಿಯಾಗಿ ವಿದ್ಯಾಕುಮಾರಿ

ಉಡುಪಿ: ಉಡುಪಿ ಜಿಲ್ಲಾಧಿಕಾರಿ ಆಗಿ ವಿದ್ಯಾಕುಮಾರಿ ನೇಮಕಗೊಂಡಿದ್ದಾರೆ.ಸದ್ಯ ಜಿಲ್ಲಾಧಿಕಾರಿಯಾಗಿರುವ ಕೂರ್ಮಾ ರಾವ್ ಎಂ ಅವರ ಸ್ಥಾನಕ್ಕೆ ವಿದ್ಯಾಕುಮಾರಿ ನೇಮಕಗೊಂಡಿದ್ದಾರೆ.ಆದರೆ ಕೂರ್ಮಾ ರಾವ್ ಅವರಿಗೆ ಹುದ್ದೆ ಮತ್ತು ಜಾಗ ತೋರಿಸಿಲ್ಲ.ವಿದ್ಯಾಕುಮಾರಿ ಅವರು ಉಡುಪಿಯ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

eMedia Kannada  @2025. All Rights Reserved.