ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದಿಂದ ಅನಿಶಾ ಆಚಾರ್ಯ ಉಚ್ಚಿಲರಿಗೆ ಅಭಿನಂದನೆ
ರಾಜ್ಯಮಟ್ಟದ ಮಕ್ಕಳ ಪ್ರತಿಭಾ ಪುರಸ್ಕಾರದಡಿ ಎಸ್ ಎಸ್ ಎಲ್ ಸಿ ಸಾಧಕಿ ಅನಿಶಾ ಆಚಾರ್ಯ
(Bengaluru) ಬೆಂಗಳೂರು: ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಬೆಂಗಳೂರು ಇದರ ವತಿಯಿಂದ ರಾಜ್ಯಾಧ್ಯಕ್ಷ ಕೆ ಪಿ. ನಂಜುಂಡಿ ವಿಶ್ವಕರ್ಮ ಅವರ ಸಾರಥ್ಯದಲ್ಲಿ ಸಮಾಜದ ಸ್ವಾಮೀಜಿಗಳು ಹಾಗೂ ಮುಖಂಡರ ಸಹಭಾಗಿತ್ವದಲ್ಲಿ ಬೆಂಗಳೂರಿನ ಟೌನ್ ಹಾಲ್ (ಪುಟ್ಟಣ್ಣ ಚಟ್ಟಿ) ಭವನದಲ್ಲಿ ರಾಜ್ಯಮಟ್ಟದ ಮಕ್ಕಳ ಪ್ರತಿಭಾ ಪುರಸ್ಕಾರದಡಿ ಎಸ್ ಎಸ್ ಎಲ್ ಸಿ ಸಾಧಕಿ ಅನಿಶಾ ಆಚಾರ್ಯ ಉಚ್ಚಿಲ ಅವರನ್ನು ಗೌರವಿಸಿ ಅಭಿನಂದಿಸಲಾಯಿತು.
ಈಕೆ ಪತ್ರಕರ್ತ ವಿಜಯ ಆಚಾರ್ಯ ಉಚ್ಚಿಲ, ಬೆಳಪು ಗ್ರಾ.ಪಂ. ಕಾರ್ಯದರ್ಶಿ ಚಂದ್ರಾವತಿ ವಿ. ಆಚಾರ್ಯ ದಂಪತಿ ಪುತ್ರಿ.
ಈಕೆ ಪ್ರಸ್ತುತ ಅದಮಾರು ಪೂರ್ಣಪ್ರಜ್ಞ ಕಾಲೇಜು ವಿಜ್ಞಾನ (ಪಿಸಿಎಂಬಿ) ವಿಭಾಗದ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿದ್ದಾರೆ.

