• Home  
  • ಅಗಲಿದ ಅರ್ಜುನನಿಗೆ ಉಡುಪಿಯಲ್ಲಿ ಶ್ರದ್ಧಾಂಜಲಿ (Tribute to departed Arjuna in Udupi)
- ಕರಾವಳಿ

ಅಗಲಿದ ಅರ್ಜುನನಿಗೆ ಉಡುಪಿಯಲ್ಲಿ ಶ್ರದ್ಧಾಂಜಲಿ (Tribute to departed Arjuna in Udupi)

Share: ಅಗಲಿದ ಅರ್ಜುನನಿಗೆ ಉಡುಪಿಯಲ್ಲಿ ಶ್ರದ್ಧಾಂಜಲಿ (Udupi)  ಉಡುಪಿ: ಜಿಲ್ಲಾ ನಾಗರಿಕ ಸಮಿತಿಯ ನೇತೃತ್ವದಲ್ಲಿ, ಅಗಲಿದ ಮೈಸೂರು ದಸರಾದಲ್ಲಿ ಅಂಬಾರಿ ಹೊರುತ್ತಿದ್ದ ಅರ್ಜುನ ಆನೆಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವು ನಗರದ ಮಾರುತಿ ವೀಥಿಕಾದಲ್ಲಿ ನಡೆಯಿತು.  ಮೌನ ಪ್ರಾರ್ಥನೆ ಸಲ್ಲಿಸಿದ ಬಳಿಕ ಅರಣ್ಯಅಧಿಕಾರಿಗಳು, ನಾಗರಿಕ ಸಮಿತಿಯ ಕಾರ್ಯಕರ್ತರು, ಪ್ರಾಣಿ ಪ್ರಿಯರು, ಸಾರ್ವಜನಿಕರು ಪುಷ್ಪನಮನ ಸಲ್ಲಿಸಿದರು. ವಿಶ್ವಪ್ರಸಿದ್ಧ ಮೈಸೂರು ದಸರೆಯಲ್ಲಿ ಎಂಟು ಬಾರಿ ಅಂಬಾರಿ ಹೊತ್ತಿದ್ದ ಗಜರಾಜ ಅರ್ಜುನ ಆನೆಯು ಸಕಲೇಶಪುರದ ಯಸಳೂರಿನಲ್ಲಿ ಕಾಡನೆಯನ್ನು ಸೆರೆ ಹಿಡಿಯುವ ಕಾರ್ಯಚರಣೆಯಲ್ಲಿ ಗಾಯಗೊಂಡು, […]

ಅಗಲಿದ ಅರ್ಜುನನಿಗೆ ಉಡುಪಿಯಲ್ಲಿ ಶ್ರದ್ಧಾಂಜಲಿ

(Udupi)  ಉಡುಪಿ: ಜಿಲ್ಲಾ ನಾಗರಿಕ ಸಮಿತಿಯ ನೇತೃತ್ವದಲ್ಲಿ, ಅಗಲಿದ ಮೈಸೂರು ದಸರಾದಲ್ಲಿ ಅಂಬಾರಿ ಹೊರುತ್ತಿದ್ದ ಅರ್ಜುನ ಆನೆಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವು ನಗರದ ಮಾರುತಿ ವೀಥಿಕಾದಲ್ಲಿ ನಡೆಯಿತು.

 ಮೌನ ಪ್ರಾರ್ಥನೆ ಸಲ್ಲಿಸಿದ ಬಳಿಕ ಅರಣ್ಯಅಧಿಕಾರಿಗಳು, ನಾಗರಿಕ ಸಮಿತಿಯ ಕಾರ್ಯಕರ್ತರು, ಪ್ರಾಣಿ ಪ್ರಿಯರು, ಸಾರ್ವಜನಿಕರು ಪುಷ್ಪನಮನ ಸಲ್ಲಿಸಿದರು.

ವಿಶ್ವಪ್ರಸಿದ್ಧ ಮೈಸೂರು ದಸರೆಯಲ್ಲಿ ಎಂಟು ಬಾರಿ ಅಂಬಾರಿ ಹೊತ್ತಿದ್ದ ಗಜರಾಜ ಅರ್ಜುನ ಆನೆಯು ಸಕಲೇಶಪುರದ ಯಸಳೂರಿನಲ್ಲಿ ಕಾಡನೆಯನ್ನು ಸೆರೆ ಹಿಡಿಯುವ ಕಾರ್ಯಚರಣೆಯಲ್ಲಿ ಗಾಯಗೊಂಡು, ಚಿಕಿತ್ಸೆಗೆ ಸ್ಪಂದಿಸಿದೆ ಮೃತಪಟ್ಟಿರುವ ಘಟನೆ ನಡೆದಿತ್ತು. ಎಲ್ಲರ ಪ್ರೀತಿಗೆ ಪಾತ್ರವಾಗಿದ್ದ ರಾಜ ಗಾಂಭೀರ್ಯ ನಡಿಗೆಯ ಅರ್ಜುನನ ಅಗಲಿಕೆ ಕೋಟ್ಯಂತರ ಪ್ರಾಣಿ ಪ್ರೇಮಿಗಳಿಗೆ ನೋವುಂಟಾಗಿತ್ತು.

 ಈ ಸಂದರ್ಭ ಜಿಲ್ಲಾ ನಾಗರಿಕ ಸಮಿತಿಯ ಅಧ್ಯಕ್ಷ ನಿತ್ಯಾನಂದ ವಳಕಾಡು (Nityananda Valakadu), ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ (Forest Officer Vrijakshi), ಉಪ ವಲಯ ಅರಣ್ಯಾಧಿಕಾರಿಗಳಾದ ಗುರುರಾಜ್ (Gururaj0, ಜೀವನದಾಸ್ (Jeevandas Shetty), ಗಸ್ತು ಅರಣ್ಯ ಪಾಲಕರಾದ ಕೇಶವ ಪೂಜಾರಿ, ಚರಣ್ ರಾಜ್, ಮಂಜುನಾಥ್, ಅಭಿಲಾಶ್, ಅರಣ್ಯ ಸಿಬ್ಬಂದಿ ಜೋಯ್, ಹಾಗೂ ಜೋಸ್ ಆಲೂಕಾಸ್ ಆಭರಣ ಮಳಿಗೆಯ ವ್ಯವಸ್ಥಾಪಕ ರಾಜೇಶ್ ಎನ್ ಆರ್, ಪ್ರಾಣಿ ದಯಾ ಸಂಘದ ಮಂಜುಳಾ, ಸಾಮಾಜಿಕ ಕಾರ್ಯಕರ್ತ ತಾರಾನಾಥ ಮೇಸ್ತ ಶಿರೂರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.