Tag: nityananda olakadu

social service ಧಾರ್ಮಿಕ

ಉಡುಪಿ: ತಬ್ಬಲಿ ಗಂಡು ಕರುವಿಗೆ ನಾಮಕರಣ, ತೊಟ್ಟಿಲು‌ ಶಾಸ್ತ್ರ, ಹೆಸರು ಟೈಗರ್ ಶಿವ (Udupi: Naming of Tabbali male calf, cradle science, name Tiger Shiva)

ಉಡುಪಿ: ತಬ್ಬಲಿ ಗಂಡು ಕರುವಿಗೆ ನಾಮಕರಣ, ತೊಟ್ಟಿಲು‌ ಶಾಸ್ತ್ರ, ಹೆಸರು ಟೈಗರ್ ಶಿವ (Uudupi) ಉಡುಪಿ: ಉಡುಪಿ ಜಿಲ್ಲಾ ನಾಗರೀಕ ಸಮಿತಿಯು ಮಣಿಪಾಲ ಶಾಂತಿನಗರದಲ್ಲಿರುವ‌ ಬುಧವಾರ ಸಂಜೆ ಗೋಧೂಳಿ ಲಗ್ನದಲ್ಲಿ ತಬ್ಬಲಿ ಗಂಡು ಕರುವಿಗೆ ನಾಮಕರಣ- ತೊಟ್ಟಿಲು ಶಾಸ್ತ್ರವನ್ನು ಧಾರ್ಮಿಕ ವಿಧಿವಿಧಾನಗಳಿಂದ ನಡೆಸಿ, ಗೋಪ್ರೇಮವನ್ನು ಮೆರೆದಿರುವುದು‌ ಈಗ ಸಾಮಾಜಿಕ ಜಾಲ ರ=ತಾಣದಲ್ಲಿ ವೈರಲ್‌ ಆಗಿದೆ.   ಶಿವರಾತ್ರಿಯ ದಿನ, ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಟೈಗರ್ ಸರ್ಕಲಿನಲ್ಲಿ ಕರು ಜನಿಸಿರುವುದರಿಂದ, ಕರುವಿಗೆ “ಟೈಗರ್ ಶಿವ” ನಾಮಕರಣ ಮಾಡಲಾಯಿತು.  ಶಾಂತಿನಗರ […]

ಅಪರಾಧ

ಉಡುಪಿ: ವಾದ್ಯ ಕಲಾವಿದ ನೇಣಿಗೆ ಶರಣು (Udupi: Instrumental artist commits suicide)

ಉಡುಪಿ: ವಾದ್ಯ ಕಲಾವಿದ ನೇಣಿಗೆ ಶರಣು  (Udupi) ಉಡುಪಿ : ಮನೆಯ ಮಾಡಿನ ಪಕ್ಕಾಸಿಗೆ ಯುವಕನೊರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೈಲಕೆರೆ ವಿದ್ಯೋದಯ ಶಾಲೆಯ ಸನಿಹ ಬುಧವಾರ  ನಡೆದಿದೆ.  ಆತ್ಮಹತ್ಯೆ ಗೈದಿರುವ ಯುವಕ ಬೈಲಕೆರೆಯ ರಾಮಕೃಷ್ಣ ದೇವಾಡಿಗರ ಪುತ್ರ, ವಾದ್ಯ ಕಲಾವಿದ ಅಶ್ವಥ್ (32ವ) ಎಂದು ತಿಳಿದುಬಂದಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ನಗರ ಪೋಲಿಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಸುನಿಲ್ ಬೈಲಕೆರೆಯವರ ಸಹಾಯದಿಂದ ಸಮಾಜಸೇವಕ ನಿತ್ಯಾನಂದ‌ ಒಳಕಾಡುರವರು ಘಟನೆ ನಡೆದಿರುವ‌ ಕೆಲವು‌ ಕ್ಷಣದಲ್ಲಿಯೇ […]

social service ಸಂಘ, ಸಂಸ್ಥೆಗಳು

ಉಡುಪಿ: ಮಹಿಳೆಯರ ನೇತೃತ್ವದಲ್ಲಿ ಅನಾಥ ಶವದ ಅಂತ್ಯಸಂಸ್ಕಾರ (Udupi : Cremation of orpan corpse led by women)

ಉಡುಪಿ: ಮಹಿಳೆಯರ ನೇತೃತ್ವದಲ್ಲಿ ಅನಾಥ ಶವದ ಅಂತ್ಯಸಂಸ್ಕಾರ (Udupi) ಉಡುಪಿ,ಅ.13; ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಇಪ್ಪತೈದು ದಿನಗಳ ಕಾಲ  ರಕ್ಷಿಸಿಡಲಾಗಿದ್ದ ಅನಾಥ ಶವದ ಅಂತ್ಯಸಂಸ್ಕಾರವು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರ ನೇತೃತ್ವದಲ್ಲಿ ಮಂಗಳವಾರ ಬೀಡಿನಗುಡ್ಡೆಯ ರುದ್ರಭೂಮಿಯಲ್ಲಿ ನೆರವೇರಿತು. ಉಡುಪಿ ನಗರಸಭೆ ಪೌರಾಯುಕ್ತ ರಾಯಪ್ಪ, ಜಿಲ್ಲಾಸ್ಪತ್ರೆಯ ಡಾ. ರಮೇಶ್ ಕುಂದರ್‌ರವರು ಮೃತದೇಹಕ್ಕೆ ತಿಮ ಪುಷ್ಪ ನಮನ ಸಮರ್ಪಿಸಿದರು. ಮೃತದೇಹದ ದಫನ ಪ್ರಕ್ರಿಯೆ ನಡೆಸುವಾಗ ಜ್ಯೋತಿ, ದೇವಕಿ ಬಾರ್ಕೂರು, ಮಮತಾ ಲಕ್ಷ್ಮೀನಗರ, ಅಶ್ವಿನಿ ಲಕ್ಷ್ಮೀನಗರ ಭಾಗಿಯಾಗಿ […]

ಕರಾವಳಿ

ಅಗಲಿದ ಅರ್ಜುನನಿಗೆ ಉಡುಪಿಯಲ್ಲಿ ಶ್ರದ್ಧಾಂಜಲಿ (Tribute to departed Arjuna in Udupi)

ಅಗಲಿದ ಅರ್ಜುನನಿಗೆ ಉಡುಪಿಯಲ್ಲಿ ಶ್ರದ್ಧಾಂಜಲಿ (Udupi)  ಉಡುಪಿ: ಜಿಲ್ಲಾ ನಾಗರಿಕ ಸಮಿತಿಯ ನೇತೃತ್ವದಲ್ಲಿ, ಅಗಲಿದ ಮೈಸೂರು ದಸರಾದಲ್ಲಿ ಅಂಬಾರಿ ಹೊರುತ್ತಿದ್ದ ಅರ್ಜುನ ಆನೆಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವು ನಗರದ ಮಾರುತಿ ವೀಥಿಕಾದಲ್ಲಿ ನಡೆಯಿತು.  ಮೌನ ಪ್ರಾರ್ಥನೆ ಸಲ್ಲಿಸಿದ ಬಳಿಕ ಅರಣ್ಯಅಧಿಕಾರಿಗಳು, ನಾಗರಿಕ ಸಮಿತಿಯ ಕಾರ್ಯಕರ್ತರು, ಪ್ರಾಣಿ ಪ್ರಿಯರು, ಸಾರ್ವಜನಿಕರು ಪುಷ್ಪನಮನ ಸಲ್ಲಿಸಿದರು. ವಿಶ್ವಪ್ರಸಿದ್ಧ ಮೈಸೂರು ದಸರೆಯಲ್ಲಿ ಎಂಟು ಬಾರಿ ಅಂಬಾರಿ ಹೊತ್ತಿದ್ದ ಗಜರಾಜ ಅರ್ಜುನ ಆನೆಯು ಸಕಲೇಶಪುರದ ಯಸಳೂರಿನಲ್ಲಿ ಕಾಡನೆಯನ್ನು ಸೆರೆ ಹಿಡಿಯುವ ಕಾರ್ಯಚರಣೆಯಲ್ಲಿ ಗಾಯಗೊಂಡು, ಚಿಕಿತ್ಸೆಗೆ […]

ಅಪರಾಧ

ಉಡುಪಿ: ಭಿಕ್ಷಾಟನೆ ನಡೆಸುತ್ತಿದ್ದ 16 ಮಂದಿಯ ರಕ್ಷಣೆ

ಉಡುಪಿ: ಭಿಕ್ಷಾಟನೆ ನಡೆಸುತ್ತಿದ್ದ 16 ಮಂದಿಯ ರಕ್ಷಣೆ ಉಡುಪಿ: ಭಿಕ್ಷಾಟನಾ ನಿಷೇಧ ಕಾಯಿದೆ ಅನ್ವಯ ಭಿಕ್ಷಾಟನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ  ಉಡುಪಿ ನಗರದ ವಿವಿಧೆಡೆ ಭಿಕ್ಷಾಟನೆ ನಡೆಸುತ್ತಿದ್ದ 16 ಮಂದಿ ನಿರಾಶ್ರಿತರನ್ನು ರಕ್ಷಿಸಲಾಗಿದೆ.  ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕರು ಹಾಗೂ ಕಾರ್ಯಪಾಲಕ ಸಿಬ್ಬಂದಿ ವರ್ಗ ಹಾಗೂ ಸಮಾಜ ಸೇವಕ ನಿತ್ಯಾನಂದ ಒಳಕಾಡು ಸಹಕಾರದೊಂದಿಗೆ ನಗರದ ಕೃಷ್ಣ ಮಠ, ಸರ್ವಿಸ್ ಬಸ್ ನಿಲ್ದಾಣ ಹಾಗೂ ಕೆಎಸ್ ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷಾಟನೆಯನ್ನು ಮಾಡುತಿದ್ದ 16 ಮಂದಿ ನಿರಾಶ್ರಿತರನ್ನು […]

ಅಪರಾಧ ವಿಡಿಯೋ

ಸೌಜನ್ಯ ಅತ್ಯಾಚಾರ ಆರೋಪಿಗೆ ಶಿಕ್ಷೆ ಆಗಲೆಂದು ಉಡುಪಿಯಲ್ಲಿ ಉರುಳು ಸೇವೆ

ಸೌಜನ್ಯ ಅತ್ಯಾಚಾರ ಆರೋಪಿಗೆ ಶಿಕ್ಷೆ ಆಗಲೆಂದು ಉಡುಪಿಯಲ್ಲಿ ಉರುಳು ಸೇವೆ  ಸೌಜನ್ಯ ಅತ್ಯಾಚಾರ ಮಾಡಿದ ಆರೋಪಿ ” ಕೊರಗಜ್ಜ ಕೊರಗಜ್ಜ” ಎಂದು ಹುಚ್ಚನಂತೆ ಅಲೆಯಲಿ: ಉರುಳು ಸೇವೆ ಮೂಲಕ ಪ್ರಾರ್ಥನೆ. ಉಡುಪಿ:  ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಮಾಡಿದ ಆರೋಪಿ ಕೊರಗಜ್ಜ ಕೊರಗಜ್ಜ ಎಂದು ರಸ್ತೆಯಲ್ಲಿ ಹುಚ್ಚನಂತೆ ಅಲೆದಾಡಲಿ ಎಂದು ಕರಾವಳಿಯ ಕಾರಣಿಕ ದೈವ ಕೊರಗಜ್ಜನಿಗೆ ಉರುಳು ಸೇವೆಯ ಪ್ರಾರ್ಥಿಸಿ ಮೂಲಕ ಪೂಜೆ ಸಲ್ಲಿಸಲಾಯಿತು.   ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಹೋರಾಟದ ಕಿಚ್ಚು […]

eMedia Kannada  @2025. All Rights Reserved.