(Bengaluru) ಬೆಂಗಳೂರು: ಶಾಲೆಗಳಿಗೆ ನಕಲಿ ಬಾಂಬ್ ಬೆದರಿಕೆ ಪ್ರಕರಣ, ಇಂಟರ್‌ಪೋಲ್ ನೆರವಿಗೆ ಪೊಲೀಸರು ತಯಾರಿ
ಬೆಂಗಳೂರು; ಬೆಂಗಳೂರು ನಗರದ 48 ಶಾಲೆಗಳಿಗೆ ಕಳೆದ ವಾರ ನಕಲಿ ಬಾಂಬ್ ಬೆದರಿಕೆ ಕರೆಗಳು ಬಂದಿದ್ದು, ಈ ಕುರಿತ ತನಿಖೆಗೆ ಸಹಾಯಕ್ಕಾಗಿ ಸಿಬಿಐ ಮೂಲಕ ಇಂಟರ್‌ಪೋಲ್‌ನ್ನು ಸಂಪರ್ಕಿಸಲು ಬೆಂಗಳೂರು ಪೊಲೀಸರು ತಯಾರಿ ನಡೆಸಿದ್ದಾರೆ.
ಬೆಂಗಳೂರು ನಗರದಲ್ಲಿನ 48 ಶಾಲೆಗಳಿಗೆ ಮತ್ತು ಹೊರವಲಯದಲ್ಲಿರುವ 22 ಶಾಲೆಗಳಿಗೆ ಶುಕ್ರವಾರ ಬೆದರಿಕೆ ಇಮೇಲ್‌ಗಳು ಬಂದಿತ್ತು. ಬೆಂಗಳೂರು ಪೊಲೀಸರು 48 ಇಮೇಲ್‌ಗಳ ಮೂಲದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಬೆಂಗಳೂರು ಜಿಲ್ಲಾ ಪೊಲೀಸರು ಉಳಿದ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ (Bengaluru Police commissioner B Dayananda), ಬೆದರಿಕೆ ಇಮೇಲ್ ಬಂದಿರುವ ಬಗ್ಗೆ ಬೆಂಗಳೂರಿನ ಹಲವು ಪೊಲೀಸ್ ಠಾಣೆಗಳಲ್ಲಿ 27 ಎಫ್‌ಐಆರ್‌ಗಳು ದಾಖಲಾಗಿದೆ. ಸೋಮವಾರ ಪ್ರಕರಣದ ಕುರಿತು ಸಭೆ ನಡೆಸಲಾಗಿದೆ. ಕಳೆದ ವರ್ಷ ಇದೇ ರೀತಿಯ 6 ಇಮೇಲ್‌ಗಳು ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಕೆಲವು ಬಾಲಾಪರಾಧಿಗಳನ್ನು ಬಂಧಿಸಲಾಗಿತ್ತು. ಇಮೇಲ್‌ಗಳಲ್ಲಿನ ಸಾಮ್ಯತೆಯ ಕುರಿತು ತನಿಖೆಗೆ ನಾವು ಆ ಪ್ರಕರಣಗಳ ತನಿಖಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.
ಎಲ್ಲಾ ಶಾಲೆಗಳಿಗೆ ಒಂದೇ ಐಡಿಯಿಂದ ಬೆದರಿಕೆ ಇ-ಮೇಲ್ ಬಂದಿದೆ. ಅದರಲ್ಲಿದ್ದ ವಿಷಯವು ಒಂದೇ ಆಗಿದೆ. ಇಂತಹ ಇಮೇಲ್‌ಗಳನ್ನು ಬರೆಯುವ ಹಿಂದಿನ ಸಂಭವನೀಯ ಕಾರಣಗಳು ಮತ್ತು ಇ-ಇಮೇಲ್ ಏನು ಸೂಚಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪೊಲೀಸರು ತಜ್ಞರನ್ನು ಸಂಪರ್ಕಿಸುತ್ತಿದ್ದಾರೆ ಎಂದು ಕಮಿಷನರ್ ಹೇಳಿದ್ದಾರೆ.
ಪೊಲೀಸರು ಕಳುಹಿಸಿದ ವಿನಂತಿಗೆ ಇ-ಮೇಲ್ ಸೇವಾ ಪೂರೈಕೆದಾರರು ಪ್ರತಿಕ್ರಿಯಿಸಿದ್ದಾರೆ. ಆ ಮಾರ್ಗಗಳಲ್ಲಿಯೂ ತನಿಖೆಗಳು ನಡೆಯುತ್ತಿವೆ. ಪೊಲೀಸರು ಪ್ರಕರಣವನ್ನು ವಿವರವಾಗಿ ಅರ್ಥಮಾಡಿಕೊಳ್ಳಲು ವಿವಿಧ ದೇಶಗಳಲ್ಲಿ ಇದೇ ರೀತಿಯ ಘಟನೆಗಳ ಬಗ್ಗೆ ಮುಕ್ತ ಮೂಲಗಳ ಮೂಲಕ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಯುಎಸ್ಎ, ಜರ್ಮನಿ, ಮಲೇಷ್ಯಾ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೊಗೆ ಇದೇ ರೀತಿಯ ಇಮೇಲ್‌ಗಳು ಬಂದಿವೆ. ಇದು ಒಂದು ರೀತಿಯ ಸೈಬರ್ ಅಪರಾಧ ಮತ್ತು ಇಮೇಲ್‌ಗಳನ್ನು ಕಳುಹಿಸಲು ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ (VPN) ಬಳಸಲಾಗಿರುವುದರಿಂದ ಪ್ರಕರಣವು ತಾಂತ್ರಿಕ ಜಟಿಲತೆಗಳನ್ನು ಒಳಗೊಂಡಿದೆ ಎಂದು ಕಮಿಷನರ್ ಹೇಳಿದ್ದಾರೆ.
ಆರೋಪಿಯು beeble.comನ ವಿವಿಧ ಇಮೇಲ್ ಐಡಿಗಳಿಂದ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾನೆ. ಬೆಂಗಳೂರು ಪೊಲೀಸರು ಆ ಕಂಪನಿಗೆ ಪತ್ರ ಬರೆದು ಅವರಿಂದ ವಿವರ ಪಡೆದಿದ್ದಾರೆ ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ.
ಡಿ.1ರಂದು ಬೆಂಗಳೂರಿನ 48 ಶಾಲೆಗಳು ಮತ್ತು ನೆರೆಯ ತಾಲೂಕುಗಳ 20 ಶಾಲೆಗಳಿಗೆ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಲಾಗಿತ್ತು. ತಕ್ಷಣ ಪೊಲೀಸರು ಈ ಮೇಲ್ ಬಂದ ಶಾಲೆಗಳಲ್ಲಿ ಪರೀಕ್ಷಿಸಿದಾಗ, ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ. ಬೆಂಗಳೂರಿನ ಬಸವೇಶ್ವರ ನಗರ, ಸದಾಶಿವನಗರ, ಯಲಹಂಕ ಮತ್ತು ಬನ್ನೇರುಘಟ್ಟ ಭಾಗದ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ.
ಪೊಲೀಸರು ಶಾಲೆಗಳಿಗೆ ಪಾಲಕರಿಗೆ ಮನವರಿಕೆ ಮಾಡಿ, ಮಕ್ಕಳನ್ನು ಮನೆಗೆ ಕಳುಹಿಸಿ ಪರಿಶೀಲನೆ ನಡೆಸಿದ್ದರು.

