• Home  
  • ಅದಮಾರು: ವಿದ್ಯಾರ್ಥಿ ವೇತನ, ಸಹಾಯ ಧನ ವಿತರಣೆ (Adamaru: Scholarship and assistance distribution)
- ಸಂಘ, ಸಂಸ್ಥೆಗಳು - ಸಹಾಯ ಹಸ್ತ

ಅದಮಾರು: ವಿದ್ಯಾರ್ಥಿ ವೇತನ, ಸಹಾಯ ಧನ ವಿತರಣೆ (Adamaru: Scholarship and assistance distribution)

Share: ಅದಮಾರು: ವಿದ್ಯಾರ್ಥಿ ವೇತನ, ಸಹಾಯ ಧನ ವಿತರಣೆ ವಿದ್ಯಾರ್ಥಿ ವೇತನ ಹಾಗೂ ಸಹಾಯಧನ ನೀಡಿದ ಆದರ್ಶ ಸಂಘಗಳ ಒಕ್ಕೂಟ    (Adamaru) ಅದಮಾರು: ಅದಮಾರು ಆದರ್ಶ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ವಿದ್ಯಾರ್ಥಿ ವೇತನ ಹಾಗೂ ಸಹಾಯಧನ ವಿತರಣೆ ಅದಮಾರಿನ ಸರ್ವೋದಯ ಸಮುದಾಯ ಭವನದಲ್ಲಿ ನೆರವೇರಿತು.      ಕಮಲಾ ಕೆ. ಶೆಟ್ಟಿ ಸ್ಮಾರಕ ದತ್ತಿ ನಿಧಿ, ಎ.ಎಸ್. ಭಟ್ ಸ್ಮಾರಕ ದತ್ತಿ ನಿಧಿ, ಸುಂದರಿ ಕಾಂತರ ಶೆಟ್ಟಿ ಸ್ಮಾರಕ ನಿಧಿ ಇವರು ವಿದ್ಯಾರ್ಥಿವೇತನ ಹಾಗೂ ಸಹಾಯ ನಿಧಿಗಳ  […]

   (Adamaru) ಅದಮಾರು: ಅದಮಾರು ಆದರ್ಶ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ವಿದ್ಯಾರ್ಥಿ ವೇತನ ಹಾಗೂ ಸಹಾಯಧನ ವಿತರಣೆ ಅದಮಾರಿನ ಸರ್ವೋದಯ ಸಮುದಾಯ ಭವನದಲ್ಲಿ ನೆರವೇರಿತು.

     ಕಮಲಾ ಕೆ. ಶೆಟ್ಟಿ ಸ್ಮಾರಕ ದತ್ತಿ ನಿಧಿ, ಎ.ಎಸ್. ಭಟ್ ಸ್ಮಾರಕ ದತ್ತಿ ನಿಧಿ, ಸುಂದರಿ ಕಾಂತರ ಶೆಟ್ಟಿ ಸ್ಮಾರಕ ನಿಧಿ ಇವರು ವಿದ್ಯಾರ್ಥಿವೇತನ ಹಾಗೂ ಸಹಾಯ ನಿಧಿಗಳ  ಪ್ರಾಯೋಜಕರು.

   ದತ್ತಿ ನಿಧಿ ಕಳೆದ ಇಪ್ಪತ್ತೈದು ವರ್ಷಗಳಿಂದ ನೀಡಲಾಗುತ್ತಿದೆ. ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಹಿತ ಹತ್ತು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಆರೋಗ್ಯ ಸಹಾಯ ವಿತರಿಸಲಾಗಿದೆ.

 ಸಮಾರಂಭದ ಅಧ್ಯಕ್ಷತೆಯನ್ನು ಜಾನಪದ ಸಂಶೋಧಕ ಕೆ.ಎಲ್. ಕುಂಡಂತಾಯ ವಹಿಸಿದ್ದರು.

 ಪ್ರಾಯೋಜಕರಾದ ಉದಯ‌‌ ಕೆ.ಶೆಟ್ಟಿಯವರು ದತ್ತಿ ನಿಧಿ ಹಾಗೂ ವಿದ್ಯಾರ್ಥಿ ವೇತನ ವಿತರಿಸಿದರು.

 ಈ ಸಂದರ್ಭ ಉದ್ಯಮಿ ನೈಮಾಡಿ ನಾರಾಯಣ ಕೆ.ಶೆಟ್ಟಿ ಉಪಸ್ಥಿತರಿದ್ದರು.

 ಗಣೇಶ ಸಾಲಿಯಾನ್ ಸ್ವಾಗತಿಸಿದರು. ಸುದರ್ಶನ ವೈ. ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಜಾತಾ ಆರ್.ಶೆಟ್ಟಿ ಫಲಾನುಭವಿಗಳ ಪಟ್ಟಿ ಓದಿದರು. ಬರ್ಪಾಣಿ ಸಂತೋಷ ಜೆ.ಶೆಟ್ಟಿ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.