• Home  
  • ಅದಾನಿ ಸಿಎಸ್‌ಆರ್: ಮುದರಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 17  ಲಕ್ಷ ಮೊತ್ತದ  ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ (Adani CSR: Bhoomi Pooja ceremony for development works worth Rs. 17 lakhs in Mudarangadi Gram Panchayath limits)
- social service - ಸಂಘ, ಸಂಸ್ಥೆಗಳು

ಅದಾನಿ ಸಿಎಸ್‌ಆರ್: ಮುದರಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 17  ಲಕ್ಷ ಮೊತ್ತದ  ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ (Adani CSR: Bhoomi Pooja ceremony for development works worth Rs. 17 lakhs in Mudarangadi Gram Panchayath limits)

Share: ಅದಾನಿ ಸಿಎಸ್‌ಆರ್: ಮುದರಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 17 ಲಕ್ಷ ಮೊತ್ತದ  ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ (Yelluru) ಎಲ್ಲೂರು: ಎಲ್ಲೂರು ಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅದಾನಿ (ADANI Foundation) ಒಡೆತನದ ಅದಾನಿ ಪವರ್ ಲಿಮಿಟೆಡ್‌ ಸಂಸ್ಥೆಯು ತನ್ನ ಸಿಎಸ್‌ಆರ್ ಯೋಜನೆಯನ್ನು ನಿರ್ವಹಿಸುತ್ತಿರುವ ಅಂಗ ಸಂಸ್ಥೆಯಾದ ಅದಾನಿ ಫೌಂಡೇಷನ್‌ನ ವತಿಯಿಂದ ಸಿಎಸ್‌ಆರ್ ಅನುದಾನದಡಿಯಲ್ಲಿ ಮುದರಂಗಡಿ ಗ್ರಾಮ ಪಂಚಾಯತ್ ವಾಪ್ತಿಯಲ್ಲಿ 2 ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿತು.  ಮುದರಂಗಡಿ ಗ್ರಾಮ […]

ಅದಾನಿ ಸಿಎಸ್ಆರ್: ಮುದರಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 17 ಲಕ್ಷ ಮೊತ್ತದ  ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ

(Yelluru) ಎಲ್ಲೂರು: ಎಲ್ಲೂರು ಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅದಾನಿ (ADANI Foundation) ಒಡೆತನದ ಅದಾನಿ ಪವರ್ ಲಿಮಿಟೆಡ್‌ ಸಂಸ್ಥೆಯು ತನ್ನ ಸಿಎಸ್‌ಆರ್ ಯೋಜನೆಯನ್ನು ನಿರ್ವಹಿಸುತ್ತಿರುವ ಅಂಗ ಸಂಸ್ಥೆಯಾದ ಅದಾನಿ ಫೌಂಡೇಷನ್‌ನ ವತಿಯಿಂದ ಸಿಎಸ್‌ಆರ್ ಅನುದಾನದಡಿಯಲ್ಲಿ ಮುದರಂಗಡಿ ಗ್ರಾಮ ಪಂಚಾಯತ್ ವಾಪ್ತಿಯಲ್ಲಿ 2 ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿತು.

 ಮುದರಂಗಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಸಾಂತೂರು ಗ್ರಾಮದಲ್ಲಿ ಸುಮಾರು 230 ಮೀಟರ್‌ಉದ್ದದ ಕಾಂಜರಕಟ್ಟೆ – ಆಲು ಬ್ರಹ್ಮಸ್ಥಾನದ ಮಣ್ಣಿನ ರಸ್ತೆಯ ಕಾಂಕ್ರೀಟೀಕರಣ ಹಾಗೂ ಪಿಲಾರು ಗ್ರಾಮದ ಕಂಕಣಗುತ್ತು ಕೋರ್ದಬ್ಬ ದೈವಸ್ಥಾನದ ಪ್ರಾಂಗಣಕ್ಕೆ ಕಾಂಕ್ರೆಟೀಕರಣದ ಕಾಮಗಾರಿಗಳನ್ನು ಸುಮಾರು ರೂ. 17 ಲಕ್ಷ ರೂ. ಯೋಜನಾ ವೆಚ್ಚದಲ್ಲಿಅದಾನಿ ಫೌಂಡೇಷನ್‌ ತನ್ನ ಸಿಎಸ್‌ಆರ್ ಯೋಜನೆಯ ಗ್ರಾಮೀಣ ಮೂಲಭೂತ ಸೌಕರ್ಯ ಕಾರ್ಯಕ್ರಮದಡಿಯಲ್ಲಿ ಕೈಗೆತ್ತಿಕೊಂಡಿದ್ದು, ಈ 2 ಕಾಮಗಾರಿಗಳಿಗೆ ಅದಾನಿ ಸಮೂಹದ ಕಾರ್ಯ ನಿರ್ವಾಹಕ ನಿರ್ದೇಶಕ ಹಾಗೂ ಅಧ್ಯಕ್ಷರಾದ ಕಿಶೋರ್ ಆಳ್ವರವರು, ಮುದರಂಗಡಿ ಗ್ರಾ.ಪಂ ಅಧ್ಯಕ್ಷೆ ನಮಿತಾ ಮತ್ತು ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರ ಸಮ್ಮುಖ ಗುದ್ದಲಿ ಪೂಜೆ ನೆರವೇರಿಸಿದರು.

 ಗುದ್ದಲಿ ಪೂಜೆ ನೆರವೇರಿಸಿದ ಕಿಶೋರ್ ಆಳ್ವ ಮಾತನಾಡಿ, ಅದಾನಿ ಪವರ್ ಲಿಮಿಟೆಡ್ – ಉಡುಪಿ ಟಿಪಿಪಿ ಸಂಸ್ಥೆಯು ತನ್ನ ಸಿಎಸ್‌ಆರ್ ಯೋಜನೆಯಡಿ ಸ್ಥಾವರದ ಸುತ್ತಮುತ್ತಲಿನ 7 ಗ್ರಾಮ ಪಂಚಾಯತ್‌ಗಳಿಗೆ ಗ್ರಾಮೀಣ ಮೂಲಭೂತ ಸೌಕರ್ಯವನ್ನುಅಭಿವೃದ್ಧಿ ಪಡಿಸಲು ಪ್ರತ್ಯೇಕವಾಗಿ ಅನುದಾನ ಮೀಸಲಿಟ್ಟಿದ್ದು, ಆ ಅನುದಾನಡಿಯಲ್ಲಿ ಪ್ರತಿ ವಾರ್ಷಿಕ ಸಾಲಿನಲ್ಲಿಆಯಾ ಪಂಚಾಯತ್‌ ತನ್ನ ವಾರ್ಷಿಕ ಕ್ರಿಯಾಯೋಜನೆಯಲ್ಲಿ ನಮೂದಿಸುವ ಕಾಮಗಾರಿಗಳನ್ನು ಅದಾನಿ ಫೌಂಡೇಶನ್ ಸಿಎಸ್‌ಆರ್ ಯೋಜನೆಯಡಿಯಲ್ಲಿ ಆ ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ತಿಳಿಸಿದರು.

 ಶಿಕ್ಷಣ, ಆರೋಗ್ಯ, ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹಿಸಲು ಹಲವಾರು ಕಾರ್ಯಕ್ರಮಗಳನ್ನು ಪ್ರತಿ ವರ್ಷ ಅದಾನಿ ಫೌಂಡೇಶನ್ ಹಮ್ಮಿಕೊಳ್ಳುತ್ತಿದ್ದು,  ಅದರ ಜೊತೆಗೆ ಪ್ರತ್ಯೇಕವಾಗಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಮುದರಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು ರೂ. 4. 65 ಕೋಟಿ ರೂ. ಅನುದಾನವನ್ನುಅದಾನಿ ಮೀಸಲಿಟ್ಟು, ಹಂತ ಹಂತವಾಗಿ ಗ್ರಾ.ಪಂ ನೀಡುವ ಕ್ರಿಯಾ ಯೋಜನೆ ಪ್ರಕಾರ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತಿದೆ ಎಂದು ಆಳ್ವ ಹೇಳಿದರು.

  ಸುಮಾರು ರೂ. 4 ಕೋಟಿಗಿಂತ ಅಧಿಕ ಮೊತ್ತದ ಅಭಿವೃದ್ಧಿಕೆಲಸಗಳನ್ನು ಮುದರಂಗಡಿ ಪಂಚಾಯತ್ ನೀಡಿರುವ ಕ್ರಿಯಾ ಯೋಜನೆ ಮೇರೆಗೆ ಈಗಾಗಲೇ ಅದಾನಿ ಸಂಸ್ಥೆಯು ಕಾರ್ಯರೂಪಕ್ಕೆ ತಂದಿದೆ ಎಂದು ಆಳ್ವ ತಿಳಿಸಿದರು.

  ಕಳೆದ 9 ವರ್ಷದಲ್ಲಿ, ಉಡುಪಿ ಉಷ್ಣ ವಿದ್ಯುತ್ ಸ್ಥಾವರವು ಅದಾನಿ ತೆಕ್ಕೆಗೆ ಬಂದ ಮೇಲೆ ಸರಾಸರಿ ಪ್ರತಿ ವಾರ್ಷಿಕ ಸಾಲಿನಲ್ಲಿ ರೂ.4 ಕೋಟಿಕ್ಕಿಂತ ಹೆಚ್ಚು ಹಣವನ್ನು ಸ್ಥಾವರದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾಮಾಜಿಕ ಅಭಿವೃದ್ಧಿ ಕೆಲಸಗಳಿಗೆ ವ್ಯಯಿಸಿದೆ ಎಂದೂ ಆಳ್ವ ಹೇಳಿದರು.

 ಈ ಸಂದರ್ಭ ಮುದರಂಗಡಿ ಗ್ರಾ.ಪಂ. ಅಧ್ಯಕ್ಷೆ ನಮಿತಾ, ಮಾಜಿ ಅಧ್ಯಕ್ಷ ಡೇವಿಡ್ ಡಿʼಸೋಜಾ, ಪಂಚಾಯತ್ ಸದಸ್ಯ ರವೀಂದ್ರ ಪ್ರಭು, ಕೋರ್ದಬ್ಬು ದೈವಸ್ಥಾನ  ಸಮಿತಿಯ ಅಧ್ಯಕ್ಷ ರವೀಶ್ ಶೆಟ್ಟಿ, ಸದಸ್ಯರಾದ ಮೋಹನ್ ಶೆಟ್ಟಿ, ರಮೇಶ್ ಶೆಟ್ಟಿ, ಸರ್ವೋತ್ತಮ ಶೆಟ್ಟಿ, ರಾಮ ಪೂಜಾರಿ, ಪ್ರಕಾಶ ಶೆಟ್ಟಿ, ಹರೀಶ್ ಶೆಟ್ಟಿ, ಅರ್ಚಕರಾದ ರಮೇಶ ಮುಖಾರಿ, ಸ್ಥಳೀಯ ಗ್ರಾಮಸ್ಥರು, ಅದಾನಿ ಪವರ್ ಲಿಮಿಟೆಡ್ ಸಂಸ್ಥೆಯ ಏಜಿಎಂ ರವಿ ಆರ್. ಜೇರೆ, ಅದಾನಿ ಫೌಂಡೇಷನ್‌ನ ಅನುದೀಪ್‌ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.