ಅಪಘಾತದಲ್ಲಿ ಕಾಲು ಕಳೆದುಕೊಂಡ ರಕ್ತದಾನಿ, ಕ್ರೀಡಾಪಟು ಯುವಕನಿಂದ ಸಹಾಯಕ್ಕಾಗಿ ಮನವಿ
38 ಬಾರಿ ರಕ್ತದಾನ ಮಾಡಿದ ಯುವಕನಿಂದ ಸಹಾಯಕ್ಕಾಗಿ ಮೊರೆ
(Mysore) ಮೈಸೂರು: ಬದುಕು ಕಟ್ಟಿಕೊಳ್ಳುವ ಉತ್ಸಾಹದಲ್ಲಿದ್ದ ಮೈಸೂರಿನ ಯುವಕ ಗಣೇಶ್ ಕುಮಾರ್ ಶರ್ಮ ಅಪಘಾತಕ್ಕೀಡಾಗಿ ಕಾಲು ಕಳೆದುಕೊಂಡು ಈಗ ಕಂಗಾಲಾಗಿ ಬೇರೆಯವರಲ್ಲಿ ಸಹಾಯಕ್ಕಾಗಿ ಮೊರೆ ಇಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮೈಸೂರಿನ ಬೆಳವಾಡಿ ನಿವಾಸಿಯಾಗಿರುವ ಗಣೇಶ್ ಕುಮಾರ್ ಶರ್ಮ ಹವ್ಯಕ ಬ್ರಾಹ್ಮಣ. ಮೈಸೂರಿನ ಟೈಟಾನ್ ವಾಲ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. 2017 ರಲ್ಲಿ ಅವರಿಗೆ ಅಪಘಾತ ಸಂಭವಿಸಿತು. ಘಟನೆಗೆ ಕಾರಣವಾದ ದ್ವಿಚಕ್ರ ವಾಹನ ಯಾವುದು ಎಂದೂ ತಿಳಿದ ಕಾರಣ ಪರಿಹಾರ ಪಡೆಯಲು ಸಾಧ್ಯವಾಗಿಲ್ಲ. ಆ ನಂತರ ಕೆಲಸ ಕಳೆದುಕೊಂಡಿದ್ದಾರೆ.
ಅಪಘಾತದಿಂದ ಅಂಗವಿಕಲರಾಗಿರುವ ಗಣೇಶ್ ಅವರಿಗೆ ಈವರೆಗೂ ಎಲ್ಲಿಯೂ ಕೆಲಸ ಸಿಕ್ಕಿಲ್ಲ. ಇವರ ತಾಯಿ ಮನೆ ಕೆಲಸ ಮಾಡಿಕೊಂಡು ಮಗನನ್ನು ಸಾಕುತ್ತಿದ್ದಾರೆ. ತಾನೂ ಕೆಲಸ ಮಾಡಬೇಕೆಂಬ ಉತ್ಸಾಹ ಇದ್ದರೂ, ಅವಕಾಶ ಸಿಗದೆ ಗಣೇಶ್ ಕಂಗಾಲಾಗಿದ್ದಾರೆ.
ಅಪಘಾತದ ನಂತರ ಗಣೇಶರವರು 3 ವರ್ಷಗಳ ಕಾಲ ಹಾಸಿಗೆಯಿಂದ ಕೆಳಗೆ ಇಳಿಯಲೇ ಇಲ್ಲ. ಆಸ್ಪತ್ರೆಯ ಖರ್ಚು 5 ಲಕ್ಷ ಆಗಿದ್ದು, ತಾಯಿ 5 ಲಕ್ಷ ಸಾಲ ಮಾಡಿ ಬಿಲ್ಲು ಭರಿಸಿದ್ದಾರೆ. ತಾಯಿ ಅಡುಗೆ ಕೆಲಸಕ್ಕೆ ಹೋಗುತ್ತಿದ್ದು, ಈಗ ವಯಸ್ಸಾದ ಕಾರಣ ಎಲ್ಲೂ ಹೋಗ ಪರಿಸ್ಥಿತಿ ನೆಲೆಸಿದೆ. ಇನ್ನೂ 3 ಲಕ್ಷ ಸಾಲ ಇದ್ದು, ಸಾಲ ತೀರಿಸುವ ಹೊಣೆ ಗಣೇಶರವರ ಮೇಲಿದೆ.
ಗಣೇಶರವರು ಚುಟುಕು ಕವನವನ್ನು ಬರೆದು ಕವಿಗೋಷ್ಠಿಯಲ್ಲಿ ಹೇಳಿ ಬಹುಮಾನ ಪಡೆದಿದ್ದಾರೆ. ವೀಲ್ ಚೇರ್ ಕ್ರಿಕೆಟ್, ಕಬ್ಬಡಿ, ಪಂಜ ಕುಸ್ತಿಯಲ್ಲಿ ಜಿಲ್ಲೆ, ರಾಜ್ಯ ಮಟ್ಟದಲ್ಲಿ ಆಡಿ ಪ್ರಶಸ್ತಿ ಗಳಿಸಿದ್ದಾರೆ.
ಇತ್ತೀಚೆಗೆ ಅವರ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಕೊಟ್ಟು ಸನ್ಮಾನಿಸಿದ್ದಾರೆ.
ಇಂಡಿಯನ್ ಐಕಾನ್ ಅವಾರ್ಡ್, ಸಂಗೊಳ್ಳಿ ರಾಯಣ್ಣ ರಾಷ್ಟ್ರೀಯ ಪ್ರಶಸ್ತಿ, ರಕ್ತದಾನಿ ರತ್ನ ಪ್ರಶಸ್ತಿ, ಸಮಾಜ ಸೇವಾರತ್ನ ಪ್ರಶಸ್ತಿ, ಕನ್ನಡ ಸೇವಾರತ್ನ ಪ್ರಶಸ್ತಿ, ಸ್ಟಾರ್ ಅಚೀವರ್ ಆಫ್ ಕರ್ನಾಟಕ ಅವಾರ್ಡ್, ಕರ್ನಾಟಕ ಐಕಾನ್ ಎಕ್ಸಲೆಂಟ್ ಅವಾರ್ಡ್ ಪಡೆದಿದ್ದಾರೆ.
ಈ ಸಮಾಜಕ್ಕೆ ಗಣೇಶರವರ ಕೊಡುಗೆ ತುಂಬಾ ಇದೆ. ಈ ಅಂಗವಿಕಲ ಕುಟುಂಬವನ್ನು ಉಳಿಸಿ. ದಯಮಾಡಿ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಗೋಗರೆಯುತ್ತಿದ್ದಾರೆ.
ಗಣೇಶರವರಿಗೆ ಹೊಂದಿಕೆಯಾಗುವ ನೌಕರಿ ಹಾಗೂ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಸಹಾಯ ಮಾಡಲು ಬಯಸುವವರು ಗಣೇಶ್ ಕುಮಾರ್ ಶರ್ಮ ಎಂ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಕೌಂಟ್ ನಂಬರ್-40819412247 ಐಎಫ್‌ಎಸ್‌ಸಿ ಕೋಡ್-ಎಸ್ ಬಿ ಐಎನ್0006768, ಬೆಳವಾಡಿ ಬ್ರಾಂಚ್ ಹಾಗೂ ಗೂಗಲ್ ಪೇ/ಫೋನ್ ಪೇ ನಂಬರ್ – 7090156688 ಹಣ ಪಾವತಿ ಮಾಡಬಹುದು.

