ಎರ್ಮಾಳು : ನಿಂತಿದ್ದ ಬಸ್ ಗೆ ಕಾರು ಡಿಕ್ಕಿ – ಕಾರು ಚಾಲಕನಿಗೆ ಗಾಯ
(Padubidri) ಪಡುಬಿದ್ರಿ : ನಿಂತಿದ್ದ ಬಸ್ಸಿಗೆ ಕಾರು ಡಿಕ್ಕಿಯಾಗಿ ಕಾರು ಚಾಲಕ ಗಾಯಗೊಂಡ ಘಟನೆ ಎರ್ಮಾಳು ತೆಂಕ ಬಳಿ ಸೋಮವಾರ ಘಟಿಸಿದೆ.
ಮಂಗಳೂರಿನಿಂದ ಉಡುಪಿ ಕಡೆ ತೆರಳುತ್ತಿದ್ದ ಬಸ್ಸು ಪ್ರಯಾಣಿಕರಿಗಾಗಿ ನಿಂತಿದ್ದ ಸಂದರ್ಭ ಹಿಂದಿನಿಂದ ಬಂದ ಕಾರೊಂದು ಢಿಕ್ಕಿಯಾಗಿದೆ.
ಢಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಚಾಲಕ ಗಾಯಗೊಂಡಿದ್ದಾನೆ. ಕಾರು ಚಾಲಕನನ್ನು ಎಸ್ಡಿಪಿಐ ಅಂಬುಲೆನ್ಸ್ ನಲ್ಲಿ ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

