• Home  
  • ಅಮೃತಾ ವಿದ್ಯಾಲಯಂನಲ್ಲಿ ಔಷಧೀಯ ಉದ್ಯಾನ ಲೋಕಾರ್ಪಣೆ
- ಮಂಗಳೂರು - ಶಾಲಾ ಕಾಲೇಜು

ಅಮೃತಾ ವಿದ್ಯಾಲಯಂನಲ್ಲಿ ಔಷಧೀಯ ಉದ್ಯಾನ ಲೋಕಾರ್ಪಣೆ

Share: ಮಂಗಳೂರು: ವಿಶ್ವ ಪರಿಸರ ದಿನದ ಅಂಗವಾಗಿ ನಗರದ ಬೋಳೂರಿನಲ್ಲಿರುವ ಅಮೃತಾ ವಿದ್ಯಾಲಯಂ ಶಾಲೆ ವಠಾರದಲ್ಲಿ ವಿಶಿಷ್ಟ ಪರಿಕಲ್ಪನೆಯ ಔಷಧೀಯ ಗಿಡಗಳ ಉದ್ಯಾನ ‘ಅಮೃತಾ ಸಂಜೀವಿನಿ’ ಯನ್ನು ಲೋಕಾರ್ಪಣೆ ಮಾಡಲಾಯಿತು. ವಿಜಯ ಕರ್ನಾಟಕ ಪತ್ರಿಕೆಯ ರೆಸಿಡೆಂಟ್ ಎಡಿಟರ್ ರವೀಂದ್ರ ಶೆಟ್ಟಿ ಹೊಸ ಉದ್ಯಾನವನ್ನು ಉದ್ಘಾಟಿಸಿ ಶುಭ ಹಾರೈಸಿದರು.ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ಹಲವಾರು ಔಷಧೀಯ ಸಸ್ಯಗಳನ್ನು ಕೊಡುಗೆಯಾಗಿ ನೀಡಿದ್ದು, ಉದ್ಯಾನದಲ್ಲಿ ಗಿಡಗಳನ್ನು ನೆಟ್ಟು ಶುಭಾರಂಭ ಮಾಡಲಾಯಿತು. ವಿದ್ಯಾರ್ಥಿಗಳಿಗೆ ವಿಶಿಷ್ಟ ಪರಿಕಲ್ಪನೆ: ಶಾಲಾ ಆವರಣವು ಪ್ರಕೃತಿದತ್ತವಾಗಿದ್ದು, ಇದೀಗ ಔಷಧೀಯ ಗುಣಗಳುಳ್ಳ […]

ಮಂಗಳೂರು: ವಿಶ್ವ ಪರಿಸರ ದಿನದ ಅಂಗವಾಗಿ ನಗರದ ಬೋಳೂರಿನಲ್ಲಿರುವ ಅಮೃತಾ ವಿದ್ಯಾಲಯಂ ಶಾಲೆ ವಠಾರದಲ್ಲಿ ವಿಶಿಷ್ಟ ಪರಿಕಲ್ಪನೆಯ ಔಷಧೀಯ ಗಿಡಗಳ ಉದ್ಯಾನ ‘ಅಮೃತಾ ಸಂಜೀವಿನಿ’ ಯನ್ನು ಲೋಕಾರ್ಪಣೆ ಮಾಡಲಾಯಿತು. ವಿಜಯ ಕರ್ನಾಟಕ ಪತ್ರಿಕೆಯ ರೆಸಿಡೆಂಟ್ ಎಡಿಟರ್ ರವೀಂದ್ರ ಶೆಟ್ಟಿ ಹೊಸ ಉದ್ಯಾನವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ಹಲವಾರು ಔಷಧೀಯ ಸಸ್ಯಗಳನ್ನು ಕೊಡುಗೆಯಾಗಿ ನೀಡಿದ್ದು, ಉದ್ಯಾನದಲ್ಲಿ ಗಿಡಗಳನ್ನು ನೆಟ್ಟು ಶುಭಾರಂಭ ಮಾಡಲಾಯಿತು.

ವಿದ್ಯಾರ್ಥಿಗಳಿಗೆ ವಿಶಿಷ್ಟ ಪರಿಕಲ್ಪನೆ: ಶಾಲಾ ಆವರಣವು ಪ್ರಕೃತಿದತ್ತವಾಗಿದ್ದು, ಇದೀಗ ಔಷಧೀಯ ಗುಣಗಳುಳ್ಳ ಸಸ್ಯಗಳನ್ನು ನೆಡುವ ಸಲುವಾಗಿ ವಿಶಿಷ್ಟ ಪರಿಕಲ್ಪನೆಯ ಉದ್ಯಾನವನ್ನು ಯೋಜಿಸಲಾಗಿದೆ. ನಿಂಬೆ ಹುಲ್ಲು, ಒರಿಗಾನೊ (ಸಂಭಾರ್ ಬಲ್ಲಿ), ಬೇವಿನ ಗಿಡ, ಅಮೃತ ಬಲ್ಲಿ, ದಾಲ್ಚಿನ್ನಿ, ಗಿಡ ( ಚಕ್ಕೆ ಗಿಡ ), ಬಿಳಿ ಶಂಖ ಪುಷ್ಪ, ಅರಿಶಿನ ಗಿಡ (ಅರಶಿನ ಗಿಡ), ಒಂದೆಲಗ, ವಿಲ್ಯಾದೆಲೆ, ಪುದೀನ ಸಸ್ಯ ಮುಂತಾದ ಔಷಧೀಯ ಗುಣಗಳುಳ್ಳ ಸಸ್ಯಗಳನ್ನು ಇಲ್ಲಿ ಬೆಳೆಸಲಾಗುವುದು. ಗಿಡಗಳನ್ನು ನೆಟ್ಟು, ನೀರು ಎರೆದು, ಪೋಷಿಸಿ ಬೆಳೆಸುವ ಅನುಭವಾತ್ಮಕ ಕಲಿಕೆ ವಿದ್ಯಾರ್ಥಿಗಳಿಗೆ ಹೊಸ ಅನುಭವ ನೀಡಲಿದ್ದು ವಿದ್ಯಾರ್ಥಿಗಳೇ ಈ ಉದ್ಯಾನದ ಪೋಷಣೆ ಮಾಡಲಿರುವರು.

ಈ ಸಂದರ್ಭ ಮಾತನಾಡಿದ ಶಾಲಾ ವಿದ್ಯಾರ್ಥಿಗಳು, ಆರೋಗ್ಯಕರ, ಪ್ರಕೃತಿದತ್ತವಾದ ಹಸಿರು ಭವಿಷ್ಯಕ್ಕೆ ಉದ್ಯಾನಗಳು ಅತೀ ಅವಶ್ಯಕತವಾಗಿದ್ದು, ಸಸ್ಯಗಲ್ಲಿರುವ ಔಷಧೀಯ ಗುಣ ಮತ್ತು ಮೌಲ್ಯಗಳನ್ನು ನಾವು ಶಾಲೆಯಲ್ಲಿಯೇ ಕಲಿಯಲು ಇದು ಉಪಯುಕ್ತವಾಗಲಿದೆ ಎಂದು ಹೇಳಿದರು.

ವಿ.ಕ ಪತ್ರಿಕೆಯ ಇತರ ಅಧಿಕಾರಿಗಳು, ಶಾಲಾ ಕ್ಯಾಂಪಸ್ ನಿರ್ದೇಶಕ ಯತೀಶ್ ಬೈಕಂಪಾಡಿ, ಪ್ರಾಂಶುಪಾಲೆ ಅಕ್ಷತಾ ಶೆಣೈ, ಶಿಕ್ಷಕ ಶಿಕ್ಷಕೇತರ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.