Tag: Amrita Vidyalayam

competition ಕ್ರೀಡೆ ಶಾಲಾ ಕಾಲೇಜು

ಮಂಗಳೂರಿನಲ್ಲಿ ಪ್ರಪ್ರಥಮ ಅಂಡರ್ – 12 ಕ್ರಿಕೆಟ್ ಪ್ರೀಮಿಯರ್ ಲೀಗ್

ಮಂಗಳೂರು: ಅಮೃತಾ ಸ್ಪೋರ್ಟ್ಸ್ ಅಕಾಡೆಮಿ ಮತ್ತು 22Y ಸ್ಕೂಲ್ ಆಫ್ ಕ್ರಿಕೆಟ್ ಸಹಯೋಗದೊಂದಿಗೆ ಅಮೃತ ವಿದ್ಯಾಲಯಂ ಆಶ್ರಯದಲ್ಲಿ ಮಂಗಳೂರಿನಲ್ಲಿ ಮೊಟ್ಟಮೊದಲ ಬಾರಿಗೆ 12 ವರ್ಷದೊಳಗಿನವರ ಕ್ರಿಕೆಟ್ ಪ್ರೀಮಿಯರ್ ಲೀಗ್ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ. ಮಂಗಳೂರು ಬೋಳೂರಿನ ಅಮೃತ ವಿದ್ಯಾಲಯಂ ಮೈದಾನದಲ್ಲಿ ಕ್ರಿಕೆಟ್ ತಾರೆ ಕೆಎಲ್ ರಾಹುಲ್ ತರಬೇತಿಗೆ ಹೆಸರಾದ ಲೆಜೆಂಡರಿ ಕೋಚ್ ಜಯರಾಜ್ ನೇತೃತ್ವದಲ್ಲಿ ಈ ಪ್ರತಿಷ್ಠಿತ ಟೂರ್ನಿ ನಡೆಯಲಿದೆ. 7 ರಿಂದ 12 ವರ್ಷ ವಯಸ್ಸಿನ ಹುಡುಗರು ಮತ್ತು ಹುಡುಗಿಯರಿಗೆ ಮುಕ್ತ […]

ಮಂಗಳೂರು ಶಾಲಾ ಕಾಲೇಜು

ಭಾರತೀಯ ಸಂವಿಧಾನ ಕುರಿತು ಡಾ. ಪಿ ಅನಂತಕೃಷ್ಣ ಭಟ್ ರಿಂದ ವಿಚಾರ ಸಂಕಿರಣ

ಮಂಗಳೂರು: ಇಲ್ಲಿನ ಅಮೃತ ವಿದ್ಯಾಲಯಂ ಶಾಲೆಯ ಅಮೃತೇಶ್ವರೀ ಸಭಾಂಗಣದಲ್ಲಿ 8 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಭಾರತೀಯ ಸಂವಿಧಾನ ಪರಿಣಿತ ಹಾಗೂ ವಿದ್ವಾಂಸ ಡಾ. ಪಿ. ಅನಂತಕೃಷ್ಣ ಭಟ್ ಅವರು ಭಾರತೀಯ ಸಂವಿಧಾನ ವಿಷಯದ ಬಗ್ಗೆ ವಿಚಾರ ಸಂಕಿರಣ ನಡೆಸಿದರು. ಯುವ ಮನಸ್ಸುಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಭಾರತೀಯ ಸಂವಿಧಾನದ ಮೂಲಗಳು, ಭಾರತೀಯ ನಾಗರಿಕರ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಇತ್ಯಾದಿಗಳ ಕುರಿತು ಒಳನೋಟ ಮಾಹಿತಿ ನೀಡಿದರು. ಇದೇ ಸಂದರ್ಭ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೌಲ್ಯಗಳನ್ನು ಎತ್ತಿಹಿಡಿಯಲು […]

ಮಂಗಳೂರು ಶಾಲಾ ಕಾಲೇಜು

ಗುರುಪೂರ್ಣಿಮೆಯಂದು ಮಕ್ಕಳಿಂದ ಹೆತ್ತವರ ಪೂಜೆ (Childrens worship their parents on Guru Poornima)

ಗುರುಪೂರ್ಣಿಮೆಯಂದು ಮಕ್ಕಳಿಂದ ಹೆತ್ತವರ ಪೂಜೆ ಅಮೃತಾ ವಿದ್ಯಾಲಯಂನಲ್ಲಿ ಸನಾತನ ಸಂಪ್ರದಾಯ ಅನಾವರಣ ಮಂಗಳೂರು: ಇಲ್ಲಿನ ಅಮೃತಾ ವಿದ್ಯಾಲಯಂ ಶಾಲೆಯ ಆಶ್ರಯದಲ್ಲಿ ಗುರು ಪೂರ್ಣಿಮಾ ದಿನದ ಶುಭ ಮುಹೂರ್ತದಲ್ಲಿ ನಡೆಯುವ ವಿಶಿಷ್ಟ ಮತ್ತು ಸಾಂಪ್ರದಾಯಿಕ ‘ಸಂಸ್ಕೃತಿ ಪೂಜೆ’ ಕಾರ್ಯಕ್ರಮವು ಭಾನುವಾರ ಮಧ್ಯಾಹ್ನ ಉರ್ವ ಶ್ರೀ ಮಾರಿಯಮ್ಮ ದೇವಳದ ಸಭಾಂಗಣದಲ್ಲಿ ಜರಗಿತು. ಗುರು ಪೂರ್ಣಿಮೆಯ ಮೌಲ್ಯವನ್ನು ಪ್ರತಿಪಾದಿಸುವ ಈ ವಿಶಿಷ್ಟ ಆಚರಣೆಯಲ್ಲಿ ವಿದ್ಯಾರ್ಥಿಗಳು ತಮ್ಮ ಜೀವನದ ಮೊದಲ ಗುರುಗಳಾದ ತಮ್ಮ ತಂದೆ ತಾಯಿ, ಪೋಷಕರು ಒದಗಿಸಿದ ಅಪಾರ ಪ್ರೀತಿ, ತ್ಯಾಗ […]

ಮಂಗಳೂರು ಶಾಲಾ ಕಾಲೇಜು

ಶಾಲೆಗಳಲ್ಲಿ ದೇಶ, ಸತ್ಯ, ಮೌಲ್ಯಗಳ ಭೋಧನೆ ಆಗಬೇಕು: ಲೆ। ಕರ್ನಲ್ ವಿವೇಕ್ ಬಿಂದ್ರ

ಅಮೃತ ವಿದ್ಯಾಲಯಂ ನಲ್ಲಿ ಶಾಲಾ ಮಂತ್ರಿ ಮಂಡಲ ಪದಗ್ರಹಣ ಮಂಗಳೂರು: ಶಾಲೆಗಳು ಮೌಲ್ಯಾಧಾರಿತ ಶಿಕ್ಷಣಕ್ಕೆ ಪ್ರಾಧನ್ಯತೆ ಕೊಟ್ಟು ವಿದ್ಯಾರ್ಥಿಗಳಿಗೆ ದೇಶ, ಧೈರ್ಯ, ಸತ್ಯ, ಮೌಲ್ಯಗಳನ್ನು ನೀಡಬೇಕು ಎಂದು ಲೆಫ್ಟಿನೆಂಟ್ ಕರ್ನಲ್ ವಿವೇಕ್ ಬಿಂದ್ರ ಹೇಳಿದರು. ಮಂಗಳವಾರ ಬೋಳೂರಿನಲ್ಲಿರುವ ಅಮೃತ ವಿದ್ಯಾಲಯಂ ಶಾಲೆಯಲ್ಲಿ ನೂತಾವಾಗಿ ರಚನೆಗೊಂಡ ವಿದ್ಯಾರ್ಥಿ ಮಂಡಲದ ಪದಗ್ರಹಣ ಮತ್ತು ವಿವಿಧ ಸಂಘಗಳ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಶಾಲೆಗಳು ಕೇವಲ ಶಿಕ್ಷಣವನ್ನು ನೀಡುವಂತಹ ಸಂಸ್ಥೆಯಾಗದೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ನೆರವಾಗುವಂತಹದ್ದು ಆಗಿರಬೇಕೆಂದು […]

ಮಂಗಳೂರು ಶಾಲಾ ಕಾಲೇಜು

ಅಮೃತಾ ವಿದ್ಯಾಲಯಂನಲ್ಲಿ ಔಷಧೀಯ ಉದ್ಯಾನ ಲೋಕಾರ್ಪಣೆ

ಮಂಗಳೂರು: ವಿಶ್ವ ಪರಿಸರ ದಿನದ ಅಂಗವಾಗಿ ನಗರದ ಬೋಳೂರಿನಲ್ಲಿರುವ ಅಮೃತಾ ವಿದ್ಯಾಲಯಂ ಶಾಲೆ ವಠಾರದಲ್ಲಿ ವಿಶಿಷ್ಟ ಪರಿಕಲ್ಪನೆಯ ಔಷಧೀಯ ಗಿಡಗಳ ಉದ್ಯಾನ ‘ಅಮೃತಾ ಸಂಜೀವಿನಿ’ ಯನ್ನು ಲೋಕಾರ್ಪಣೆ ಮಾಡಲಾಯಿತು. ವಿಜಯ ಕರ್ನಾಟಕ ಪತ್ರಿಕೆಯ ರೆಸಿಡೆಂಟ್ ಎಡಿಟರ್ ರವೀಂದ್ರ ಶೆಟ್ಟಿ ಹೊಸ ಉದ್ಯಾನವನ್ನು ಉದ್ಘಾಟಿಸಿ ಶುಭ ಹಾರೈಸಿದರು.ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ಹಲವಾರು ಔಷಧೀಯ ಸಸ್ಯಗಳನ್ನು ಕೊಡುಗೆಯಾಗಿ ನೀಡಿದ್ದು, ಉದ್ಯಾನದಲ್ಲಿ ಗಿಡಗಳನ್ನು ನೆಟ್ಟು ಶುಭಾರಂಭ ಮಾಡಲಾಯಿತು. ವಿದ್ಯಾರ್ಥಿಗಳಿಗೆ ವಿಶಿಷ್ಟ ಪರಿಕಲ್ಪನೆ: ಶಾಲಾ ಆವರಣವು ಪ್ರಕೃತಿದತ್ತವಾಗಿದ್ದು, ಇದೀಗ ಔಷಧೀಯ ಗುಣಗಳುಳ್ಳ ಸಸ್ಯಗಳನ್ನು […]

ಮಂಗಳೂರು ಶಾಲಾ ಕಾಲೇಜು

ಸತತ 16 ವರ್ಷ ಶೇ. 100 ಫಲಿತಾಂಶ : ಸಿಬಿಎಸ್ಇ ಯಲ್ಲಿ ಮಂಗಳೂರಿನ ಅಮೃತಾ ವಿದ್ಯಾಲಯಂ ಶಾಲೆ ಸಾಧನೆ

ಮಂಗಳೂರು: ಇತ್ತೀಚಿಗೆ ನಡೆದ ಸಿಬಿಎಸ್ಇ ಹತ್ತನೇ ತರಗತಿ ಪರೀಕ್ಷೆಯಲ್ಲಿ ಮಂಗಳೂರು ಬೋಳೂರಿನ ಅಮೃತಾ ವಿದ್ಯಾಲಯಂ ಶಾಲೆ ಶೇ. 100 ಫಲಿತಾಂಶ ಗಳಿಸಿದ್ದು ಸತತ 16ನೇ ವರುಷ 100 ಶೇಕಡ ಫಲಿತಾಂಶ ಗಳಿಸಿದ ವಿಶಿಷ್ಟ ಸಾಧನೆ ಮಾಡಿದೆ. 2023-24 ನೇ ಸಾಲಿನಲ್ಲಿ ಪರೀಕ್ಷೆ ಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದು, 4 ವಿದ್ಯಾರ್ಥಿಗಳು ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. ಉಳಿದಂತೆ, 7 ವಿದ್ಯಾರ್ಥಿಗಳು ಶೇ. 85 ಕ್ಕಿಂತ ಹೆಚ್ಚು, 6 ವಿದ್ಯಾರ್ಥಿಗಳು ಶೇ. 80 […]

ಮಂಗಳೂರು ಶಾಲಾ ಕಾಲೇಜು

ಮಕ್ಕಳು ಪ್ರಜ್ವಲಿಸುವ ದೀಪದಂತೆ, ನಾವು ಬೆಳಕು ನೀಡಿ ಸಲಹಬೇಕು: ಸ್ವಾಮಿನಿ ಮಂಗಳಾಮೃತ ಪ್ರಾಣ

ಅಮೃತ ವಿದ್ಯಾಲಯಂ ನಲ್ಲಿ ‘ಅಮೃತ ಸಂಸ್ಕೃತಿ ‘ ವೈಭವ ಮಂಗಳೂರು: ಪುಟ್ಟ ಮಕ್ಕಳು ಬೆಳಕಿನ ಬುಗ್ಗೆಯಂತೆ. ಅವರು ನಮ್ಮ ಆಲೋಚನೆಗಳನ್ನೆಲ್ಲಾ ತುಂಬಿ ಬಿಡುವ ಪಾತ್ರೆಗಳಲ್ಲ. ಮಕ್ಕಳೆಂದರೆ ಪ್ರಜ್ವಲಿಸುವ ದೀಪವಿದ್ದಂತೆ. ನಾವು ಬೆಳಕು ನೀಡಿ ಸಲಹಬೇಕು ಎಂದು ಮಂಗಳೂರು ಮಾತಾ ಅಮೃತಾನಂದಮಯಿ ಮಠಾಧಿಪತಿ ಸ್ವಾಮಿನಿ ಮಂಗಳಾಮೃತ ಪ್ರಾಣ ಹೇಳಿದರು. ಬೋಳೂರಿನ ಅಮೃತ ವಿದ್ಯಾಲಯಂ ಶಾಲೆಯಲ್ಲಿ ನಡೆದ ನರ್ಸರಿ ವಿಭಾಗದ ‘ಅಮೃತ ಸಂಸ್ಕೃತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಶಾಲಾ ಕ್ಯಾಂಪಸ್ ನಿರ್ದೇಶಕ ಯತೀಶ್ ಬೈಕಂಪಾಡಿ ಮಾತನಾಡಿ, ಪುಟ್ಟ […]

ಕರಾವಳಿ ಶಾಲಾ ಕಾಲೇಜು

ಪ್ರಕೃತಿ ದೇವೋ ಭವ ಸಮಾಜ ನಿರ್ಮಾಣವಾಗಬೇಕು: ಅರಣ್ಯಾಧಿಕಾರಿ ಪಿ. ಶ್ರೀಧರ್

ಅಮೃತಾ ವಿದ್ಯಾಲಯಂ ನಲ್ಲಿ ಜಾಗತಿಕ ಸೀಡ್ ಬಾಲ್ ಅಭಿಯಾನ ಮಂಗಳೂರು: ಪ್ರಸಕ್ತ ಕಾಲಘಟ್ಟದಲ್ಲಿ ಭೌಗೋಳಿಕ ಪರಿಸರವನ್ನು ನಾಶ ಮಾಡಿ ನಮ್ಮ ಮೂಲಭೂತ ಸೌಕರ್ಯಗಳನ್ನು ಪೂರೈಕೆ ಮಾಡಲಾಗುತ್ತಿದ್ದು, ಇದರಿಂದಾಗಿ ಭೂಮಿಯಲ್ಲಿ ವ್ಯತ್ಯಾಸ ವಾದಾಗ ಎಲ್ಲಾ ಜೀವರಾಶಿಗಳು ನಾಶ ಆಗುತ್ತದೆ. ಪ್ರಪಂಚದಲ್ಲಿ ಪ್ರಕೃತಿ ದೇವೋ ಭವ ಸಮಾಜ ನಿರ್ಮಾಣವಾಗಬೇಕು ಎಂದು ಮಂಗಳೂರು ಉಪ ವಿಭಾಗದ ಅರಣ್ಯಗಳ ಸಹಾಯಕ ಸಂರಕ್ಷಣಾಧಿಕಾರಿ ಪಿ.ಶ್ರೀಧರ್ ಹೇಳಿದರು.ಮಂಗಳೂರಿನ ಅಮೃತಾ ವಿದ್ಯಾಲಯಂ ನಲ್ಲಿ ಕರ್ನಾಟಕ ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಸಿ೨೦ ಯ ಜಾಗತಿಕ ಸೀಡ್ ಬಾಲ್ […]

Uncategorised ಕರಾವಳಿ ಪ್ರಚಲಿತ ಶಾಲಾ ಕಾಲೇಜು

ಅಧ್ಯಾತ್ಮದ ಕಡೆಗೆ ಮನಸ್ಸು ಕೇಂದ್ರೀಕರಿಸಿ: ಸ್ವಾಮಿನಿ ಮಂಗಳಾಮೃತ ಪ್ರಾಣ

ಉಚ್ಚಿಲ ದಲ್ಲಿ ಗುರು ಪೂರ್ಣಿಮ ಆಚರಣೆ ಉಚ್ಚಿಲ: ನಮ್ಮೊಳಗಿನ ನಮ್ಮನ್ನು ಅರಿತುಕೊಳ್ಳಲು, ಲೌಕಿಕ ಸಮಸ್ಯೆಗಳನ್ನು ನಿವಾರಿಸಲು ಆಧ್ಯಾತ್ಮವು ಸಕಾರಾತ್ಮಕ ದಾರಿಯಾಗಿದ್ದು, ನಾವೆಲ್ಲರೂ ಆಧ್ಯಾತ್ಮದ ಕಡೆಗೆ ಮನಸ್ಸನ್ನು ಕೇಂದ್ರೀಕರಿಸಬೇಕು ಎಂದು ಮಂಗಳೂರಿನ ಮಾತಾ ಅಮೃತಾನಂದಮಯಿ ಮಠಾಧಿಪತಿ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಹೇಳಿದರು.ದ.ಕ, ಉಡುಪಿ ಮತ್ತು ಉ.ಕ ವ್ಯಾಪ್ತಿಯ ಮಾತಾ ಅಮೃತಾನಂದಮಯಿ ಸೇವಾ ಸಮಿತಿ ವತಿಯಿಂದ ಉಚ್ಚಿಲ ಮಹಾಲಕ್ಷ್ಮೀ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗುರು ಪೂರ್ಣಿಮಾ ಆಚರಣೆಯ ನೇತೃತ್ವ ವಹಿಸಿ ಅವರು ಆಶೀರ್ವಚನ ನೀಡಿದರು. ಸಾವಿರಾರು ಭಕ್ತರು ಭಾಗಿ:ಗ್ರಹಚಾರಾಧಿ ಸಂಕಷ್ಟ […]

ಕರಾವಳಿ ಪ್ರಚಲಿತ ಶಾಲಾ ಕಾಲೇಜು

ಹೆತ್ತವರ ಪೂಜೆ ಮಾಡಿದ ಮಕ್ಕಳು: ಮಂಗಳೂರಿನ ಶಾಲೆಯಲ್ಲಿ ಭಾರತದ ಸಂಸ್ಕೃತಿ ದರ್ಶನ

ಮಂಗಳೂರು: ಇಲ್ಲಿನ ಶಾಲೆಯೊಂದರಲ್ಲಿ ಶಾಲಾ ಮಕ್ಕಳು ತಮ್ಮ ಹೆತ್ತವರ ಪಾದ ತೊಳೆದು, ಹೂವು ಸಮರ್ಪಿಸಿ, ತಿಲಕ ಹಚ್ಚಿ, ಶಿರಸಾ ನಮಿಸಿ, ಆರತಿ ಬೆಳಗಿ ಹೆತ್ತವರ ಪೂಜೆ ಮಾಡಿ ಗುರು ಪೂರ್ಣಿಮೆಯನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ. ನಗರದ ಅಮೃತ ವಿದ್ಯಾಲಯಂ ಶಾಲೆಯಲ್ಲಿ ಗುರುಪೂರ್ಣಿಮೆ ಆಚರಣೆಯ ನಿಮಿತ್ತ ಮಾತಾ ಪಿತಾ ಗೌರವ ಸಮರ್ಪಣೆಯ ಸಂಸ್ಕೃತಿ ಪೂಜೆ ನೆರವೇರಿತು. ಈ ಸಂದರ್ಭ ಶಾಲಾ ಮಕ್ಕಳು ಭಾರತೀಯ ಸನಾತನ ಸಂಸ್ಕೃತಿಯಂತೆ ತಮ್ಮ ತಾಯಿ ತಂದೆಗೆ ವಿದ್ಯುಕ್ತವಾಗಿ ಪಾದ ಪೂಜೆ ಮಾಡಿ ಗೌರವ ಸಲ್ಲಿಸಿ ಆಶೀರ್ವಾದ […]

eMedia Kannada  @2025. All Rights Reserved.