• Home  
  • ಅಮೇರಿಕಾದಲ್ಲಿ ಅವಧಿಗೆ ಮುನ್ನವೇ ಹೆರಿಗೆ ಮಾಡಿಸುವಂತೆ ವೈದ್ಯರ ಬಳಿ ಭಾರತೀಯ ಪೋಷಕರು ದುಂಬಾಲು (Indian parents in America are asking doctors to deliver their babies prematurely)
- health - ರಾಜಕೀಯ

ಅಮೇರಿಕಾದಲ್ಲಿ ಅವಧಿಗೆ ಮುನ್ನವೇ ಹೆರಿಗೆ ಮಾಡಿಸುವಂತೆ ವೈದ್ಯರ ಬಳಿ ಭಾರತೀಯ ಪೋಷಕರು ದುಂಬಾಲು (Indian parents in America are asking doctors to deliver their babies prematurely)

Share: ಅಮೇರಿಕಾದಲ್ಲಿ ಅವಧಿಗೆ ಮುನ್ನವೇ ಹೆರಿಗೆ ಮಾಡಿಸುವಂತೆ ವೈದ್ಯರ ಬಳಿ ಭಾರತೀಯ ಪೋಷಕರು ದುಂಬಾಲು ಫೆ.19ರೊಳಗೆ ಹುಟ್ಟುವ ಮಗುವಿಗೆ ಜನ್ಮಸಿದ್ಧ ಪೌರತ್ವ : ಅಷ್ಟರೊಳಗೇ ಜನ್ಮ ನೀಡಲು ಭಾರತೀಯರ ಸರ್ಕಸ್  (Washington) ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷನಾಗುತ್ತಲೇ ಅಮೆರಿಕದಲ್ಲಿರುವ ಭಾರತೀಯರು ಆದಷ್ಟು ಬೇಗ ಮಕ್ಕಳನ್ನು ಹೆರಲು ಹವಣಿಸುತ್ತಿದ್ದಾರೆ. ಇದಕ್ಕೆ ಕಾರಣ, ಟ್ರಂಪ್‌ ‘ಜನಸಿದ್ದ ಪೌರತ್ವ ಹಕ್ಕುʼ ರದ್ದತಿ ನಿರ್ಧಾರ.   ಅಮೆರಿಕದಲ್ಲಿ ಜನಿಸುವ ವಿದೇಶಿ ಪ್ರಜೆಗಳ ಮಕ್ಕಳಿಗೆ ಸ್ವಾಭಾವಿಕವಾಗಿ ದೊರೆಯುತ್ತಿದ್ದ ಅಮೆರಿಕಾ ಪೌರತ್ವ ವನ್ನು ರದ್ದುಪಡಿಸುವ ಆದೇಶಕ್ಕೆ […]

ಅಮೇರಿಕಾದಲ್ಲಿ ಅವಧಿಗೆ ಮುನ್ನವೇ ಹೆರಿಗೆ ಮಾಡಿಸುವಂತೆ ವೈದ್ಯರ ಬಳಿ ಭಾರತೀಯ ಪೋಷಕರು ದುಂಬಾಲು

ಫೆ.19ರೊಳಗೆ ಹುಟ್ಟುವ ಮಗುವಿಗೆ ಜನ್ಮಸಿದ್ಧ ಪೌರತ್ವ : ಅಷ್ಟರೊಳಗೇ ಜನ್ಮ ನೀಡಲು ಭಾರತೀಯರ ಸರ್ಕಸ್

 (Washington) ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷನಾಗುತ್ತಲೇ ಅಮೆರಿಕದಲ್ಲಿರುವ ಭಾರತೀಯರು ಆದಷ್ಟು ಬೇಗ ಮಕ್ಕಳನ್ನು ಹೆರಲು ಹವಣಿಸುತ್ತಿದ್ದಾರೆ. ಇದಕ್ಕೆ ಕಾರಣ, ಟ್ರಂಪ್‌ ‘ಜನಸಿದ್ದ ಪೌರತ್ವ ಹಕ್ಕುʼ ರದ್ದತಿ ನಿರ್ಧಾರ.

  ಅಮೆರಿಕದಲ್ಲಿ ಜನಿಸುವ ವಿದೇಶಿ ಪ್ರಜೆಗಳ ಮಕ್ಕಳಿಗೆ ಸ್ವಾಭಾವಿಕವಾಗಿ ದೊರೆಯುತ್ತಿದ್ದ ಅಮೆರಿಕಾ ಪೌರತ್ವ ವನ್ನು ರದ್ದುಪಡಿಸುವ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದು,   ಇದು ಫೆ.20ರಿಂದ ಜಾರಿಗೆ ಬರಲಿದೆ.

  ಫೆ.19ಕ್ಕೂ (ಅಮೆರಿಕ ಕಾಲಮಾನ ಫೆ.19ರ ಮಧ್ಯರಾತ್ರಿ 12ರೊಳಗೆ ಮೊದಲೇ ಮಕ್ಕಳನ್ನು ಹೆತ್ತರೆ, ಅವರು ಅಮೆರಿಕದ ಪ್ರಜೆಯಾಗುತ್ತಾರೆ ಎಂಬ ಆಸೆಯೊಂದಿಗೆ ದಂಪತಿಗಳು ಸಿಸೇರಿಯನ್ ಮೂಲಕ ಅವಧಿಗೂ ಮೊದಲೇ ಮಗುವಿಗೆ ಜನ್ಮ ನೀಡಲು ಮುಂದಾಗಿದ್ದಾರೆ.  

ಮಕ್ಕಳ ಹೆರಲು ಆತುರವೇಕೆ?

 ಈಗಾಗಲೇ ಅಮೆರಿಕದಲ್ಲಿ ಭಾರತ ಮೂಲದ 54 ಲಕ್ಷ ಜನರಿದ್ದಾರೆ. ಅವರಲ್ಲಿ ಶೇ.34 ಜನ ಮಾತ್ರ ಅಮೆರಿಕ ನಾಗರಿಕರಾಗಿದ್ದಾರೆ. ಉಳಿದ ಶೇ.6ರ ಜನರು ಭಾರತೀಯ ನಾಗರಿಕರಾಗಿದ್ದು, ಅಮೆರಿಕ ಪೌರರಲ್ಲ. ಕೆಲಸದ ನಿಮಿತ್ತ ಅಮೆರಿಕದಲ್ಲಿದ್ದಾರೆ. ಫೆ.20ರ ನಂತರ ಇವರಿಗೆ ಮಕ್ಕಳಾದರೆ, ಆ ಮಕ್ಕಳು ಜನ್ಮಸಿದ್ದ ಅಮೆರಿಕ ಪೌರತ್ವದಿಂದ ವಂಚಿತರಾಗುವ ಭೀತಿ ಇದೆ.

ಅವಧಿಪೂರ್ವ ಸಿಸೇರಿಯನ್‌ ಹೆರಿಗೆ ನಡೆಸಿದರೆ, ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ವೈದ್ಯರ ಸಲಹೆಯನ್ನೂ ಧಿಕ್ಕರಿಸಿ ಅವಧಿ ಪೂರ್ವ ಹೆರಿಗೆ ಮಾಡಿಕೊಳ್ಳಲು ಭಾರತೀಯ ಸಹಿತ ಅನ್ಯ ದೇಶದ ದಂಪತಿಗಳು ಆತುರ ಪಡುತ್ತಿದ್ದಾರೆ.

 ಆ ಎಲ್ಲಾ ಕಾರಣದಿಂದ ಆತಂಕಿತ ಭಾರತೀಯರು ಅವಧಿಪೂರ್ವದಲ್ಲಿ ಸಿಸೇರಿಯನ್‌ ಹೆರಿಗೆಗೆ ಮುಗಿ ಬೀಳುತ್ತಿದ್ದಾರೆ ಎಂದು ಅಲ್ಲಿಯ ಪತ್ರಿಕೆ ವರದಿ ಮಾಡಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.