• Home  
  • ಅ. 23:  ಪಡುಬಿದ್ರಿ ದೇಗುಲ ಜೀರ್ಣೋದ್ಧಾರ ಕುರಿತು ಗ್ರಾಮ ಸಭೆ (Oct. 23 : Village meeting on renovation of Padubidri Mahalingeshwara Maha Ganapathi Temple)
- ಧಾರ್ಮಿಕ

ಅ. 23:  ಪಡುಬಿದ್ರಿ ದೇಗುಲ ಜೀರ್ಣೋದ್ಧಾರ ಕುರಿತು ಗ್ರಾಮ ಸಭೆ (Oct. 23 : Village meeting on renovation of Padubidri Mahalingeshwara Maha Ganapathi Temple)

Share: ಅ. 23:  ಪಡುಬಿದ್ರಿ ದೇಗುಲ ಜೀರ್ಣೋದ್ಧಾರ ಕುರಿತು ಗ್ರಾಮ ಸಭೆ PHOTO CREDIT : RAVI DIDITALS PADUBIDRI.  ಪಡುಬಿದ್ರಿ, ಅ. 21: ಇತಿಹಾಸ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ದಾರದ ಪ್ರಸ್ತಾವಿತ ಕಾಮಗಾರಿಗಳು ಮತ್ತು ಪೂರ್ವಭಾವಿ ಧಾರ್ಮಿಕ ವಿಧಿಗಳು, ಸಂಕೋಚ ಹಾಗೂ ವಿಶೇಷವಾಗಿ ಧನ ಸಂಗ್ರಹಣೆಯ ಕುರಿತು ಚರ್ಚಿಸಲು ಅ. 23 ರಂದು ಸಂಜೆ 5 ಗಂಟೆಗೆ ಗ್ರಾಮ ಸಮಿತಿಯ ವಿಶೇಷ ಸಭೆಯನ್ನು ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ […]

ಅ. 23:  ಪಡುಬಿದ್ರಿ ದೇಗುಲ ಜೀರ್ಣೋದ್ಧಾರ ಕುರಿತು ಗ್ರಾಮ ಸಭೆ

PHOTO CREDIT : RAVI DIDITALS PADUBIDRI.

 ಪಡುಬಿದ್ರಿ, ಅ. 21: ಇತಿಹಾಸ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ದಾರದ ಪ್ರಸ್ತಾವಿತ ಕಾಮಗಾರಿಗಳು ಮತ್ತು ಪೂರ್ವಭಾವಿ ಧಾರ್ಮಿಕ ವಿಧಿಗಳು, ಸಂಕೋಚ ಹಾಗೂ ವಿಶೇಷವಾಗಿ ಧನ ಸಂಗ್ರಹಣೆಯ ಕುರಿತು ಚರ್ಚಿಸಲು ಅ. 23 ರಂದು ಸಂಜೆ 5 ಗಂಟೆಗೆ ಗ್ರಾಮ ಸಮಿತಿಯ ವಿಶೇಷ ಸಭೆಯನ್ನು ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.  

ಈ ಸಭೆಯಲ್ಲಿ ಶ್ರೀ ದೇವಸ್ಥಾನದ ತಂತ್ರಿವರ್ಯರಾದ ವೇ. ಮೂ. ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯರವರು ಉಪಸ್ಥಿತರಿರುವರು.

 ಗ್ರಾಮದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಸಭೆಯಲ್ಲಿ ಭಾಗವಹಿಸಿ, ತಮ್ಮ ಅಮೂಲ್ಯ ಸಲಹೆಗಳನ್ನು ನೀಡುವಂತೆ ಶ್ರೀ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರ ರಾಜ್ ಅರಸು ಕಿನ್ಯಕ್ಕ ಬಲ್ಲಾಳರು ಹಾಗೂ ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ ಅವರು ವಿನಂತಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.