• Home  
  • ಆನ್ ಲೈನ್ ಟ್ರೇಡಿಂಗ್ ಮೋಸ: ಉಡುಪಿ ಜಿಲ್ಲಾ ಸೆನ್ ಠಾಣಾ ಪೊಲೀಸರಿಂದ ಇಬ್ಬರ ಬಂಧನ -13,95,000/- ನಗದು ಸ್ವಾಧೀನ (Onlile Trading Fraud : Udupi SEN Police arrest two persons and 13,95,000/- Cash)
- ಅಪರಾಧ

ಆನ್ ಲೈನ್ ಟ್ರೇಡಿಂಗ್ ಮೋಸ: ಉಡುಪಿ ಜಿಲ್ಲಾ ಸೆನ್ ಠಾಣಾ ಪೊಲೀಸರಿಂದ ಇಬ್ಬರ ಬಂಧನ -13,95,000/- ನಗದು ಸ್ವಾಧೀನ (Onlile Trading Fraud : Udupi SEN Police arrest two persons and 13,95,000/- Cash)

Share:  ಆನ್ ಲೈನ್ ಟ್ರೇಡಿಂಗ್ ಮೋಸ: ಉಡುಪಿ ಜಿಲ್ಲಾ ಸೆನ್ ಠಾಣಾ ಪೊಲೀಸರಿಂದ ಇಬ್ಬರ ಬಂಧನ -13,95,000/- ನಗದು ಸ್ವಾಧೀನ (Udupi) ಉಡುಪಿ: ಆನ್ ಲೈನ್ ಟ್ರೇಡಿಂಗ್ ಮೋಸದ ಜಾಲವೊಂದನ್ನು ಉಡುಪಿ ಸೆನ್‌ ಪೊಲೀಸರು ಬಯಲಿಗೆಳೆದಿದ್ದು, ಕ್ಷಿಪ್ರ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 13,95,000/- ನಗದು ಮತ್ತು 5 ಮೊಬೈಲ್‌ ಫೋನನ್ನು ವಶ ಪಡಿಸಿಕೊಂಡಿದ್ದಾರೆ.  ಘಟನೆಯ ವಿವರ: ದಿನಾಂಕ:29/07/2024 ರಂದು ಮೊಬೈಲ್‌ ನಂಬ್ರ+919232037584 ರಿಂದ ಯಾರೋ ಅಪರಿಚಿತರು ಕರೆಮಾಡಿ ಕಸ್ಟಮ್ಸ್‌ನಿಂದ ಕರೆಮಾಡುತ್ತಿರುವುದಾಗಿ ತಿಳಿಸಿ, ನಿಮ್ಮ ಆಧಾರ್‌ […]

 ಆನ್ ಲೈನ್ ಟ್ರೇಡಿಂಗ್ ಮೋಸ: ಉಡುಪಿ ಜಿಲ್ಲಾ ಸೆನ್ ಠಾಣಾ ಪೊಲೀಸರಿಂದ ಇಬ್ಬರ ಬಂಧನ -13,95,000/- ನಗದು ಸ್ವಾಧೀನ

(Udupi) ಉಡುಪಿ: ಆನ್ ಲೈನ್ ಟ್ರೇಡಿಂಗ್ ಮೋಸದ ಜಾಲವೊಂದನ್ನು ಉಡುಪಿ ಸೆನ್‌ ಪೊಲೀಸರು ಬಯಲಿಗೆಳೆದಿದ್ದು, ಕ್ಷಿಪ್ರ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 13,95,000/- ನಗದು ಮತ್ತು 5 ಮೊಬೈಲ್‌ ಫೋನನ್ನು ವಶ ಪಡಿಸಿಕೊಂಡಿದ್ದಾರೆ.

 ಘಟನೆಯ ವಿವರ: ದಿನಾಂಕ:29/07/2024 ರಂದು ಮೊಬೈಲ್‌ ನಂಬ್ರ+919232037584 ರಿಂದ ಯಾರೋ ಅಪರಿಚಿತರು ಕರೆಮಾಡಿ ಕಸ್ಟಮ್ಸ್‌ನಿಂದ ಕರೆಮಾಡುತ್ತಿರುವುದಾಗಿ ತಿಳಿಸಿ, ನಿಮ್ಮ ಆಧಾರ್‌ ಸಂಖ್ಯೆ ಬಳಸಿ ಬುಕ್‌ ಆಗಿರುವ FedEx ಕೋರಿಯರ್‌ನಲ್ಲಿ 5 ಪಾಸ್‌ಪೋರ್ಟ್‌, 5 ಎ.ಟಿ.ಎಮ್‌ ಕಾರ್ಡ್‌, 200 ಗ್ರಾಂ ಎಂ.ಡಿ.ಎಮ್.ಎ ಹಾಗೂ 5000 USD ಇದ್ದು, ಸದ್ರಿ ಕೋರಿಯರ್‌ ಪ್ರಸ್ತುತ ಮುಂಬಯಿ ಕಸ್ಟಮ್ಸ್‌ರವರ ವಶದಲ್ಲಿ ಇರುವುದಾಗಿ ತಿಳಿಸಿದ್ದಾರೆ.

   ಮಾಹಿತಿದಾರರು ಸದರಿ ಕೋರಿಯರ್‌ ತಾನು ಮಾಡಿಲ್ಲವಾಗಿ ತಿಳಿಸಿದಾಗ ಅಪರಿಚಿತ ವ್ಯಕ್ತಿ ಆತನ ಮೇಲಾಧಿಕಾರಿಯವರಿಗೆ ಹಾಟ್‌ಲೈನ್‌ ಮುಖೇನಾ ಸಂಪರ್ಕ ಕಲ್ಪಿಸಿಕೊಟ್ಟಿದ್ದು, ಸದ್ರಿ ಹಾಟ್‌ಲೈನ್‌ನಲ್ಲಿ ಪೊಲೀಸ್‌ ಅಧಿಕಾರಿ ಎಂದು ನಂಬಿಸಿ ಪಿರ್ಯಾದಿದಾರರಿಗೆ ನಿಮ್ಮ ಆಧಾರ್‌ ಕಾರ್ಡ್‌ನ ದುರ್ಬಳಕೆಯ ಬಗ್ಗೆ ದೂರನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿ, ನಮ್ಮ ಕೇಂದ್ರ ಕಚೇರಿಗೆ ಕರೆಯನ್ನು ಫಾರ್ವಡ್‌ ಮಾಡುವುದಾಗಿ ತಿಳಿಸಿ ನಂತರದಲ್ಲಿ ಕರೆ ಸ್ವೀಕರಿಸಿದ ವ್ಯಕ್ತಿ ನಿಮ್ಮ ಆಧಾರ್‌ ಕಾರ್ಡ್‌ ವಿವಿಧ ಬ್ಯಾಂಕ್‌ ಖಾತೆಗಳಿಗೆ ಲಿಂಕ್‌ ಆಗಿದ್ದು ಹಾಗೂ ಭಯೋತ್ಪಾದಕರು ಸಿಮ್‌ ಖರೀದಿಸಲು ಬಳಸಿರುವುದಾಗಿ ತಿಳಿಸಿರುತ್ತಾರೆ. ಈ ದೂರಿಗೆ ಸಂಬಂಧಿಸಿ ನಿಮ್ಮನ್ನು ವರ್ಚುವಲ್‌ ಆರೆಸ್ಟ್‌ ಮಾಡುವುದಾಗಿ ತಿಳಿಸಿದ್ದು Skype App ಮೂಲಕ ವಿಡಿಯೋ ಮಾನಿಟರಿಂಗ್‌ ಮಾಡುವುದಾಗಿ ತಿಳಿಸಿದ್ದು, ಅದರಂತೆ ಮಾಹಿತಿದಾರರನ್ನು ದಿನಾಂಕ:29/07/2024 ರಿಂದ ದಿನಾಂಕ:09/08/2024ರ ತನಕ ಅವರ ಮನೆಯ ರೂಮ್‌ ಒಂದರಲ್ಲಿ ಇರುವಂತೆ ಹಾಗೂ ಬೇರೆ ಯಾರೊಂದಿಗೂ ಸಂಪರ್ಕಿಸದಂತೆ ಸೂಚಿಸಿರುತ್ತಾರೆ.

  ಸದ್ರಿ ಪ್ರಕರಣವನ್ನು ಸರಿಪಡಿಸಲು ಅಪರಿಚಿತರು ಸೂಚಿಸಿದ ವಿವಿಧ ಬ್ಯಾಂಕ್‌ ಖಾತೆಗಳಿಗೆ ಹಣ ಪಾವತಿಸುವಂತೆ ತಿಳಿಸಿದ್ದು, ಅದರಂತೆ ಪಿರ್ಯಾದಿದಾರರು ತನ್ನ ಹೆಚ್.ಡಿ.ಎಫ್‌.ಸಿ ಬ್ಯಾಂಕಿನ ಉಳಿತಾಯ ಖಾತೆಯಿಂದ ದಿನಾಂಕ:06/08/2024 ರಿಂದ ದಿನಾಂಕ:09/08/2024ರ ತನಕ ಹಂತ ಹಂತವಾಗಿ ಒಟ್ಟು ರೂಪಾಯಿ 1,33,81,000/- ಹಣವನ್ನು ವರ್ಗಾಯಿಸಿದ್ದಾರೆ.

ಈ ಬಗ್ಗೆ ಅರುಣ್‌ ಕುಮಾರ್‌ ಗೋವಿಂದ ಕರ್ನವರ್‌ ರವರು ನೀಡಿದ ದೂರಿನಂತೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿದೆ.

 ಈ ಬಗ್ಗೆ ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್‌ರವರ ನೇತೃತ್ವದಲ್ಲಿ ಸೆನ್ ಪೊಲೀಸ್ ಠಾಣಾ ಪಿ.ಎಸ್.ಐ, ಅಶೋಕ್ ಸಿಬ್ಬಂದಿಗಳಾದ ಪ್ರವೀಣ ಶೆಟ್ಟಿಗಾರ್, ರಾಜೇಶ್, ಅರುಣ ಕುಮಾರ್, ಯತೀನ್ ಕುಮಾರ್, ರಾಘುವೇಂದ್ರ ಕಾರ್ಕಡ, ದಿಕ್ಷೀತ್, ಪ್ರಶಾಂತ್ , ಮುತ್ತೆಪ್ಪ ಆಡೀನ್, ಮಾಯಪ್ಪ ಗಡದೆ, ಪರಶುರಾಮ ಮತ್ತು ಸುದೀಫ್ ರವರನ್ನೊಳಗೊಂಡ ವಿಶೇಷ ತಂಡ ಆರೋಪಿಗಳಾದ ನವಾದಿಯಾ ಮುಖೇಶ್‌ ಭಾಯಿ ಗಣೇಶ್‌ಭಾಯಿ(44), ಸರ್ದಾರ್‌ ಪಟೇಲ್‌ ನಗರ ಸೊಸೈಟಿ, ದಭೋಲಿ ರಸ್ತೆ, ಸೂರತ್‌ ಸಿಟಿ, ಸೂರತ್‌ ಜಿಲ್ಲಾ, ಗುಜರಾತ್‌ ರಾಜ್ಯ ಮತ್ತು ಧರಮ್‌ಜೀತ್‌ ಕಮಲೇಶ್‌ ಚೌಹಾನ್‌, 28 ವರ್ಷ, ಹನುಮಾನ್‌ ಜಿ ದೇವಸ್ಥಾನದ ಎದುರುಗಡೆ, ಆಕಾಶವಾಣಿ ಚೌಕ್‌, ಯೂನಿವರ್ಸಿಟಿ ರಸ್ತೆ,  ರಾಜ್‌ಕೋಟ್‌ ಜಿಲ್ಲಾ, ಗುಜರಾತ್‌ನಲ್ಲಿ ದಸ್ತಗಿರಿ ಮಾಡಿ ಅವರಿಂದ 5 ಮೊಬೈಲ್ ಪೋನ್ ಗಳನ್ನು ಹಾಗೂ  ರೂ, 13,95,000/- ನಗದನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.