• Home  
  • ಇಂದು ಕುಮಾರಿ ಅದಿತಿ ಜಿ. ನಾಯಕ್ ರವರಿಂದ ನೃತ್ಯಾರ್ಪಣ (Today Nruthyarpana performance by Kumari Aditi G Nayak)
- ಪ್ರಚಲಿತ - ಮನೋರಂಜನೆ

ಇಂದು ಕುಮಾರಿ ಅದಿತಿ ಜಿ. ನಾಯಕ್ ರವರಿಂದ ನೃತ್ಯಾರ್ಪಣ (Today Nruthyarpana performance by Kumari Aditi G Nayak)

Share: ಇಂದು ಕುಮಾರಿ ಅದಿತಿ ಜಿ. ನಾಯಕ್ ರವರಿಂದ ನೃತ್ಯಾರ್ಪಣ  ಉಡುಪಿಯ ಐವೈಸಿ ಯಕ್ಷಗಾನ ಕಲಾರಂಗ ಸಭಾಂಗಣದಲ್ಲಿ ಕಾರ್ಯಕ್ರಮ  (Udupi) ಉಡುಪಿ: ರಾಧಾಕೃಷ್ಣ ನೃತ್ಯನಿಕೇತನ (ರಿ.) ಉಡುಪಿ ಪ್ರಸ್ತುತ ಪಡಿಸುವ ನೃತ್ಯಾರ್ಪಣ ಭರತನಾಟ್ಯ ಕಾರ್ಯಕ್ರಮದಲ್ಲಿ ಇಂದು ಸಂಜೆ (28-08-2025 ಗುರುವಾರ) 5.15ಕ್ಕೆ   ಉಡುಪಿಯ ಐವೈಸಿ ಯಕ್ಷಗಾನ ಕಲಾ ರಂಗ ಸಭಾಂಗಣದಲ್ಲಿ ಕುಮಾರಿ ಅದಿತಿ ಜಿ. ನಾಯಕ್ ನೃತ್ಯ ಪ್ರದರ್ಶನ ನೀಡಲಿದ್ದಾರೆ.  ಅವರು ವಿದುಷಿ ಶ್ರೀಮತಿ ವೀಣಾ ಎಂ. ಸಾಮಗ ರ ಶಿಷ್ಯೆ.   ಕಾರ್ಯಕ್ರಮದ ಉದ್ಘಾಟಕರಾಗಿ ಪತ್ರಕರ್ತ ಹಾಗೂ […]

 (Udupi) ಉಡುಪಿ: ರಾಧಾಕೃಷ್ಣ ನೃತ್ಯನಿಕೇತನ (ರಿ.) ಉಡುಪಿ ಪ್ರಸ್ತುತ ಪಡಿಸುವ ನೃತ್ಯಾರ್ಪಣ ಭರತನಾಟ್ಯ ಕಾರ್ಯಕ್ರಮದಲ್ಲಿ ಇಂದು ಸಂಜೆ (28-08-2025 ಗುರುವಾರ) 5.15ಕ್ಕೆ   ಉಡುಪಿಯ ಐವೈಸಿ ಯಕ್ಷಗಾನ ಕಲಾ ರಂಗ ಸಭಾಂಗಣದಲ್ಲಿ ಕುಮಾರಿ ಅದಿತಿ ಜಿ. ನಾಯಕ್ ನೃತ್ಯ ಪ್ರದರ್ಶನ ನೀಡಲಿದ್ದಾರೆ.  ಅವರು ವಿದುಷಿ ಶ್ರೀಮತಿ ವೀಣಾ ಎಂ. ಸಾಮಗ ರ ಶಿಷ್ಯೆ.

  ಕಾರ್ಯಕ್ರಮದ ಉದ್ಘಾಟಕರಾಗಿ ಪತ್ರಕರ್ತ ಹಾಗೂ ಉಡುಪಿ ಜಿಲ್ಲೆಯ ಸೌಟ್ ಆಯುಕ್ತರಾದ ಜನಾರ್ದನ್ ಕೊಡವೂರು, ಅತಿಥಿಗಳಾಗಿ ಸೌರಭ ಕಲಾ ಪರಿಷತ್ (ರಿ.) ಮಂಗಳೂರು  ನಿರ್ದೇಶಕಿ ಡಾ.  ಶ್ರೀವಿದ್ಯಾ ಆಗಮಿಸಲಿದ್ದಾರೆ  ಎಂದು ನೃತ್ಯ ನಿರ್ದೇಶಕಿ ಶ್ರೀಮತಿ ವೀಣಾ ಎಂ. ಸಾಮಗ ಹಾಗೂ ಆಯೋಜಕರಾದ ಎಚ್. ಗಣೇಶ್ ನಾಯಕ್ ಮತ್ತು  ಲಕ್ಷ್ಮೀ ಜಿ. ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಕುಮಾರಿ ಅದಿತಿ ಜಿ. ನಾಯಕ್ ರವರ ನೃತ್ಯಾರ್ಪಣದ ಹಿಮ್ಮೇಳದಲ್ಲಿ ನಟುವಾಂಗ, ಹಾಡುಗಾರಿಕೆ, ನೃತ್ಯ ನಿರ್ದೇಶನದಲ್ಲಿ ವಿದುಷಿ ಶ್ರೀಮತಿ ವೀಣಾ ಎಂ. ಸಾಮಗ, ಮೃದಂಗ ವಿದ್ವಾನ್ ಮನೋಹರ್ ರಾವ್ ಮಂಗಳೂರು, ವಯೋಲಿನ್ ವಿದ್ವಾನ್ ಶ್ರೀಧರ ಆಚಾರ್ಯ ಉಡುಪಿ, ಕೊಳಲು : ಡಾ. ಬಾಲಕೃಷ್ಣ ಮಣಿಪಾಲ, ವರ್ಣಾಲಂಕಾರ ರಮೇಶ್,  ಛಾಯಾ ಗ್ರಹಣ – ವಿಡಿಯೋ ಅನಿರುದ್ ಪೈ ಮಣಿಪಾಲ ಸಹಕರಿಸಲಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.