• Home  
  • ಇನ್ನಂಜೆಯ ಸೋದೆ ಶಿಕ್ಷಣ ಸಮೂಹ ಸಂಸ್ಥೆಗೆ ಎರಡು ಬಸ್ಸುಗಳ ಕೊಡುಗೆ (Donation of two buses to Sode Education Group of Innanje)
- help - ಶಾಲಾ ಕಾಲೇಜು

ಇನ್ನಂಜೆಯ ಸೋದೆ ಶಿಕ್ಷಣ ಸಮೂಹ ಸಂಸ್ಥೆಗೆ ಎರಡು ಬಸ್ಸುಗಳ ಕೊಡುಗೆ (Donation of two buses to Sode Education Group of Innanje)

Share: ಇನ್ನಂಜೆಯ ಸೋದೆ ಶಿಕ್ಷಣ ಸಮೂಹ ಸಂಸ್ಥೆಗೆ ಎರಡು ಬಸ್ಸುಗಳ ಕೊಡುಗೆ  ಲೀಪ್ ಫ್ರಾಗ್ ಇಂಜಿನಿಯರಿಂಗ್ ಸಂಸ್ಥೆಯ  ಸಿಎಸ್ಆರ್ ನಿಧಿಯಿಂದ ಕೊಡುಗೆ (Shirva) ಶಿರ್ವ : ಶ್ರೀ ಸೋದೆ ವಾದಿರಾಜ ಮಠದಿಂದ ಪ್ರವರ್ತಿತವಾದ ಸೋದೆ ಸಮೂಹ ಶಿಕ್ಷಣ ಸಂಸ್ಥೆಗೆ  ಬೆಂಗಳೂರಿನ ಉದ್ಯಮ ಸಂಸ್ಥೆಯಾದ “ಲೀಪ್ ಫ್ರಾಗ್ ಇಂಜಿನಿಯರಿಂಗ್ ಸರ್ವಿಸಸ್ ಲಿಮಿಟೆಡ್” ಸಂಸ್ಥೆಯ  ಸಿಎಸ್ಆರ್ ನಿಧಿಯಿಂದ ನೀಡಲ್ಪಟ್ಟ 48ಲಕ್ಷ ವೆಚ್ಚದ ಎರಡು ನೂತನ ಬಸ್ಸುಗಳನ್ನು ಸೋಮವಾರ ವಿದ್ಯಾಸಂಸ್ಥೆಯ ಆವರಣದಲ್ಲಿ ಹಸ್ತಾಂತರಿಸಿದರು.   ಲೀಪ್ ಫ್ರಾಗ್ ಇಂಜಿನಿಯರಿಂಗ್ ಸರ್ವಿಸಸ್ ಲಿಮಿಟೆಡ್ […]

(Shirva) ಶಿರ್ವ : ಶ್ರೀ ಸೋದೆ ವಾದಿರಾಜ ಮಠದಿಂದ ಪ್ರವರ್ತಿತವಾದ ಸೋದೆ ಸಮೂಹ ಶಿಕ್ಷಣ ಸಂಸ್ಥೆಗೆ  ಬೆಂಗಳೂರಿನ ಉದ್ಯಮ ಸಂಸ್ಥೆಯಾದ “ಲೀಪ್ ಫ್ರಾಗ್ ಇಂಜಿನಿಯರಿಂಗ್ ಸರ್ವಿಸಸ್ ಲಿಮಿಟೆಡ್” ಸಂಸ್ಥೆಯ  ಸಿಎಸ್ಆರ್ ನಿಧಿಯಿಂದ ನೀಡಲ್ಪಟ್ಟ 48ಲಕ್ಷ ವೆಚ್ಚದ ಎರಡು ನೂತನ ಬಸ್ಸುಗಳನ್ನು ಸೋಮವಾರ ವಿದ್ಯಾಸಂಸ್ಥೆಯ ಆವರಣದಲ್ಲಿ ಹಸ್ತಾಂತರಿಸಿದರು.

  ಲೀಪ್ ಫ್ರಾಗ್ ಇಂಜಿನಿಯರಿಂಗ್ ಸರ್ವಿಸಸ್ ಲಿಮಿಟೆಡ್ ಸಂಸ್ಥೆಯ ಐವರು ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಅದರ ಮುಖ್ಯಸ್ಥರಾದ ಪ್ರಭಾವ್ ಎನ್ ರಾವ್ ಹಾಗೂ ಅವರ ಧರ್ಮಪತ್ನಿ ಪ್ರಿಯಾ ಶೈಲಾ ಪಿ ರಾವ್ ರವರು ಬಸ್ಸಿನ ಕೀಲಿಕೈಗಳನ್ನು ವಿಷ್ಣುಮೂರ್ತಿ ಹಯವದನ ಸ್ವಾಮಿ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷರಾದ  ಶ್ರೀನಿವಾಸ ತಂತ್ರಿಗಳು ಮತ್ತು ಕಾರ್ಯದರ್ಶಿಗಳಾದ ರತ್ನಕುಮಾರ್ ರವರಿಗೆ ಹಸ್ತಾಂತರಿಸಿದರು.

 ಲೀಪ್ ಫ್ರಾಗ್ ಸಂಸ್ಥೆಯನ್ನು ಶ್ಲಾಘಿಸಿದ ಶ್ರೀ ಸೋದೆ ವಾದಿರಾಜ ಮಠದ ಶ್ರೀಪಾದರು, ಈ ಬಸ್ಸಿನ ಸಂಪೂರ್ಣ ಸದುಪಯೋಗ ಪಡೆದುಕೊಳ್ಳುವಂತೆ ಶಾಲಾ ಮುಖ್ಯಸ್ಥರಿಗೆ ಸೂಚಿಸಿದರು. ಹಾಗೂ ಲೀಪ್ ಫ್ರಾಗ್ ಸಂಸ್ಥೆಯ ಮುಖ್ಯಸ್ಥರ ಈ ಕೊಡುಗೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

 ಈ ಸಂದರ್ಭದಲ್ಲಿ ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಡಾ. ರಾಧಾಕೃಷ್ಣ ಎಸ್ ಐತಾಳ್, ಶ್ರೀ ಮಧ್ವ ವಾದಿರಾಜ ತಾಂತ್ರಿಕ ಕಾಲೇಜು ಪ್ರಾಂಶುಪಾಲ ಪ್ರೊ. ಡಾ. ತಿರುಮಲೇಶ್ವರ ಭಟ್‌, ಆಡಳಿತ ಮಂಡಲಿ ಸದಸ್ಯ ಹರೀಶ್‌ ಬೆಳ್ಮಣ್, ಎಸ್ ವಿ ಹೆಚ್ ಪಿಯು ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ಪ್ರಭು, ಪ್ರೌಢಶಾಲೆ, ಪ್ರಾಥಮಿಕ ಮತ್ತು ನರ್ಸರಿ ಶಾಲೆ ಇನ್ನಂಜೆ ವಿದ್ಯಾಸಂಸ್ಥೆಗಳ ಮುಖ್ಯೋಪಾಧ್ಯಾಯರು ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.