• Home  
  • ಶಿರ್ವ ಆರೋಗ್ಯ ಮಾತಾ ದೇವಾಲಯದಲ್ಲಿ ಸಂಭ್ರಮದ ತೆನೆ ಹಬ್ಬ ಆಚರಣೆ (Festive Tene Festival celebrated at Shirva Arogya Mata Temple)
- ಧಾರ್ಮಿಕ

ಶಿರ್ವ ಆರೋಗ್ಯ ಮಾತಾ ದೇವಾಲಯದಲ್ಲಿ ಸಂಭ್ರಮದ ತೆನೆ ಹಬ್ಬ ಆಚರಣೆ (Festive Tene Festival celebrated at Shirva Arogya Mata Temple)

Share: ಶಿರ್ವ ಆರೋಗ್ಯ ಮಾತಾ ದೇವಾಲಯದಲ್ಲಿ ಸಂಭ್ರಮದ ತೆನೆ ಹಬ್ಬ ಆಚರಣೆ ಧರ್ಮ ಧರ್ಮಗುರು ರೆ. ಫಾ. ಡಾ. ಲೆನ್ಸಿ ಡಿಸೋಜಾ ಅವರ ನೇತೃತ್ವದಲ್ಲಿ ತೆನೆ ಹಬ್ಬ  (Shirva) ಶಿರ್ವ: ಉಡುಪಿ ಕೇಥೋಲಿಕ್ ಧರ್ಮಪ್ರಾಂತ್ಯದ ಶಿರ್ವ ವಲಯದ ಪ್ರಮುಖ ಚರ್ಚ್ ಗಳಲ್ಲೊಂದಾದ ಶಿರ್ವ ಆರೋಗ್ಯ ಮಾತಾ ದೇವಾಲಯದಲ್ಲಿ ಧರ್ಮಧರ್ಮಗುರುಗಳಾದ ರೆ. ಫಾ. ಡಾ. ಲೆನ್ಸಿ ಡಿಸೋಜಾ ಅವರ ನೇತೃತ್ವದಲ್ಲಿ ತೆನೆ ಹಬ್ಬ ಸೋಮವಾರ ನೆರವೇರಿತು   ಶಿರ್ವ ಸಂತ ಮೇರಿ ಪ್ರೌಢ ಶಾಲೆಯ ಹಿಲಾರಿ ರಂಗ ಮಂಟಪದಲ್ಲಿ ತೆನೆಯಿರಿಸಿ […]

ಧರ್ಮ ಧರ್ಮಗುರು ರೆ. ಫಾ. ಡಾ. ಲೆನ್ಸಿ ಡಿಸೋಜಾ ಅವರ ನೇತೃತ್ವದಲ್ಲಿ ತೆನೆ ಹಬ್ಬ

 (Shirva) ಶಿರ್ವ: ಉಡುಪಿ ಕೇಥೋಲಿಕ್ ಧರ್ಮಪ್ರಾಂತ್ಯದ ಶಿರ್ವ ವಲಯದ ಪ್ರಮುಖ ಚರ್ಚ್ ಗಳಲ್ಲೊಂದಾದ ಶಿರ್ವ ಆರೋಗ್ಯ ಮಾತಾ ದೇವಾಲಯದಲ್ಲಿ ಧರ್ಮಧರ್ಮಗುರುಗಳಾದ ರೆ. ಫಾ. ಡಾ. ಲೆನ್ಸಿ ಡಿಸೋಜಾ ಅವರ ನೇತೃತ್ವದಲ್ಲಿ ತೆನೆ ಹಬ್ಬ ಸೋಮವಾರ ನೆರವೇರಿತು

  ಶಿರ್ವ ಸಂತ ಮೇರಿ ಪ್ರೌಢ ಶಾಲೆಯ ಹಿಲಾರಿ ರಂಗ ಮಂಟಪದಲ್ಲಿ ತೆನೆಯಿರಿಸಿ ಮಾತೆ ಕನ್ಯಾ ಮೇರಿಯ ಮೂರ್ತಿಗೆ ರೆ. ಫಾ. ರೋಷನ್ ಡಿಸೋಜಾ ಪ್ರಾರ್ಥನಾ ವಿಧಿ ನೆರ ವೇರಿಸಿ ಭಕ್ತಾಧಿಗಳು ಮೂರ್ತಿಗೆ ಪುಷ್ಪಾರ್ಚನೆ ನಡೆಸಿದರು.

 ಪ್ರಧಾನ ಧರ್ಮಗುರು ಫಾ ಡಾ| ಡಿಸೋಜಾ, ಸಹಾಯಕ ಧರ್ಮಗುರುಗಳಾದ ರೆ. ಫಾ. ರೋಲ್ವಿನ್ ಅರಾನ್ಹಾ, ರೆ. ಫಾ. ಅನಿಲ್ ರೊಡ್ರಿಗಸ್ ಹಾಗೂ ರೆ. ಫಾ. ವಿಜಯ್ ಕಬ್ರಾಲ್ ನೇತೃತ್ವದಲ್ಲಿ ಮಾತೆ ಕನ್ಯಾ ಮೇರಿಯ ಮೂರ್ತಿ ಮತ್ತು ತೆನೆಯನ್ನು ಮೆರವಣಿಗೆಯೊಂದಿಗೆ ಚರ್ಚ್‌ನವರೆಗೆ ಕೊಂಡೊಯ್ಯಲಾಯಿತು.

 ಭಕ್ತರ ಉಪಸ್ಥಿತಿಯಲ್ಲಿ ಸಹಾಯಕ ಧರ್ಮಗುರು ರೆ. ಫಾ.  ರೋಲ್ವಿನ್ ಅರಾನ್ಹಾ ಬಲಿ ಪೂಜೆ ನೆರವೇರಿಸಿ, ಪ್ರಧಾನ ಗುರುಗಳು ಭಕ್ತಾಧಿಗಳಿಗೆ ತೆನೆ ವಿತರಿಸಿದರು.

  ಈ ಸಂದರ್ಭ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ಅರಾನ್ಹಾ, ಕಾರ್ಯ ದರ್ಶಿ ಫ್ಲೆವಿಯಾ ಡಿಸೋಜಾ, ಚರ್ಚ್‌ನ ಪಾಲನಾ ಮಂಡಳಿ ಮತ್ತು ಆರ್ಥಿಕ ಸಮಿತಿಯ ಸದಸ್ಯರು, ನೇಟಿವಿಟಿ ಕಾನ್ವೆಂಟ್‌ನ ಧರ್ಮ ಭಗಿನಿಯರು, ವಿವಿಧ ವಾರ್ಡ್‌ಗಳ ಗುರಿಕಾರರು, ನೂರಾರು ಸಂಖ್ಯೆಯ ಭಕ್ತಾಧಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.