ಶ್ರೀ ಭಂಡಾರಕೇರಿ ಮಠದ 18ನೇ ಯತಿಗಳ ಬೃಂದಾವನ ಜೀರ್ಣೋದ್ಧಾರ ಕೆಲಸ ಪ್ರಗತಿಯಲ್ಲಿ
ಶ್ರೀ ಭೀಮನ ಕಟ್ಟೆ ಮಠಾಧೀಶರಿಂದ ನೂತನ ಬೃಂದಾವನ ನಿರ್ಮಾಣಕ್ಕೆ ಚಾಲನೆ
(Udupi) ಉಡುಪಿ: ಉಡುಪಿ ಶ್ರೀ ಭಂಡಾರಕೇರಿ ಮಠದ 18ನೇ ಯತಿಗಳಾದ ಶ್ರೀ ರಘುಭೂಷಣ ತೀರ್ಥ ಶ್ರೀಪಾದರ ಬೃಂದಾವನ ಜೀರ್ಣೋದ್ಧಾರ ಪ್ರಕ್ರಿಯೆಗೆ ಚಾಲನೆ ದೊರಕಿದೆ.
ಶ್ರೀ ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು ಬೃಂದಾವನ ದರ್ಶನ ಮಾಡಿದ್ದಾರೆ.
ಕೋಟೇಶ್ವರ ಕ್ಷೇತ್ರದ ಕೋಟಿ ತೀರ್ಥದ ದಂಡೆಯಲ್ಲಿದ್ದ ಈ ಬೃಂದಾವನ ಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಶ್ರೀ ಭೀಮನ ಕಟ್ಟೆ ಮಠಾಧೀಶ ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದರು ಚಾತುರ್ಮಾಸ್ಯ ಅವಧಿಯಲ್ಲಿ ಬೃಂದಾವನ ಪರಿಸರವನ್ನು ಸ್ವಚ್ಛ ಗೊಳಿಸಿ ನೂತನ ಬೃಂದಾವನ ನಿರ್ಮಾಣಕ್ಕೆ ಚಾಲನೆ ನೀಡಿದ್ದರು.

