ಇನ್ನಾ : ಉಚಿತ ನೇತ್ರಾ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ
ಇನ್ನಾ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ನಡೆದ ಶಿಬಿರ
(Innna) ಇನ್ನಾ : ಕಾಪು ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ, ಮುದರಂಗಡಿ ವಲಯ ಇನ್ನಾ, ಇನ್ನಾ ಶಕ್ತಿ ಸಂಜೀವಿನಿ ಒಕ್ಕೂಟ, ಉಡುಪಿ ಜಿಲ್ಲಾ ಅಂದತ್ವ ನಿವಾರಣಾ ವಿಭಾಗ, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಇನ್ನಾ ಪ್ರಾಥಮಿಕ ಅರೋಗ್ಯ ಕೇಂದ್ರ, ಇನ್ನಾ ಗ್ರಾಮ ಪಂಚಾಯತ್, ಪಾರ್ವತಿ ಮಹಾಬಲ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆ ಶಿರೂರು ಮುದ್ದುಮನೆ ಇವುಗಳ ಸಂಯುಕ್ತ ಆಶ್ರಯದಲ್ಲಿಉಚಿತ ನೇತ್ರಾ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವು ಇನ್ನಾ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ನೆರವೇರಿತು.
ಈ ಸಂದರ್ಭ ಇನ್ನಾ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಸದಾಶಿವ, ವೈದಾಧಿಕಾರಿ ಡಾ. ಅರ್ಪಿತಾ, ಕಣ್ಣಿನ ವೈದ್ಯ ಡಾ. ಮನೋಜ್ ಭಟ್, ಗ್ರಾಮ ಪಂಚಾಯತ್ ಮಾಜಿ ಸದಸ್ಯರುಗಳಾದ ಶಂಕರ್ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಮೇಲ್ವಿಚಾರಕಕಿ ಶ್ರೀಮತಿ ಪ್ರೇಮಾ, ಒಕ್ಕೂಟದ ಅಧ್ಯಕ್ಷ ಗೋವಿಂದ, ಸೇವಾ ಪ್ರತಿನಿಧಿ ಅಮಿತ, ಶುಭಾಶಿನಿ ಮತ್ತಿತರರು ಉಪಸ್ಥಿತರಿದ್ದರು.

