ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ವೀರಭದ್ರಯ್ಯ ಭೇಟಿ
ಉಡುಪಿ ಕರಾವಳಿಯ ಶಾಖೆಗೆ ಭೇಟಿ ಐಎಂಎ ಶಾಖೆಗೆ ಭೇಟಿ
(Udupi) ಉಡುಪಿ: ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಡಾ. ವೀರಭದ್ರಯ್ಯ ಅವರು ಉಡುಪಿ ಕರಾವಳಿ ಶಾಖೆಗೆ ಭೇಟಿ ನೀಡಿದರು.
ಅವರೊಂದಿಗೆ ರಾಜ್ಯ ಉಪಾಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್, ವಿಭಾಗೀಯ ಸಂಯೋಜಕ ಡಾ. ಜಿ. ಕೆ. ಭಟ್, ಸಹಾಯಕ ಕಾರ್ಯದರ್ಶಿ ಡಾ. ಮಹೇಶ್, ಉಡುಪಿ ಜಿಲ್ಲೆಯ ಸಂಯೋಜಕ ಡಾ. ಉಮೇಶ್ ಪುತ್ರನ್ ಮತ್ತು ಉಡುಪಿ ಕರಾವಳಿ ಶಾಖೆಯ ಉಪಾಧ್ಯಕ್ಷ ಮತ್ತು ಲೇಡೀಸ್ ವಿಂಗ್ ಅಧ್ಯಕ್ಷೆ ಡಾ. ವಿಜಯ.ವೈ. ಬಿ ಉಪಸ್ಥಿತರಿದ್ದರು.
ಡಾ. ವೀರಭದ್ರಯ್ಯ ಐಎಂಎ ಭವನದಲ್ಲಿ ವೈದ್ಯರ ಬೇಡಿಕೆ, ಸರಕಾರದ ಸ್ಪಂದನೆ, ಹೊಸ ವೈದ್ಯರು ಭಾರತೀಯ ವೈದ್ಯಕೀಯ ಸಂಘದ ಸದಸ್ಯತ್ವವನ್ನು ಹೆಚ್ಚಿನ ರೀತಿಯಲ್ಲಿ ಸೇರಬೇಕಾಗಿ ಮನವಿ ಮಾಡಿದರು.
ಡಾ. ಅಣ್ಣಯ್ಯ ಕುಲಾಲ್ ರವರು ಸಂಘಕ್ಕಾಗಿ ಶ್ರಮಿಸುವ ಸದಸ್ಯರನ್ನು ಶ್ಲಾಘಿಸಿದರು.
ಡಾ. ಕೆ. ಭಟ್ ಅವರು ಶಾಖೆಯಲ್ಲಿ ಚಟುವಟಿಕೆಗಳನ್ನು ಮಾಡಿ, ವೈದ್ಯರ ಒಳಿತಿಗಾಗಿ ಶ್ರಮಿಸುವಂತೆ ಹೇಳಿದರು.
ಉಡುಪಿ ಶಾಖೆಯ ಅಧ್ಯಕ್ಷರಾದ ಡಾ. ಅಶೋಕ್ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಮಾನಸ್.ಇ. ಆರ್ ನಿರೂಪಿಸಿದರು. ಕೋಶಾಧಿಕಾರಿ ಡಾ. ಸನತ್ ರಾವ್ ವಂದಿಸಿದರು.

