• Home  
  • ಉಚ್ಚಿಲದಲ್ಲಿ ಅಪರಿಚಿತ ವಾಹನ ಡಿಕ್ಕಿ: ಸವಾರ ಸ್ಥಳದಲ್ಲಿಯೇ ಸಾವು (Unknown vehicle collides with vehicle in Uchila: Rider dies on the spot)
- ಅಪಘಾತ

ಉಚ್ಚಿಲದಲ್ಲಿ ಅಪರಿಚಿತ ವಾಹನ ಡಿಕ್ಕಿ: ಸವಾರ ಸ್ಥಳದಲ್ಲಿಯೇ ಸಾವು (Unknown vehicle collides with vehicle in Uchila: Rider dies on the spot)

Share: ಉಚ್ಚಿಲ ಅಪರಿಚಿತ ವಾಹನ ಡಿಕ್ಕಿ: ಸವಾರ ಸ್ಥಳದಲ್ಲಿಯೇ ಸಾವು ಮೃತ ಯುವಕನನ್ನು ಪುತ್ತೂರು ಮೂಲದ ರಮೇಶ್‌ ಹೆಗ್ಡೆ (58) ಎಂದು ಗುರುತಿಸಲಾಗಿದೆ (Uchila) ಉಚ್ಚಿಲ: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಮಂಗಳವಾರ ಬೆಳಗ್ಗೆ ಉಚ್ಚಿಲ ರಾಹೆ 66 ರ ಪೇಟೆ ಸಮೀಪ ಮಂಗಳವಾರ ಬೆಳಿಗ್ಗಿನ ಜಾವ ಸಂಭವಿಸಿದೆ.       ಮೃತರನ್ನು ರಮೇಶ್‌ ಹೆಗ್ಡೆ (58) ಎಂದು ಗುರುತಿಸಲಾಗಿದೆ. ಅವರು ಪುತ್ತೂರು ಮೂಲದವರಾಗಿದ್ದು, ಸಂತೆ ವ್ಯಾಪಾರಕ್ಕಾಗಿ ಉಚ್ಚಿಲಕ್ಕೆ ಆಗಮಿಸಿದ್ದಾರೆ ಎಂದು […]

(Uchila) ಉಚ್ಚಿಲ: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಮಂಗಳವಾರ ಬೆಳಗ್ಗೆ ಉಚ್ಚಿಲ ರಾಹೆ 66 ರ ಪೇಟೆ ಸಮೀಪ ಮಂಗಳವಾರ ಬೆಳಿಗ್ಗಿನ ಜಾವ ಸಂಭವಿಸಿದೆ.

      ಮೃತರನ್ನು ರಮೇಶ್‌ ಹೆಗ್ಡೆ (58) ಎಂದು ಗುರುತಿಸಲಾಗಿದೆ.

ಅವರು ಪುತ್ತೂರು ಮೂಲದವರಾಗಿದ್ದು, ಸಂತೆ ವ್ಯಾಪಾರಕ್ಕಾಗಿ ಉಚ್ಚಿಲಕ್ಕೆ ಆಗಮಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆಯ ಸ್ಥಳಕ್ಕೆ ಆಗಮಿಸಿದ ಸಾಮಾಜಿಕ ಕಾರ್ಯಕರ್ತ ಜಲಾಲುದ್ದೀನ್ ಉಚ್ಚಿಲ, ಮೂಳೂರು SDPI ಅಂಬ್ಯುಲೆನ್ಸ್ ಚಾಲಕ ಹಮೀದ್ NH, ರಝಾಕ್, ರಹೀಫ್, ಸಾದಿಕ್, ಮುಜೀಬ್ ಅವರ ಸಹಾಯದಿಂದ ಮೃತದೇಹವನ್ನು SDPI ಅಂಬ್ಯುಲೆನ್ಸ್ ಮೂಲಕ ಪಡುಬಿದ್ರೆ ಶವಾಗಾರಕ್ಕೆ ಸಾಗಿಸಿದರು.

ಈ ಸಂದರ್ಭ ಪಡುಬಿದ್ರಿ ಪೊಲೀಸರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.