• Home  
  • ಉಚ್ಚಿಲ: ಕೇಸು ಹಾಕಿಸಿಕೊಂಡ ಬಳಿಕ ಎಚ್ಚೆತ್ತ ಹೆದ್ದಾರಿ ಗುತ್ತಿಗೆದಾರ, ರಸ್ತೆ ದಾಟಲು ಬಿಳಿ ಬಣ್ಣ, ಸ್ಪೀಡ್ ಬ್ರೇಕರ್ ಅಳವಡಿಕೆ (Uchilla: Highway contractor wakes up after being sued, installs white paint and speed breakers for road crossings)  
- PROBLEMS

ಉಚ್ಚಿಲ: ಕೇಸು ಹಾಕಿಸಿಕೊಂಡ ಬಳಿಕ ಎಚ್ಚೆತ್ತ ಹೆದ್ದಾರಿ ಗುತ್ತಿಗೆದಾರ, ರಸ್ತೆ ದಾಟಲು ಬಿಳಿ ಬಣ್ಣ, ಸ್ಪೀಡ್ ಬ್ರೇಕರ್ ಅಳವಡಿಕೆ (Uchilla: Highway contractor wakes up after being sued, installs white paint and speed breakers for road crossings)  

Share: ಉಚ್ಚಿಲ: ಕೇಸು ಹಾಕಿಸಿಕೊಂಡ ಬಳಿಕ ಎಚ್ಚೆತ್ತ ಹೆದ್ದಾರಿ ಗುತ್ತಿಗೆದಾರ, ರಸ್ತೆ ದಾಟಲು ಬಿಳಿ ಬಣ್ಣ, ಸ್ಪೀಡ್ ಬ್ರೇಕರ್ ಅಳವಡಿಕೆ (uchila) ಉಚ್ಚಿಲ: ಉಚ್ಚಿಲ ರಾಹೆ 66ರಲ್ಲಿ ನಿರಂತರ ಅಪಘಾತ ಸಂಭವಿಸಿ, ಮೂರು ಮಂದಿ ಜೀವ ತೆತ್ತಿದ್ದು, ಹಲವಾರು ಮಂದಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿ ಪಡುಬಿದ್ರಿ ಪೊಲೀಸರು ಅಪಘಾತ ಎಸಗಿದ ವಾಹನದ ಚಾಲಕ, ಹೆದ್ದಾರಿ ಗುತ್ತಿಗೆದಾರ ಮತ್ತು ಹೆದ್ದಾರಿ ಇಲಾಖೆಯ ಮೇಲೆ ಕೇಸು ದಾಖಲಿಸಿದ ಬಳಿಕ ಹೆದ್ದಾರಿ ಗುತ್ತಿಗೆದಾರ ಸಂಸ್ಥೆ ಉಚ್ಚಿಲದ ಹೆದ್ದಾರಿಯಲ್ಲಿ ಕಾಮಗಾರಿಯ ಪೂರ್ಣ ಪ್ರಕ್ರಿಯೆ […]

ಉಚ್ಚಿಲ: ಕೇಸು ಹಾಕಿಸಿಕೊಂಡ ಬಳಿಕ ಎಚ್ಚೆತ್ತ ಹೆದ್ದಾರಿ ಗುತ್ತಿಗೆದಾರ, ರಸ್ತೆ ದಾಟಲು ಬಿಳಿ ಬಣ್ಣ, ಸ್ಪೀಡ್ ಬ್ರೇಕರ್ ಅಳವಡಿಕೆ

(uchila) ಉಚ್ಚಿಲ: ಉಚ್ಚಿಲ ರಾಹೆ 66ರಲ್ಲಿ ನಿರಂತರ ಅಪಘಾತ ಸಂಭವಿಸಿ, ಮೂರು ಮಂದಿ ಜೀವ ತೆತ್ತಿದ್ದು, ಹಲವಾರು ಮಂದಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿ ಪಡುಬಿದ್ರಿ ಪೊಲೀಸರು ಅಪಘಾತ ಎಸಗಿದ ವಾಹನದ ಚಾಲಕ, ಹೆದ್ದಾರಿ ಗುತ್ತಿಗೆದಾರ ಮತ್ತು ಹೆದ್ದಾರಿ ಇಲಾಖೆಯ ಮೇಲೆ ಕೇಸು ದಾಖಲಿಸಿದ ಬಳಿಕ ಹೆದ್ದಾರಿ ಗುತ್ತಿಗೆದಾರ ಸಂಸ್ಥೆ ಉಚ್ಚಿಲದ ಹೆದ್ದಾರಿಯಲ್ಲಿ ಕಾಮಗಾರಿಯ ಪೂರ್ಣ ಪ್ರಕ್ರಿಯೆ ಪ್ರಾರಂಭಿಸಿದೆ.

ಶನಿವಾರ ಬೆಳಿಗ್ಗೆಯಿಂದ ಪಾದಾಚಾರಿಗಳಿಗೆ ರಸ್ತೆ ದಾಟಲು ಬಿಳಿ ಗೆರೆಯನ್ನು ಮತ್ತು ಹೆದ್ದಾರಿಯ ಇಕ್ಕಡೆಗಳಲ್ಲಿ ರಬ್ಬರ್ ಸ್ಪೀಡ್‌ ಬೇಕರ್ ಅಳವಡಿಸಿ ವೇಗ ನಿಯಂತ್ರಣ ಮಾಡುವ ಕೆಲಸ ಪ್ರಾರಂಭಿಸಿದೆ. ಹಲವಾರು ತಿಂಗಳುಗಳಿಂದ ಸ್ಥಬ್ಧವಾಗಿದ್ದ ಹೆದ್ದಾರಿ ದೀಪ ಉರಿಯಲು ತೊಡಗಿದೆ. ಇದೇ ಕೆಲಸವನ್ನು ಮೊದಲೇ ಮಾಡಿದ್ದರೆ, ಪ್ರಕರಣವೂ ದಾಖಲಾಗುತ್ತಿರಲಿಲ್ಲ. ಕೆಲವರ ಪ್ರಾಣವೂ ಉಳಿಯುತ್ತಿತ್ತು.

 ಹೆದ್ದಾರಿ ಪಕ್ಕದಲ್ಲಿರುವ ಸರ್ವಿಸ್ ರಸ್ತೆಯ ಚರಂಡಿ ಹಾಗೂ ರಸ್ತೆ ಅವೈಜ್ಞಾನಿಕವಾಗಿದ್ದು ಇದನ್ನು ಆದಷ್ಟು ಶೀಘ್ರವಾಗಿ ಸರಿಪಡಿಸಬೇಕಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

Leave a comment

Your email address will not be published. Required fields are marked *

eMedia Kannada  @2025. All Rights Reserved.