• Home  
  • ಉಚ್ಚಿಲ ದೇಗುಲಕ್ಕೆ ಕಾಂಗ್ರಿ ವಿಶ್ವವಿದ್ಯಾಲಯ ಕುಲಾಧಿಪತಿ ಡಾ. ಸತ್ಯಪಾಲ್ ಸಿಂಗ್ ಕುಟುಂಬ ಸಹಿತ ಭೇಟಿ (Kangri University Chancellor Dr. Uchila Temple. Visit with Satyapal Singh’s family)
- ಧಾರ್ಮಿಕ

ಉಚ್ಚಿಲ ದೇಗುಲಕ್ಕೆ ಕಾಂಗ್ರಿ ವಿಶ್ವವಿದ್ಯಾಲಯ ಕುಲಾಧಿಪತಿ ಡಾ. ಸತ್ಯಪಾಲ್ ಸಿಂಗ್ ಕುಟುಂಬ ಸಹಿತ ಭೇಟಿ (Kangri University Chancellor Dr. Uchila Temple. Visit with Satyapal Singh’s family)

Share:  ಉಚ್ಚಿಲ ದೇಗುಲಕ್ಕೆ ಕಾಂಗ್ರಿ ವಿಶ್ವವಿದ್ಯಾಲಯ ಕುಲಾಧಿಪತಿ ಡಾ. ಸತ್ಯಪಾಲ್ ಸಿಂಗ್ ಕುಟುಂಬ ಸಹಿತ ಭೇಟಿ ಮಹಾಲಕ್ಷ್ಮೀ ದೇಗುಲದ ವತಿಯಿಂದ ಸತ್ಯಪಾಲ್ ಸಿಂಗ್ ಪತ್ನಿ ಡಾ. ಅಲ್ಕಾ ಸಿಂಗ್ ರವರಿಗೆ ಅಭಿನಂದನೆ (Uchila) ಉಚ್ಚಿಲ :  ಕೇಂದ್ರದ ಮಾನವ ಸಂಪನ್ಮೂಲ (ಉನ್ನತ ಶಿಕ್ಷಣ) ಮತ್ತು ಜಲಸಂಪನ್ಮೂಲ ಖಾತೆಯ ಮಾಜಿ ಸಚಿವ ಮತ್ತು ಮುಂಬೈನ ಮಾಜಿ ಪೊಲೀಸ್ ಆಯುಕ್ತ, ಗುರುಕುಲ ಕಾಂಗ್ರಿ ವಿಶ್ವವಿದ್ಯಾಲಯ ಹರಿದ್ವಾರದ ಕುಲಾಧಿಪತಿ ಡಾ. ಸತ್ಯಪಾಲ್ ಸಿಂಗ್ ಮತ್ತು ಪತ್ನಿ ಡಾ. ಅಲ್ಕಾ ಸಿಂಗ್ ಹಾಗೂ […]

(Uchila) ಉಚ್ಚಿಲ :  ಕೇಂದ್ರದ ಮಾನವ ಸಂಪನ್ಮೂಲ (ಉನ್ನತ ಶಿಕ್ಷಣ) ಮತ್ತು ಜಲಸಂಪನ್ಮೂಲ ಖಾತೆಯ ಮಾಜಿ ಸಚಿವ ಮತ್ತು ಮುಂಬೈನ ಮಾಜಿ ಪೊಲೀಸ್ ಆಯುಕ್ತ, ಗುರುಕುಲ ಕಾಂಗ್ರಿ ವಿಶ್ವವಿದ್ಯಾಲಯ ಹರಿದ್ವಾರದ ಕುಲಾಧಿಪತಿ ಡಾ. ಸತ್ಯಪಾಲ್ ಸಿಂಗ್ ಮತ್ತು ಪತ್ನಿ ಡಾ. ಅಲ್ಕಾ ಸಿಂಗ್ ಹಾಗೂ ರಿಷಿ ಪಲ್ಪುರವರು ಬುಧವಾ ಕಾಪು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ಮಹಾಲಕ್ಷ್ಮಿಯ ದರುಶನ ಪಡೆದರು.

ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಕೆವಿ ರಾಘವೇಂದ್ರ ಉಪಾಧ್ಯಾಯರವರು ವಿಶೇಷ ಪೂಜೆ ಸಲ್ಲಿಸಿ  ಪ್ರಸಾದ ವಿತರಿಸಿದರು.

ದೇವಳದ ವತಿಯಿಂದ ಸತ್ಯಪಾಲ್ ಸಿಂಗ್ ಮತ್ತು ಪತ್ನಿ ಡಾ. ಅಲ್ಕಾ ಸಿಂಗ್ ದಂಪತಿಯನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಆಡಳಿತ ಮಂಡಳಿಯ ಅಧ್ಯಕ್ಷ ಗಿರಿಧರ ಸುವರ್ಣ, ದ.ಕ ಮೊಗವೀರ ಮಹಾಜನ ಸಂಘದ ಸದಸ್ಯರು ಉಪಸ್ಥಿತರಿದ್ದರು. 

Leave a comment

Your email address will not be published. Required fields are marked *

eMedia Kannada  @2025. All Rights Reserved.