• Home  
  • ಉಚ್ಚಿಲ ಬಡಾ ಗ್ರಾಮ ಪಂ ವ್ಯಾಪ್ತಿಯಲ್ಲಿ ಜಿಲ್ಲಾಡಳಿತದ ಸ್ವಚ್ಛತಾ ಅಭಿಯಾನ (Cleaness compaign of the district administration in the area of Uchila Bada village)
- health - PROBLEMS - ವಿಡಿಯೋ

ಉಚ್ಚಿಲ ಬಡಾ ಗ್ರಾಮ ಪಂ ವ್ಯಾಪ್ತಿಯಲ್ಲಿ ಜಿಲ್ಲಾಡಳಿತದ ಸ್ವಚ್ಛತಾ ಅಭಿಯಾನ (Cleaness compaign of the district administration in the area of Uchila Bada village)

Share: ಉಚ್ಚಿಲ ಬಡಾ ಗ್ರಾಮ ಪಂ ವ್ಯಾಪ್ತಿಯಲ್ಲಿ ಜಿಲ್ಲಾಡಳಿತದ ಸ್ವಚ್ಛತಾ ಅಭಿಯಾನ (Uchila) ಉಚ್ಚಿಲ: ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಡಳಿತ ಪ್ರತೀ ತಿಂಗಳ ಮೊದಲ ಶನಿವಾರ ಶುಚಿತ್ವಕ್ಕೆ ವಿಶೇಷ ಮಹತ್ವ ನೀಡಿ, ಸರಕಾರಿ ಕಚೇರಿ, ಸಾರ್ವಜನಿಕ ಸ್ಥಳಗಳಲ್ಲಿ ಸರಕಾರಿ ಇಲಾಖೆಗಳು, ಅಧಿಕಾರಿಗಳು ಮತ್ತು ಸಿಬಂದಿಗಳೇ ಸ್ವತಃ ತೆರಳಿ ಕಸ ಹೆಕ್ಕುವಂತೆ ಮಹತ್ವದ ಆದೇಶ ನೀಡಿದೆ. ಆಪ್ರಯುಕ್ತ ಶನಿವಾರ ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಆರ್. ಅವರು ಅಧಿಕಾರಿಗಳು, ಸಿಬ್ಬಂದಿಗಳು, ಬಡಾ ಗ್ರಾಪಂ ಅಧ್ಯಕ್ಷ ಶಿವಕುಮಾರ್‌ […]

ಉಚ್ಚಿಲ ಬಡಾ ಗ್ರಾಮ ಪಂ ವ್ಯಾಪ್ತಿಯಲ್ಲಿ ಜಿಲ್ಲಾಡಳಿತದ ಸ್ವಚ್ಛತಾ ಅಭಿಯಾನ

(Uchila) ಉಚ್ಚಿಲ: ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಡಳಿತ ಪ್ರತೀ ತಿಂಗಳ ಮೊದಲ ಶನಿವಾರ ಶುಚಿತ್ವಕ್ಕೆ ವಿಶೇಷ ಮಹತ್ವ ನೀಡಿ, ಸರಕಾರಿ ಕಚೇರಿ, ಸಾರ್ವಜನಿಕ ಸ್ಥಳಗಳಲ್ಲಿ ಸರಕಾರಿ ಇಲಾಖೆಗಳು, ಅಧಿಕಾರಿಗಳು ಮತ್ತು ಸಿಬಂದಿಗಳೇ ಸ್ವತಃ ತೆರಳಿ ಕಸ ಹೆಕ್ಕುವಂತೆ ಮಹತ್ವದ ಆದೇಶ ನೀಡಿದೆ.

ಆಪ್ರಯುಕ್ತ ಶನಿವಾರ ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಆರ್. ಅವರು ಅಧಿಕಾರಿಗಳು, ಸಿಬ್ಬಂದಿಗಳು, ಬಡಾ ಗ್ರಾಪಂ ಅಧ್ಯಕ್ಷ ಶಿವಕುಮಾರ್‌ ಮೆಂಡನ್‌, ಗ್ರಾಪಂ ಸದಸ್ಯರ ಜತೆಗೂಡಿ ಸಾರ್ವಜನಿಕ ಸ್ಥಳಗಳಲ್ಲಿ ಅನಾಮಧೇಯರು ತಂದು ಸುರಿದಿದ್ದ ಕಸ, ತ್ಯಾಜ್ಯಗಳನ್ನು ಸಂಗ್ರಹಿಸಿದರು.

 ಉಡುಪಿ ಜಿಲ್ಲೆಯ ವಿವಿಧೆಡೆ ತ್ಯಾಜ್ಯ ಸಂಗ್ರಹಣೆ, ನಿರ್ವಹಣೆ ಮತ್ತು ವಿಲೇವಾರಿ ಬಲು ದೊಡ್ಡ ಸಮಸ್ಯೆಯಾಗಿದ್ದು, ಇದು ಸರಕಾರಿ ಕಚೇರಿಗಳನ್ನೂ ಹೊರತಾಗಿಲ್ಲ. ಎಲ್ಲೆಡೆ ಕಾಣ ಸಿಗುತ್ತಿರುವ ಕಸ, ತ್ಯಾಜ್ಯದ ಪ್ರಮಾಣವನ್ನು ಕಡಿಮೆಗೊಳಿಸಿ, ಎಲ್ಲೆಂದರಲ್ಲಿ ಕಸ ಮತ್ತು ತ್ಯಾಜ್ಯ ವಸ್ತುಗಳನ್ನು ಎಸೆದು ಹೋಗದಂತೆ

ಉಡುಪಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಅವರ ಆದೇಶದಂತೆ ಕಾಪು ತಾಲೂಕಿನ ಸರಕಾರಿ ಕಚೇರಿಗಳು, ಸಾರ್ವಜನಿಕ ಪ್ರದೇಶಗಳು ಮತ್ತು ಸ್ಥಳಗಳು ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕ ಪ್ರದೇಶಗಳಲ್ಲಿನ ಕಸ ಮತ್ತು ತ್ಯಾಜ್ಯ ವಸ್ತುಗಳನ್ನು ತೆರವುಗೊಳಿಸಲು ತಾಲೂಕು ಆಡಳಿತವು ಮುಂದಾಗಿದ್ದು ಶನಿವಾರ ಉಚ್ಚಿಲ ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಸ ಸಂಗ್ರಹಿಸಲಾಯಿತು.

 ಉಚ್ಚಿಲ ಬಡಾ ಗ್ರಾಮದ ರಾ. ಹೆ. 66ರ ಇಕ್ಕೆಲ, ಉಚ್ಚಿಲ ಪೇಟೆ, ಬದ್ದಿಂಜೆ ಮಠ, ಉಚ್ಚಿಲ ಪಣಿಯೂರು ರಸ್ತೆ, ಭಾಸ್ಕರ್ ನಗರ, ಬಿಸ್ಮಿಲ್ಲಾ ಸ್ಟೋರ್ಸ್, ನಾರಾಯಣ ಗುರು ರಸ್ತೆ, ಸುಭಾಸ್ ರಸ್ತೆ ಸಹಿತ ವಿವಿಧೆಡೆಗಳಿಗೆ ತೆರಳಿ‌ ಸ್ವಚ್ಛತಾ ಕಾರ್ಯಕ್ರಮ ನೆರವೇರಿಸಿದರು.

ಕಾಪು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮೋಹನ್ ಕುಮಾರ್, ತಾ.ಪಂ. ಸಹಾಯಕ ನಿರ್ದೇಶಕ ಜೇಮ್ಸ್ ಡಿ ಸಿಲ್ವ, ಬಡಾ ಗ್ರಾ.ಪಂ. ಅಧ್ಯಕ್ಷ ಶಿವ ಕುಮಾರ್ ಮೆಂಡನ್, ಅಭಿವೃದ್ಧಿ ಅಧಿಕಾರಿ ಸತೀಶ್, ಗ್ರಾಮ ಆಡಳಿತಾಧಿಕಾರಿ ಜಗದೀಶ್ ಹಾಗೂ ವಿವಿಧ ಇಲಾಖೆಗಳ ಸಿಬಂದಿಗಳು, ಗ್ರಾ.ಪಂ. ಸಿಬಂದಿಗಳು, ಸ್ವಚ್ಚತಾ ಸಿಬ್ಬದಿಗಳು ಹಾಗೂ ಗ್ರಾಮಸ್ಥರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.