• Home  
  • ಉಚ್ಚಿಲ : ಬಸ್ಸಿನಿಂದ ರಸ್ತೆಗೆ ಎಸೆಯಲ್ಪಟ್ಟು ವ್ಯಕ್ತಿ ಮೃತ್ಯು (Uchila : Man dies after being thrown onto road by bus)
- ಅಪಘಾತ

ಉಚ್ಚಿಲ : ಬಸ್ಸಿನಿಂದ ರಸ್ತೆಗೆ ಎಸೆಯಲ್ಪಟ್ಟು ವ್ಯಕ್ತಿ ಮೃತ್ಯು (Uchila : Man dies after being thrown onto road by bus)

Share: ಉಚ್ಚಿಲ : ಬಸ್ಸಿನಿಂದ ರಸ್ತೆಗೆ ಎಸೆಯಲ್ಪಟ್ಟು ವ್ಯಕ್ತಿ ಮೃತ್ಯು   ಕಾಪು ಮೂಲದ ಸಖೇಂದ್ರ (52) ಮೃತ ವ್ಯಕ್ತಿ (Padubidri) ಪಡುಬಿದ್ರಿ : ಓವರ್‌ ಟೇಕ್‌ ಭರಾಟೆಯಲ್ಲಿ  ಬಸ್ಸಿನ ಮುಂಭಾಗದ ಬಾಗಿಲ ಬಳಿ ನಿಂತಿದ್ದ ವ್ಯಕ್ತಿಯೋರ್ವ ಬಾಗಿಲಿನ ಮೂಲಕ ಹೊರಗೆ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡು  ಮೃತಪಟ್ಟ ಘಟನೆ ಉಚ್ಚಿಲ ಪೇಟೆಯ ಬಳಿ ರಾ.ಹೆ 66 ರಲ್ಲಿ ಘಟಿಸಿದೆ.   ಕಾಪು ಮೂಲದ ಸಖೇಂದ್ರ (52) ಮೃತ ವ್ಯಕ್ತಿ. ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಚಲಿಸುತ್ತಿದ್ದ  ಬಸ್ಸು […]

(Padubidri) ಪಡುಬಿದ್ರಿ : ಓವರ್‌ ಟೇಕ್‌ ಭರಾಟೆಯಲ್ಲಿ  ಬಸ್ಸಿನ ಮುಂಭಾಗದ ಬಾಗಿಲ ಬಳಿ ನಿಂತಿದ್ದ ವ್ಯಕ್ತಿಯೋರ್ವ ಬಾಗಿಲಿನ ಮೂಲಕ ಹೊರಗೆ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡು  ಮೃತಪಟ್ಟ ಘಟನೆ ಉಚ್ಚಿಲ ಪೇಟೆಯ ಬಳಿ ರಾ.ಹೆ 66 ರಲ್ಲಿ ಘಟಿಸಿದೆ.

  ಕಾಪು ಮೂಲದ ಸಖೇಂದ್ರ (52) ಮೃತ ವ್ಯಕ್ತಿ.

ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಚಲಿಸುತ್ತಿದ್ದ  ಬಸ್ಸು ಅದೇ ದಾರಿಯಲ್ಲಿ ಸಾಗುತ್ತಿದ್ದ  ವಾಹನವೊಂದನ್ನು ಓವರ್‌ ಟೇಕ್‌ ಮಾಡುವಾಗ   ಒಮ್ಮೆಲೆ ಬಲಕ್ಕೆ  ತಿರುಗಿಸಿದ ಪರಿಣಾಮ ಈ ಘಟನೆ ಸಂಭವಿಸಿದೆ.

ತೀವ್ರ ಗಾಯಗೊಂಡ ಸಕೇಂದ್ರರವರನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ, ಮೃತ ಘೋಷಿಸಿದ್ದಾರೆ.

ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.