ಉಚ್ಚಿಲ : ಮಹಿಳೆಯರಿಬ್ಬರಿಗೆ ಕಾರು ಡಿಕ್ಕಿ, ಒಬ್ಬಾಕೆ ಸಾವು.
ಮಹಾಲಕ್ಷ್ಮೀ ದೇಗುಲದ ಎದುರು ರಾಹೆ 66 ರಲ್ಲಿ ನಡೆದ ಘಟನೆ.
(Padubidri) ಪಡುಬಿದ್ರಿ: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಎದುರು ರಾಷ್ಟ್ರೀಯ ಹೆದ್ದಾರಿ 66ರ ಪೂರ್ವ ಬದಿಯಿಂದ ಪಶ್ಚಿಮ ಬದಿಗೆ ದಾಟಲು ಡಿವೈಡರ್ ಬಳಿ ನಿಂತಿದ್ದ ಈರ್ವರು ಮಹಿಳೆಯರಿಗೆ ಶುಕ್ರವಾರ ರಾತ್ರಿಯ ವೇಳೆ ಕಾರೊಂದು ಢಿಕ್ಕಿಯಾದ ಘಟನೆ ಘಟಿಸಿದೆ.
ಸಾಸ್ತಾನದ ನಿವಾಸಿ ಮಮತಾ(40) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜತೆಯಲ್ಲಿದ್ದ ಮಹಿಳೆಗೂ ಗಾಯಗಳಾಗಿದ್ದು ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ತುರ್ತಾಗಿ ಘಟನಾ ಸ್ಥಳಕ್ಕೆ ಸಮಾಜ ಸೇವಕ ಜಲಾಲುದ್ದೀನ್ ಗಾಯಾಳುವನ್ನು ಎಸ್ಡಿಪಿಐ ಅಂಬುಲೆನ್ಸ್ ನಲ್ಲಿ ಉಡುಪಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಪಡುಬಿದ್ರಿ ಪೊಲೀಸರು ಅಫಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.

