• Home  
  • ಉಚ್ಚಿಲ ರಿಕ್ಷಾಗೆ ಕಾರು ಡಿಕ್ಕಿ ; ರಿಕ್ಷಾ ಚಾಲಕ ಗಂಭೀರ (Car hits rickshaw in Uchilla; rickshaw driver in critical condition)
- ಅಪಘಾತ

ಉಚ್ಚಿಲ ರಿಕ್ಷಾಗೆ ಕಾರು ಡಿಕ್ಕಿ ; ರಿಕ್ಷಾ ಚಾಲಕ ಗಂಭೀರ (Car hits rickshaw in Uchilla; rickshaw driver in critical condition)

Share: ಉಚ್ಚಿಲ ರಿಕ್ಷಾಗೆ ಕಾರು ಡಿಕ್ಕಿ ; ರಿಕ್ಷಾ ಚಾಲಕ ಗಂಭೀರ    ಹೆದ್ದಾರಿಯ ಸರ್ವಿಸ್ ರಸ್ತೆ ಅವೈಜ್ಞಾನಿಕ ಕಾಮಗಾರಿ ಅಪಘಾತಕ್ಕೆ ಕಾರಣ (Uchila) ಉಚ್ಚಿಲ : ಉಚ್ಚಿಲ ರಾ. ಹೆ. 66ರ ವೆಸ್‌ ಕೋಸ್ಟ್‌ ನರ್ಸರಿ ಎದುರು ಕಾರೊಂದು ರಿಕ್ಷಾಗೆ ಗುದ್ದಿದ ಪರಿಣಾಮ ರಿಕ್ಷಾ ಚಾಲಕ ಗಂಭೀರ ಗಾಯಗೊಂಡ ಘಟನೆ ಸೋಮವಾರ ಸಂಜೆ ಸಂಭವಿಸಿದೆ.   ರಿಕ್ಷಾ ಚಾಲಕ ಉಚ್ಚಿಲದ ರಫೀಕ್ ಎಂದು ಗುರುತಿಸಲಾಗಿದೆ. ತೀವ್ರ ಗಾಯಗೊಂಡ ರಫಿಕ್‌ ರನ್ನು ಉಡುಪಿ  ಖಾಸಗಿ ಆಸ್ಪತ್ರೆಗೆ ಆಂಬುಲೆನ್ಸ್ […]

(Uchila) ಉಚ್ಚಿಲ : ಉಚ್ಚಿಲ ರಾ. ಹೆ. 66ರ ವೆಸ್‌ ಕೋಸ್ಟ್‌ ನರ್ಸರಿ ಎದುರು ಕಾರೊಂದು ರಿಕ್ಷಾಗೆ ಗುದ್ದಿದ ಪರಿಣಾಮ ರಿಕ್ಷಾ ಚಾಲಕ ಗಂಭೀರ ಗಾಯಗೊಂಡ ಘಟನೆ ಸೋಮವಾರ ಸಂಜೆ ಸಂಭವಿಸಿದೆ.

  ರಿಕ್ಷಾ ಚಾಲಕ ಉಚ್ಚಿಲದ ರಫೀಕ್ ಎಂದು ಗುರುತಿಸಲಾಗಿದೆ.

ತೀವ್ರ ಗಾಯಗೊಂಡ ರಫಿಕ್‌ ರನ್ನು ಉಡುಪಿ  ಖಾಸಗಿ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಸಾಗಿಸಲಾಗಿದೆ.

ಘಟನೆಯ ವಿವರ : ಉಚ್ಚಿಲ ರಿಕ್ಷಾ ನಿಲ್ದಾಣದ ಸಮಾಜ ಸೇವಕನೆಂದು ಗುರುತಿಸಲಾದ ರಫೀಕ್ ಯಾನೆ ಚಿಲ್ಲರಿ ರಫೀಕ್ ರವರು ಪಡುವಿನಲ್ಲಿ ಗ್ರಾಹಕರನ್ನು ಬಿಟ್ಟು ಒಬ್ಬಂಟಿಯಾಗಿ ವಾಪಾಸಾಗುತ್ತಿದ್ದರು. ಪೂರ್ವ ಬದಿಗೆ ಸಾಗಲು ಅವರು ಕೆಲ ಮೀಟರ್ ಗಳಷ್ಟು ವಿರುದ್ಧ ದಿಕ್ಕಿನಿಂದ ಚಲಿಸಿದಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅತಿ ವೇಗದಿಂದ ಬಂದ ಬ್ರಿಜಾ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಿಕ್ಷಾವು ಡಿವೈಡರ್ ದಾಟಿ ಮಗುಚಿ ಬಿದ್ದಿದ್ದು, ಕಾರು ಕೂಡ ಮಗುಚಿ ಬಿದ್ದಿದೆ.

    ಅಪಘಾತದಲ್ಲಿ ರಿಕ್ಷಾ ಚಾಲಕ ರಫೀಕ್ ರವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹೆದ್ದಾರಿ ಇಲಾಖಾ ನಿರ್ಲಕ್ಷವೇ ಅಪಘಾತಕ್ಕೆ ಕಾರಣ : ಉಚ್ಚಿಲ ರಾ. ಹೆ. 66ರ ಪಶ್ಚಿಮ ಬದಿಯಲ್ಲಿ ಇರುವ ಸರ್ವಿಸ್ ರಸ್ತೆಯಿಂದ ಹೆದ್ದಾರಿ ಪೂರ್ವ ಬದಿಗೆ ಬರಲು 2  ಕಿ.ಮೀ.ದೂರ ಸಾಗಿ ಕೊಪ್ಪಲಂಗಡಿಯಲ್ಲಿ ತಿರುವು ತೆಗೆದುಕೊಳ್ಳಬೇಕಿದೆ.ಡಿವೈಡರ್ ಅಸಮರ್ಪಕವಾಗಿದ್ದು, ಇದನ್ನು ಪರಿಶೀಲನೆ ಮಾಡಿ ಡಿವೈಡರ್ ನಿಂದ 300 ಮೀಟರ್ ದೂರದಲ್ಲಿ ಡಿವೈಡರ್ ತೆಗೆದು ಹಿಂದಿನ ಡಿವೈಡರ್ ಮುಚ್ಚುವಂತೆ ಹಲವಾರು ಬಾರಿ ಹೆದ್ದಾರಿ ಇಲಾಖೆಗೆ ಹೇಳಲಾಗಿದೆ.

    ಹಿಂದಿನ ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾಣೆ ಮತ್ತು ಪಡುಬಿದ್ರಿ ಠಾಣಾಧಿಕಾರಿಯಾಗಿದ್ದ ಪ್ರಸನ್ನರವರು ಈ ಬಗ್ಗೆ ಅಪಘಾತದ ಮುನ್ಸೂಚನೆ ಗ್ರಹಿಸಿ 300 ಮೀಟರ್ ದೂರದಲ್ಲಿ ಡಿವೈಡರ್  ತೆಗೆಯುವಂತೆ ಹೆದ್ದಾರಿ ಇಲಾಖಾಧಿಕಾರಿಗೆ ಮನವಿ ಮಾಡಿದ್ದರು. ಹೆದ್ದಾರಿ ಇಲಾಖಾ ಅಧಿಕಾರಿಗಳು ತಲೆಯಾಡಿಸಿ ಹೋದವರು ಮತ್ತೆ ಬಂದಿಲ್ಲ. ಈ ಕಾರಣದಿಂದ ಇಂದು ಅಪಘಾತ ಸಂಭವಿಸಿದ್ದು ಮುಂದೆಯೂ ಸಂಭವಿಸಲಿದೆ.

 ಆದಷ್ಟು ಶೀಘ್ರವಾಗಿ ಹೆದ್ದಾರಿ ಇಲಾಖೆಯು ಈ ಬಗ್ಗೆ ಕ್ರಮ ಕೈಗೊಂಡು ದಿವೈಡರ್ ಬದಲಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

  ಪಡುಬಿದ್ರಿ ಪೊಲೀಸರು, ಸ್ಥಳೀಯರು, ಟೋಲ್ ಸಿಬ್ಬಂದಿಯವರು ಹೆದ್ದಾರಿ ಮಧ್ಯದಲ್ಲಿದ್ದ ವಾಹನಗಳನ್ನು ತೆರವುಗೊಳಿಸಿದ್ದಾರೆ.

 ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.