• Home  
  • ಮುಲ್ಕಿ ಪದ್ಮಶಾಲಿ ಯುವ ವೇದಿಕೆಯಿಂದ ಮುಲ್ಕಿಯ ನಾಲ್ಕು ಮಾಗಣೆಯ ಸದಸ್ಯರಿಗೆ ಕ್ರೀಡಾಕೂಟ (Mulki Padmashali Youth Forum organizes sports meet for members of four Maganas of Mulki)
- ಕ್ರೀಡೆ

ಮುಲ್ಕಿ ಪದ್ಮಶಾಲಿ ಯುವ ವೇದಿಕೆಯಿಂದ ಮುಲ್ಕಿಯ ನಾಲ್ಕು ಮಾಗಣೆಯ ಸದಸ್ಯರಿಗೆ ಕ್ರೀಡಾಕೂಟ (Mulki Padmashali Youth Forum organizes sports meet for members of four Maganas of Mulki)

Share: ಮುಲ್ಕಿ ಪದ್ಮಶಾಲಿ ಯುವ ವೇದಿಕೆಯಿಂದ ಮುಲ್ಕಿಯ ನಾಲ್ಕು ಮಾಗಣೆಯ ಸದಸ್ಯರಿಗೆ ಕ್ರೀಡಾಕೂಟ ಕ್ರೀಡಾ ಕಾರ್ಯಕ್ರಮ ಉದ್ಘಾಟಿಸಿದ ಪುನರೂರು ಪ್ರತಿಷ್ಠಾನದ ಅಧ್ಯಕ್ಷರಾದ ದೇವಪ್ರಸಾದ್   (Mulki) ಮುಲ್ಕಿ: ಮುಲ್ಕಿ ಪದ್ಮಶಾಲಿ ಯುವ ವೇದಿಕೆಯ ಆಯೋಜನೆಯಲ್ಲಿ ಶ್ರೀ ವೀರಭದ್ರ ಮಹಮ್ಮಾಯೀ ದೇವಸ್ಥಾನ ಮಾನಂಪಾಡಿ ಮುಲ್ಕಿಯ ನಾಲ್ಕು ಮಾಗಣೆಯ ಸದಸ್ಯರಿಗೆ ಕ್ರೀಡಾಕೂಟವನ್ನು ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್, ಶಿಮಂತೂರಿನ ಕ್ರೀಡಾ ಮೈದಾನದಲ್ಲಿ ಆಯೋಜಿಸಲಾಯಿತು.      ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ಆಡಳಿತ ಮೊಕ್ತೇಸರ ಪುರಂದರ ಡಿ ಶೆಟ್ಟಿಗಾರ್ ರವರು ವಹಿಸಿದ್ದರು. […]

(Mulki) ಮುಲ್ಕಿ: ಮುಲ್ಕಿ ಪದ್ಮಶಾಲಿ ಯುವ ವೇದಿಕೆಯ ಆಯೋಜನೆಯಲ್ಲಿ ಶ್ರೀ ವೀರಭದ್ರ ಮಹಮ್ಮಾಯೀ ದೇವಸ್ಥಾನ ಮಾನಂಪಾಡಿ ಮುಲ್ಕಿಯ ನಾಲ್ಕು ಮಾಗಣೆಯ ಸದಸ್ಯರಿಗೆ ಕ್ರೀಡಾಕೂಟವನ್ನು ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್, ಶಿಮಂತೂರಿನ ಕ್ರೀಡಾ ಮೈದಾನದಲ್ಲಿ ಆಯೋಜಿಸಲಾಯಿತು.  

   ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ಆಡಳಿತ ಮೊಕ್ತೇಸರ ಪುರಂದರ ಡಿ ಶೆಟ್ಟಿಗಾರ್ ರವರು ವಹಿಸಿದ್ದರು.

ಯುಗಪುರುಷದ ಸಂಪಾದಕರಾದ ಕೆ. ಭುವನಾಭಿರಾಮ ಉಡುಪರವರು ಧ್ವಜಾರೋಹಣ ಗೈದರು.

   ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರುರವರು ದೀಪ ಬೆಳಗಿಸಿ ಕ್ರೀಡಾ ಕಾರ್ಯಕ್ರಮ ಉದ್ಘಾಟಿಸಿದರು.

   ವೇದಿಕೆಯಲ್ಲಿ ಅತಿಥಿಗಳಾಗಿ ಶಾರದಾ ಸೆಂಟ್ರಲ್ ಸ್ಕೂಲಿನ ಪ್ರಾಂಶುಪಾಲರಾದ ಜಿತೇಂದ್ರ ವಿ ರಾವ್, ಮುಲ್ಕಿ ದೇವಸ್ಥಾನದ ಮೊಕ್ತೇಸರರಾದ ಭಾಸ್ಕರ್ ಆರ್ ಶೆಟ್ಟಿಗಾರ್, ರಾಜೇಶ್ ಶೆಟ್ಟಿಗಾರ್, ವಾಸುದೇವ ಶೆಟ್ಟಿಗಾರ್, ಸದಾಶಿವ ಗೋಳಿಜೋರ, ದ.ಕ‌. ಪದ್ಮಶಾಲಿ ಕ್ರೀಡಾ ಸಂಚಾಲಕರು, ನಾಲ್ಕು ಮಾಗಣೆಯ ಗುರಿಕಾರರು, ದೇವಸ್ಥಾನದ ಅರ್ಚಕವೃಂದ, ಯುವ ವೇದಿಕೆಯ ಪದಾಧಿಕಾರಿಗಳು ಹಾಗೂ ಮುಲ್ಕಿ ದೇವಸ್ಥಾನದ  ನಾಲ್ಕು ಮಾಗಣೆಯ  ಸದಸ್ಯರು ಉಪಸ್ಥಿತರಿದ್ದರು.

    ಯುವ ವೇದಿಕೆಯ ಅಧ್ಯಕ್ಷರಾದ ಹರೀಶ್ ಬಿ ಪದ್ಮಶಾಲಿ  ಸ್ವಾಗತಿಸಿದರು.

   ಕುಶಲ ಶೆಟ್ಟಿಗಾರ್ ಪ್ರಾರ್ಥಿಸಿದರು. ಹರೀಶ್ ಶೆಟ್ಟಿಗಾರ್    ಶಿಮಂತೂರು ವಂದಿಸಿದರು. ಹರಿರಾಜ ಶೆಟ್ಟಿಗಾರ್ ಕುಜಿಂಗಿರಿ ಕಾರ್ಯಕ್ರಮ ನಿರೂಪಿಸಿದರು.

  ಕ್ರೀಡಾಳುಗಳಿಗೆ ವಿವಿಧ ರೀತಿಯ ಕ್ರೀಡಾ ಸ್ಪರ್ಧೆ ಜರಗಿತು.  ಪದ್ಮಶಾಲಿ ಸಮಾಜದ ಮಕ್ಕಳು ಮಹಿಳೆಯರು ಪುರುಷರು ಎಲ್ಲರೂ ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.