• Home  
  • ಉಚ್ಚಿಲ : ರಿಯಲ್ ಎಸ್ಟೇಟ್ ಉದ್ಯಮಿಯಿಂದ ಮಹಿಳೆಯ ಕೊಲೆ ಯತ್ನ, ಬಂಧನ (Uchila: Real estate businessman attempts to murder woman, arrested)
- ಅಪರಾಧ

ಉಚ್ಚಿಲ : ರಿಯಲ್ ಎಸ್ಟೇಟ್ ಉದ್ಯಮಿಯಿಂದ ಮಹಿಳೆಯ ಕೊಲೆ ಯತ್ನ, ಬಂಧನ (Uchila: Real estate businessman attempts to murder woman, arrested)

Share: FILE PHOTO ಉಚ್ಚಿಲ : ರಿಯಲ್ ಎಸ್ಟೇಟ್ ಉದ್ಯಮಿಯಿಂದ ಮಹಿಳೆಯ ಕೊಲೆ ಯತ್ನ, ಬಂಧನ (Uchila) ಉಚ್ಚಿಲ :  ಆಂದ್ರ ಪ್ರದೇಶದ ಹೈದರಾಬಾದಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ವ್ಯಕ್ತಿಯೋರ್ವರು ತನ್ನೊಂದಿಗೆ ಅಲ್ಲಿಯೇ ಉದ್ಯಮದಲ್ಲಿ ಭಾಗಿಯಾಗಿದ್ದ ಉಚ್ಚಿಲ ಮೂಲದ ಮಹಿಳೆಯೋರ್ವಳನ್ನು ಕೊಲ್ಲುವ ಯತ್ನ ನಡೆಸಿದ ಘಟನೆ ಉಚ್ಚಿಲದಲ್ಲಿ ಘಟಿಸಿದೆ.  ಹೈದರಾಬಾದ್‌ನಲ್ಲಿ ಉಚ್ಚಿಲದ ನಿವಾಸಿ ಮಹಿಳೆಯೊಂದಿಗೆ ಎರಡು ವರ್ಷ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ಆರೋಪಿ ವಿಶ್ವನಾಥ ನಾಯ್ಡು ಎಂಬಾತ ಮಹಿಳೆಗೆ ತಾನು ನಿನ್ನನ್ನು  ಪ್ರೀತಿಸುತ್ತಿರುವುದಾಗಿಯೂ, ನೀನು […]

(Uchila) ಉಚ್ಚಿಲ :  ಆಂದ್ರ ಪ್ರದೇಶದ ಹೈದರಾಬಾದಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ವ್ಯಕ್ತಿಯೋರ್ವರು ತನ್ನೊಂದಿಗೆ ಅಲ್ಲಿಯೇ ಉದ್ಯಮದಲ್ಲಿ ಭಾಗಿಯಾಗಿದ್ದ ಉಚ್ಚಿಲ ಮೂಲದ ಮಹಿಳೆಯೋರ್ವಳನ್ನು ಕೊಲ್ಲುವ ಯತ್ನ ನಡೆಸಿದ ಘಟನೆ ಉಚ್ಚಿಲದಲ್ಲಿ ಘಟಿಸಿದೆ.

 ಹೈದರಾಬಾದ್‌ನಲ್ಲಿ ಉಚ್ಚಿಲದ ನಿವಾಸಿ ಮಹಿಳೆಯೊಂದಿಗೆ ಎರಡು ವರ್ಷ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ಆರೋಪಿ ವಿಶ್ವನಾಥ ನಾಯ್ಡು ಎಂಬಾತ ಮಹಿಳೆಗೆ ತಾನು ನಿನ್ನನ್ನು  ಪ್ರೀತಿಸುತ್ತಿರುವುದಾಗಿಯೂ, ನೀನು ನಿನ್ನ ಗಂಡನಿಗೆ  ವಿಚ್ಛೇದನ ನೀಡಿ, ತನ್ನೊಂದಿಗೆ ಬರುವಂತೆಯೂ, ತಾನು ತನ್ನ ಹೆಂಡತಿಗೆ ಡೈವೋರ್ಸ್‌ ನೀಡುವುದಾಗಿಯೂ ಹೇಳುತ್ತಿದ್ದನು.

 ಅದಕ್ಕೆ ಒಪ್ಪದೆ ಇದ್ದುದಕ್ಕೆ ಮಹಿಳೆಯ ಮನೆಯ ಬಾಗಿಲು ದೂಡಿ ಅಕ್ರಮ ಪ್ರವೇಶಿಸಿ ಆಕೆಯ ಕುತ್ತಿಗೆ ಹಿಡಿದು ಕೊಲ್ಲುವ ಯತ್ನ ನಡೆಸಿದ್ದು, ಆ ಸಂದರ್ಭ ಮಹಿಳೆಯ ಗಂಡ ಮತ್ತಿತರರು ಬಂದಾಗ ಆರೋಪಿಯು ಓಡಿ ಹೋದ ಘಟನೆಯು ನಡೆದಿದೆ.

ಹೈದರಾಬಾದಿನಲ್ಲಿ ಇರುವಾಗ ಆರೋಪಿ ಮಹಿಳೆಗೆ ತನ್ನೊಂದಿಗೆ ಬಾರದಿದ್ದರೆ ನಿನ್ನನ್ನು ಸಾಯಿಸಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿ ಕೊಲೆ ಬೆದರಿಕೆ ಹಾಕುತ್ತಿದ್ದ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.

 ಘಟನೆಯ ಬಳಿಕ ತಂಗಿದ್ದ ಆರೋಪಿಯನ್ನು ಪಡುಬಿದ್ರಿ ಠಾಣಾಧಿಕಾರಿ ಶಕ್ತಿವೇಲು ಹಾಗೂ ಸಿಬ್ಬಂದಿಗಳು  ಬಂಧಿಸಿದ್ದಾರೆ.

ಆರೋಪಿಗೆ ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.