• Home  
  • ಹೆಜಮಾಡಿ ಮದ್ಯವರ್ಜನ ಶಿಬಿರ ಸಮಾರೋಪ – ಇಂದಿನಿಂದ ಹೊಸ ಜೀವನ ಆರಂಭಿಸಿ : ಶಾಸಕ ಗುರ್ಮೆ (Hejamady alcohol abstinence camp concludes – Start a new life from today: MLA Gurme)
- ಪ್ರಚಲಿತ - ಸಂಘ, ಸಂಸ್ಥೆಗಳು - ಸನ್ಮಾನ, ಅಭಿನಂದನೆ

ಹೆಜಮಾಡಿ ಮದ್ಯವರ್ಜನ ಶಿಬಿರ ಸಮಾರೋಪ – ಇಂದಿನಿಂದ ಹೊಸ ಜೀವನ ಆರಂಭಿಸಿ : ಶಾಸಕ ಗುರ್ಮೆ (Hejamady alcohol abstinence camp concludes – Start a new life from today: MLA Gurme)

Share:  ಹೆಜಮಾಡಿ ಮದ್ಯವರ್ಜನ ಶಿಬಿರ ಸಮಾರೋಪ – ಇಂದಿನಿಂದ ಹೊಸ ಜೀವನ ಆರಂಭಿಸಿ : ಶಾಸಕ ಗುರ್ಮೆ (Hejamadi) ಹೆಜಮಾಡಿ : ಮದ್ಯವರ್ಜನ ಶಿಬಿರದ ಶಿಬಿರಾರ್ಥಿಗಳಾಗಿ ಭಾಗವಹಿಸಿ ತಾವು ಸಮಾಜದ ಮುಖ್ಯ ವಾಹಿನಿಗೆ ಬರುವಲ್ಲಿ ಇಂದಿನಿಂದಲೇ ಹೊಸ ಜೀವನ ಆರಂಭಿಸಬೇಕು. ಏನೇ ಸಮಸ್ಯೆಯಾದರೂ ಪರಿಹಾರಕ್ಕೆ ಸಿದ್ಧನಿದ್ದೇನೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಹೆಜಮಾಡಿ ಶ್ರೀ ನಾರಾಯಣಗುರು ಸಭಾಭವನದಲ್ಲಿ ಬುಧವಾ ಕಾಪು ತಾಲೂಕು ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿಯ ಆಶ್ರಯದಲ್ಲಿ 8 ದಿನಗಳ ಕಾಲ […]

(Hejamadi) ಹೆಜಮಾಡಿ : ಮದ್ಯವರ್ಜನ ಶಿಬಿರದ ಶಿಬಿರಾರ್ಥಿಗಳಾಗಿ ಭಾಗವಹಿಸಿ ತಾವು ಸಮಾಜದ ಮುಖ್ಯ ವಾಹಿನಿಗೆ ಬರುವಲ್ಲಿ ಇಂದಿನಿಂದಲೇ ಹೊಸ ಜೀವನ ಆರಂಭಿಸಬೇಕು. ಏನೇ ಸಮಸ್ಯೆಯಾದರೂ ಪರಿಹಾರಕ್ಕೆ ಸಿದ್ಧನಿದ್ದೇನೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.

ಹೆಜಮಾಡಿ ಶ್ರೀ ನಾರಾಯಣಗುರು ಸಭಾಭವನದಲ್ಲಿ ಬುಧವಾ ಕಾಪು ತಾಲೂಕು ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿಯ ಆಶ್ರಯದಲ್ಲಿ 8 ದಿನಗಳ ಕಾಲ ನಡೆದ 1951ನೇ ಮದ್ಯವರ್ಜನ ಶಿಬಿರದ ನವಜೀವನ ಸಮಾರಂಭವನ್ನು ಉದ್ದೀಪನಗೊಳಿಸಿ ಅವರು ಮಾತನಾಡಿದರು.

ಕುಟುಂಬದ ನಿರೀಕ್ಷೆ ಹುಸಿಗೊಳಿಸದಿರಿ: ಸಮಾರಂಭದ ಮುಖ್ಯ ಅತಿಥಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಪುನರ್ ಜೀವನ ಆರಂಭಿಸಿರುವ ನೀವು ಕುಟುಂಬದ ನಿರೀಕ್ಷೆ ಹುಸಿಗೊಳಿಸದಿರಿ. ಸಮಾಜದಲ್ಲಿ ಗೌರವಯುತವಾಗಿ ಬಾಳಿ ಎಂದರು.

ಸಮಿತಿಯ ಗೌರವಾಧ್ಯಕ್ಷ ದಯಾನಂದ ಹೆಜ್ಮಾಡಿ ಅಧ್ಯಕ್ಷತೆ ವಹಿಸಿದ್ದರು.

ಸನ್ಮಾನ: ಶಿಬಿರವನ್ನು ಯಶಸ್ವಿಯಾಗಿ ಮುನ್ನಡೆಸಿದ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್‌ರವರನ್ನು ಸನ್ಮಾನಿಸಲಾಯಿತು.

  ವೇದಿಕೆಯ ಜಿಲ್ಲಾ ಸಂಘಟನಾ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ಮಾಜಿ ಅಧ್ಯಕ್ಷ ದೇವದಾಸ್ ಹೆಬ್ಬಾರ್, ಕಾಪು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಶಿಬಿರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿಪಂ ಮಾಜಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ಹೆಜಮಾಡಿ ಗ್ರಾಪಂ ಅಧ್ಯಕ್ಷೆ ರೇಷ್ಮಾ ಎ.ಮೆಂಡನ್, ವೇದಿಕೆಯ ಜಿಲ್ಲಾ ಸಮಿತಿಯ ಮಾಜಿ ಅಧ್ಯಕ್ಷ ನವೀನ್ ಅಮೀನ್, ಸದಸ್ಯರಾದ ಉದಯಕುಮಾರ್ ಶೆಟ್ಟಿ ಇನ್ನ ಮತ್ತು ಸುಧಾಕರ ಕರ್ಕೇರ, ಹೆಜಮಾಡಿ ಒಕ್ಕೂಟದ ಅಧ್ಯಕ್ಷೆ ಆಶಾ ಪ್ರಾಣೇಶ್, ಗಣೇಶ್ ಆಚಾರ್ಯ, ಕಸಾಪ ತಾಲೂಕು ಅಧ್ಯಕ್ಷ ಪುಂಡಲೀಕ ಮರಾಠೆ, ಪ್ರಮುಖರಾದ ರಾಘವೇಂದ್ರ ಶೆಟ್ಟಿ, ನಾಗರಾಜ ಶೆಟ್ಟಿ, ಮೋಹನ್, ಶಂಕರ್ ಸೂಡ, ವಿದ್ಯಾಧರ್ ಮುಖ್ಯ ಅತಿಥಿಗಳಾಗಿದ್ದರು.

ಕಾಪು ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ ಸ್ವಾಗತಿಸಿದರು. ಗಣೇಶ್ ಅಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಸ್ಟಿಸ್ ಕೆಎಸ್ ಹೆಗ್ಡೆ ಚಾರಿಟೇಬಲ್ ಟ್ರಸ್ಟ್, ನವಜೀವನ ಸಮಿತಿ, ಶೌರ್ಯ ವಿಪತ್ತು ನಿರ್ವಹಣಾ ಸಮಿತಿ, ಹೆಜಮಾಡಿ ಗ್ರಾಪಂ, ಹೆಜಮಾಡಿ ಬಿಲ್ಲವರ ಸಂಘ, ಹಾಲು ಉತ್ಪಾದಕರ ಸಂಘ, ಕರಾವಳಿ ಯುವಕ ಯುವತಿ ವೃಂದ, ಜೈಕರ್ನಾಟಕ ಯುವ ಸಂಸ್ಥೆಗಳ ಸಹಯೋಗದೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ ನಡೆದ ಶಿಬಿರದಲ್ಲಿ 65 ಕ್ಕೂ ಅಧಿಕ ಮಂದಿ ಶಿಬಿರಾರ್ಥಿಗಳಾಗಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.