ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲ ಚಂದ್ರಮಂಡಲ ರಥ ಹಸ್ತಾಂತರ
ಶಿಲ್ಪಿ ಮಾಧವ ಆಚಾರ್ಯರಿಂದ ದ.ಕ ಮೊಗವೀರ ಮಹಿಳಾ ಮಹಾಜನ ಸಂಘ, ಬೆಳ್ಳಿ ರಥ ಸಮಿತಿಗೆ ಹಸ್ತಾಂತರ
(Uchila) ಉಚ್ಚಿಲ: ದ.ಕ ಮೊಗವೀರ ಮಹಾಜನ ಸಂಘ ಸಂಚಾಲಿತ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ದ.ಕ ಮೊಗವೀರ ಮಹಿಳಾ ಮಹಾಜನ ಸಂಘ ಮತ್ತು ಬೆಳ್ಳಿ ರಥ ಸಮಿತಿಯ ವತಿಯಿಂದ ಸಮರ್ಪಣೆ ಮಾಡಲಿರುವ ಚಂದ್ರ ಮಂಡಲ ರಥವನ್ನು ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಅವರ ಪೌರೋಹಿತ್ಯದಲ್ಲಿ ರಥ ಶಿಲ್ಪಿ ಮಾಧವ ಆಚಾರ್ಯರವರು ರಥ ಹಸ್ತಾಂತರ ಕಾರ್ಯಕ್ರಮ ಶನಿವಾರ ಸಂಪನ್ನಗೊಂಡಿತು.
ಸುಮಾರು ರೂ.ಮೂವತ್ತೈದು ಲಕ್ಷ ವೆಚ್ಚದಲ್ಲಿ ತಯಾರಿಸಿದ ಚಂದ್ರ ಮಂಡಲ ರಥವನ್ನು ಶಿಲ್ಪಿ ಮಾಧವ ಆಚಾರ್ಯರು ದ.ಕ ಮೊಗವೀರ ಮಹಿಳಾ ಮಹಾಜನ ಸಂಘ ಮತ್ತು ಬೆಳ್ಳಿ ರಥ ಸಮಿತಿಯವರ ನೇತೃತ್ವದಲ್ಲಿ ನಿರ್ಮಿಸಿದ್ದರು.
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಗಿರಿಧರ ಸುವರ್ಣ, ದ.ಕ ಮಹಿಳಾ ಮಹಾಜನ ಸಂಘದ ಅಧ್ಯಕ್ಷೆ ಕವಿತಾಶರತ್, ಕಾರ್ಯದರ್ಶಿ ಪೂರ್ಣಿಮಾ ಚಂದ್ರಶೇಖರ್, ಬೆಳ್ಳಿ ರಥ ಸಮಿತಿಯ ಅಧ್ಯಕ್ಷೆ ಉಷಾರಾಣಿ, ಕಾರ್ಯದರ್ಶಿ ಶುಭಾ ದಿನೇಶ್, ಸಮಿತಿಯವರಾದ ನಾರಾಯಣ ಕರ್ಕೇರಾ, ಸಂಜೀವ ಬಂಗೇರ, ಮೋಹನ್ ಬಂಗೇರ, ಕಾಪು ನಾಲ್ಕು ಪಟ್ನ ಅಧ್ಯಕ್ಷ ಮನೋಜ್ ಕಾಂಚನ್, ನಿಕಟ ಪೂರ್ವ ಅಧ್ಯಕ್ಷ ವಾಸುದೇವ ಸಾಲ್ಯಾನ್, ಸುಜಿತ್ ಸಾಲ್ಯಾನ್, ನಿಶಾನ್ ಕುಂದರ್ ಏರ್ಮಾಳು, ಶೇಖರ್ ಪುತ್ರನ್ ಮತ್ತಿತರರು ಉಪಸ್ಥಿತರಿದ್ದರು.
ರಥದ ಶಿಖರಕ್ಕೆ ದಿನೇಶ್ ಎರ್ಮಾಳುರವರು ಕೊಡುಗೆಯಾಗಿ ನೀಡಿರುವ ಚಿನ್ನದ ಛತ್ರಿಯನ್ನು ಈ ಸಂದರ್ಭದಲ್ಲಿ ಸಮರ್ಪಿಸಲಾಯಿತು.

