• Home  
  • ಕಾಪು ಮಾರಿಯಮ್ಮ ಸನ್ನಿದಾನಕ್ಕೆ ಸಂಸದ ಬಿ ವೈ ರಾಘವೇಂದ್ರ ಕುಟುಂಬ ಭೇಟಿ (MP BY Raghavendra’s family visits Kaup Mariyamma’s shrine)
- ಧಾರ್ಮಿಕ - ರಾಜಕೀಯ

ಕಾಪು ಮಾರಿಯಮ್ಮ ಸನ್ನಿದಾನಕ್ಕೆ ಸಂಸದ ಬಿ ವೈ ರಾಘವೇಂದ್ರ ಕುಟುಂಬ ಭೇಟಿ (MP BY Raghavendra’s family visits Kaup Mariyamma’s shrine)

Share:  ಕಾಪು ಮಾರಿಯಮ್ಮ ಸನ್ನಿದಾನಕ್ಕೆ ಸಂಸದ ಬಿ ವೈ ರಾಘವೇಂದ್ರ ಕುಟುಂಬ ಭೇಟಿ  ಪ್ರಧಾನ ಅರ್ಚಕ ವೇ. ಮೂ. ಶ್ರೀನಿವಾಸ ತಂತ್ರಿ ಕಲ್ಯರವರಿಂದ ವಿಷೇಶ ಪ್ರಾರ್ಥನೆ (Kaup)ಕಾಪು: ಒಂದು ವರ್ಷದ ಹಿಂದೆ ಸಂಪೂರ್ಣ ನವೀಕರಣಗೊಂಡು ಕಂಗೊಳಿಸುತ್ತಿರುವಕಾಪು ಶ್ರೀ ಹೊಸ ಮಾರಿಗುಡಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ ವೈ ರಾಘವೇಂದ್ರ ಅವರು ಇಂದು ಕುಟುಂಬ ಸಮೇತರಾಗಿ ಭೇಟಿ ನೀಡಿ ಉಚ್ಚಂಗಿ ಸಹಿತ ಮಾರಿಯಮ್ಮನ ದರುಶನ ಪಡೆದರು.   ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮತ್ತು […]

(Kaup)ಕಾಪು: ಒಂದು ವರ್ಷದ ಹಿಂದೆ ಸಂಪೂರ್ಣ ನವೀಕರಣಗೊಂಡು ಕಂಗೊಳಿಸುತ್ತಿರುವಕಾಪು ಶ್ರೀ ಹೊಸ ಮಾರಿಗುಡಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ ವೈ ರಾಘವೇಂದ್ರ ಅವರು ಇಂದು ಕುಟುಂಬ ಸಮೇತರಾಗಿ ಭೇಟಿ ನೀಡಿ ಉಚ್ಚಂಗಿ ಸಹಿತ ಮಾರಿಯಮ್ಮನ ದರುಶನ ಪಡೆದರು.

  ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮತ್ತು ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ  ಕೆ. ವಾಸುದೇವ ಶೆಟ್ಟಿಯವರು ಬಿ ವೈ ರಾಘವೇಂದ್ರರವರನ್ನು  ಆತ್ಮೀಯವಾಗಿ ಭರಮಾಡಿಕೊಂಡು ಮಾರಿಗುಡಿಯ ವತಿಯಿಂದ ಸನ್ಮಾನಿಸಿದರು.

 ಮಾರಿಗುಡಿಯ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಅವರು ವ್ಯವಸ್ಥಾಪನಾ ಸಮಿತಿ ಅಭಿವೃದ್ಧಿ ಸಮಿತಿಯ ಸಮ್ಮುಖದಲ್ಲಿ ಪ್ರಾರ್ಥಿಸಿ ಮಾರಿ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿ ಗೌರವಿಸಿದರು.

 ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ದೇವಳದ ಪ್ರಬಂಧಕ ಗೋವರ್ಧನ್ ಸೇರಿಗಾರ್, ಸಿಬ್ಬಂದಿ ಲಕ್ಷ್ಮಣ್ ಶೆಟ್ಟಿ ಮಂಡೇಡಿ ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು. ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.